ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕಾಸರಗೋಡು ಇದರ ಮಹಾಸಭೆ ಬೀರಂತಬೈಲ್‍ನ ಲಲಿತಕಲಾ ಸದನದಲ್ಲಿ ನಡೆಯಿತು.
ಸಭೆಯಲ್ಲಿ ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ಬಿ.ಪಿ.ವೆಂಕಟ್ರಮಣ ಅವರು ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ರಮಾಕಾಂತ ಬೇಕಲ್ ಅವರು ಭಾಗವಹಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಕೃಷ್ಣಮೂರ್ತಿ ಬೀರಂತಬೈಲು, ಮಹಿಳಾ ಸಂಘದ ಅಧ್ಯಕ್ಷೆ ಆಶಾ ರಾಧಾಕೃಷ್ಣ, ವಿವಿಧ ಉಪಸಂಘಗಳ ಪದಾ„ಕಾರಿಗಳಾದ ಪ್ರಭಾಶಂಕರ ಹೊಸದುರ್ಗ, ಪ್ರಭಾಕರ ಪಳ್ಳಿಕೆರೆ, ಸತೀಶ್ ಕೂಡ್ಲು, ಪ್ರಭಾಶಂಕರ ವಾಣಿಯಂಪಾರೆ, ಕಮಲಾಕ್ಷ ಅಣಂಗೂರು, ಗಿರೀಶ್ ಮಾಸ್ಟರ್ ಬೇಕಲ, ವಿದ್ಯಾನಂದ ಹೂಡೆ ಕಾಸರಗೋಡು, ಹರಿಶ್ಚಂದ್ರ ಚಂದ್ರಗಿರಿ, ಶಿವರಾಮ ಚಂದ್ರಗಿರಿ, ರಮೇಶ್ ಚಿತ್ತಾರಿ, ಚಂದ್ರಹಾಸ ಚಿತ್ತಾರಿ, ನಿತಿನ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಲೋಕೇಶ್ ಅಣಂಗೂರು ಸ್ವಾಗತಿಸಿದರು. ಕೋಶಾ„ಕಾರಿ ಬಿ.ಆರ್.ಮೂರ್ತಿ ವಂದಿಸಿದರು. ಸತೀಶ್ ಮಾಸ್ಟರ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.