ಕಾಸರಗೋಡು: ತಿರುವನಂತಪುರದ ಟಿ.ವಿ.ರಾಜಾ ಸ್ಪೋಟ್ರ್ಸ್ ಸ್ಕೂಲ್, ಕಣ್ಣೂರು ಸ್ಪೋಟ್ರ್ಸ್ ವಿಭಾಗ ನೂತನವಾಗಿ ಆರಂಭಿಸುವ ಕಾಸರಗೋಡು, ತ್ರಿಶೂರು, ಪತ್ತನಂತಿಟ್ಟ ಸ್ಪೋಟ್ರ್ಸ್ ವಿಭಾಗಗಳು ಎಂಬ ಕ್ರೀಡಾ ವಿದ್ಯಾಲಯಳಿಗೆ 6ರಿಂದ 9ರ ವರೆಗೆ, ಪ್ಲಸ್‍ವನ್, ವಿ.ಎಚ್.ಎಸ್.ಇ. ತರಗತಿಗಳಿಗೆ ಮಕ್ಕಳನ್ನು ಆಯ್ಕೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಕ್ರೀಡಾ ಯುವಜನ ಕಾರ್ಯಾಲಯದ ವತಿಯಿಂದ ಫೆ.14ರಂದು ಬೆಳಗ್ಗೆ 7.30ಕ್ಕೆ ಕಾಸರಗೋಡು ಪೆರಿಯ ನವೋದಯವಿದ್ಯಾಲಯದಲ್ಲಿ ಸೆಲೆಕ್ಷನ್ ಟ್ರಯಲ್ ನಡೆಯಲಿದೆ.
ಅತ್ಲೆಟಿಕ್ಸ್, ಬಾಸ್ಕೆಟ್ ಬಾಲ್, ಫುಟ್ ಬಾಲ್, ವಾಲಿಬಾಲ್, ಥಾಯ್ಕೋಡ, ರೆಸ್ಲಿಂಗ್, ಹಾಕಿ, ವೈಟ್ ಲಿಫ್ಟಿಂಗ್, ಬಾಕ್ಸಿಂಗ್, ಜ್ಯೂಡೋ,ಕ್ರಿಕೆಟ್(ಹುಡುಗಿಯರು) ಎಂಬವಿಭಾಗಗಳಲ್ಲಿ ಆಸಕ್ತ ಮಕ್ಕಳು ಜನನ ದಿನಾಂಕದ ದಾಖಲೆಗಳು, ಜಿಲ್ಲಾ-ರಾಜ್ಯ-ರಾಷ್ಟ್ರೀಯ ಮಟ್ಟದಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅರ್ಹತಾಪತ್ರ, ಫೆÇಟೋ ಇತ್ಯಾದಿ ಟ್ರಯಲ್ ಸೆಲೆಕ್ಷನ್ ವೇಳೆ ಹಾಜರುಪಡಿಸುವಂತೆ ಪ್ರಕಟಣೆ ತಿಳಿಸಿದೆ.