ಕಾಸರಗೋಡು: ರಾಜ್ಯ ಕೃಷಿ ಯಂತ್ರೀಕೃತ ಮಿಷನ್ ಮತ್ತು ಕೃಷಿ ಇಲಾಖೆಯ ಇಂಜಿನಿಯರಿಂಗ್ ವಿಭಾಗ ವತಿಯಿಂದ ಜಾರಿಗೊಳಿಸುವ ಕೃಷಿ ಯಂತ್ರ ಸಂರಕ್ಷಣೆ ಯಜ್ಞದ ದ್ವಿತೀಯ ಹಂತದ (ಕೃಷಿ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಗಳ ಕಾರ್ಯಾಲಯದಲ್ಲಿ) ಚಟುವಟಿಕೆ ಆರಂಭಿಸಿದೆ.
ಕೃಷಿ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಕೆ.ಪಿ.ಪ್ರೀತಿ ಉದ್ಘಾಟಿಸಿದರು. ಜಿಲ್ಲಾ ಕೃಷಿ ಸಹಾಯಕ ಇಂಜಿನಿಯರ್ ಸುಹಾಸ್, ಮಿಷನ್ ಯೋಜನೆ ಇಂಜಿನಿಯರ್ ಷಿಬೀನಾ ಕೆ.ವಿ., ತರಬೇತುದಾರ ಫಿಜೋ ಪಿ.ಜೆ. ಮೊದಲಾದವರು ಉಪಸ್ಥಿತರಿದ್ದರು.
ಕೃಷಿ ಯತ್ರಗಳ ದುರಸ್ತಿ ನಡೆಸುವುದು, ವೃತ್ತಿ ಅನುಭವ ತರಬೇತಿ ನೀಡುವುದು ಇತ್ಯಾದಿ ಈ ಕಾರ್ಯಾಲಯದ ಪ್ರಧಾನ ಉದ್ದೇಶ. ಜಿಲ್ಲೆಯ 4 ಕೃಷಿಕ ಸೇವಾ ಕೇಂದ್ರಗಳಿಂದ ಮತ್ತು 11 ಕೃಷಿ ಕ್ರಿಯಾ ಸೇನೆ ಗಳಿಂದ ಆಯ್ದ 20 ಸೇವಾ ಕರ್ತರಿಗೆ 12 ದಿನಗಳ ತರಬೇತಿ ಲಭಿಸಲಿದೆ. ಜಿಲ್ಲೆಯ ಕೃಷಿ ಸೇವಾ ಕೇಂದ್ರಗಳ ಮತ್ತು ಚಟುವಟಿಕೆ ಸಕ್ರಿಯವಲ್ಲದ ಕೃಷಿಯಂತ್ರಗಳ ಭಾಗ ಸಹಿತ ತಲಪಿದರೆ ಪರಿಣತ ಮೆಕ್ಯಾನಿಕ್ ಗಳ ಮೂಲಕ 12 ದಿನಗಳ ಒಳಗಿನ ಅವಧಿಯಲ್ಲಿ ದುರಸ್ತಿ ನಡೆಸಿಕೊಡಲಾಗುವುದು. ಯಜ್ಞ ಫೆ.7 ವರೆಗೆ ಇರುವುದು.