'
ಕಾಸರಗೋಡು: ರಾಜ್ಯದ ಜನತೆಯ ಸಮಗ್ರ ಅಭಿವೃದ್ಧಿಗೆ ರತ್ನಗಂಬಳಿ ಹಾಸುತ್ತಿರುವ ಕೇರಳ ಇನ್‍ಫ್ರಾಸ್ಟ್ರಕ್ಚರ್ ಇನ್‍ವೆಸ್ಟ್ ಮೆಂಟ್ ಫಂಡ್ ಬೋರ್ಡ್ (ಕಿಫ್ ಬಿ) ನ ಬಗ್ಗೆ ಅರಿತುಕೊಳ್ಳುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಮಂದಿಗೂ ಅವಕಾಶ ತೆರೆದುಕೊಳ್ಳುತ್ತಿದೆ. ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಪ್ರಗತಿ ಸಾಧಿಸುತ್ತಿರುವ ಮತ್ತು ಕಿಫ್‍ಬಿ ಆರ್ಥಿಕ ಲಭ್ಯತೆ ಖಚಿತಪಡಿಸುವ ಯೋಜನೆಗಳ ಅಭಿವೃದ್ಧಿ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ ಮಂಗಳವಾರ ಆರಂಭಗೊಂಡಿತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ಉದ್ಘಾಟಿಸಿದರು. ಮೂರು ದಿನಗಳ ಕಾಲ ನಡೆಯುವ ಪ್ರದರ್ಶನದಲ್ಲಿ ಅಭಿವೃದ್ಧಿ ಯೋಜನೆಗಳ ವಿವಿಧ ದೃಶ್ಯರೂಪಗಳು, ತ್ರಿಮಾನ ಮಾದರಿಗಳು, ವೆಲ್ಚ್ವರ್ ರಿಯಾಲಿಟಿ, ವೀಡಿಯೋಗಳು, ಆನಿಮೆಷನ್, ಜಿಯಾಗ್ರಾಫಿಕ್ ಇನ್ ಫಾರ್ಮೇಷನ್ ಸಿಸ್ಟಂ, ಬಿಲ್ಡಿಂಗ್ ಇನ್ ಫಾರ್ಮೇಷನ್ ಮಾದರಿ ಇತ್ಯಾದಿ ಇರಲಿದೆ. ವಿವಿಧ ಇಲಾಖೆಗಳಮೂಲಕ ರಾಜ್ಯದಲ್ಲಿ 50 ಸಾವಿರ ಕೊಟಿ ರೂ.ನ ಮೂಲಭೂತ ಸೌಲಭ್ಯ ಅನುಷ್ಠಾನ ಗೊಳಿಸುವ ಯೋಜನೆಗಳನ್ನು ಈಗಾಗಲೇ ಕಿಫ್‍ಬಿ ಸಿದ್ಧಪಡಿಸಿದೆ. ಈ ವರೆಗೆ 45,619 ಕೋಟಿ ರೂ.ನ 591 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಎಲ್ಲವಿಚಾರಗಳ ಬಗ್ಗೆ ಮಾಹಿತಿ ಈ ಪ್ರದರ್ಶನದ ಮೂಲಕ ಲಭ್ಯವಾಗಲಿದೆ.