ಕಾಸರಗೋಡು: ಇತಿಹಾಸ ಪ್ರಸಿದ್ಧ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುತ್ತಿರುವ ಕಾರ್ತಿಕ ಮಾಸಾಚರಣೆ ಹಾಗೂ ಭಜನಾ ಸಂಕೀರ್ತನೆ ಸಮಾರೋಪ ಸಮಾರಂಭ ದೇವಸ್ಥಾನದಲ್ಲಿ ಜರುಗಿತು.
ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ದೀಪಾಲಂಕಾರ ನಡೆಸಲಾಯಿತು. ಈ ಸಂದಭ್ ಓಜ ಸಾಹಿತ್ಯ ಕೂಟ ಬಂಗ್ರಮಂಜೇಶ್ವರದ ಸದಸ್ಯರಿಂದ ದೇವರ ನಾಮ ಸಂಕೀರ್ತನೆ ನಡೆಯಿತು. ಒಂದು ತಿಂಗಳ ಕಾಲ ನಿರಂತರ ರಾತ್ರಿ ಜಿಲ್ಲೆಯ ಪ್ರಸಿದ್ಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆಯೊಂದಿಗೆ ಮಹಾಕಾರ್ತಿಕ ಪೂಜೆ ನೆರವೇರಿತು.
ನೂರಾರು ಮಂದಿ ಭಕ್ತಾದಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಭಕ್ತರ ಉದಾರ ನೆರವಿನಿಂದ ಅನ್ನದಾನ ಹಾಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು.