HEALTH TIPS

ಕುಷ್ಠರೋಗ ನಿವಾರಣೆ ಪಕ್ಷಾಚರಣೆಜಿಲ್ಲೆಯಲ್ಲಿ ಆರಂಭ

Top Post Ad

Click to join Samarasasudhi Official Whatsapp Group

Qries

                             
           ಕಾಸರಗೋಡು: ಕುಷ್ಠರೋಗ ನಿವಾರಣೆ ಪಕ್ಷಾಚರಣೆ ಜಿಲ್ಲೆಯಲ್ಲಿ ಆರಂಭಗೊಡಿದೆ. ಸಾರ್ವಜನಿಕರಲ್ಲಿ ಕುಷ್ಠರೋಗ ವಿರುದ್ಧ ಜಾಗೃತಿ ಮೂಡಿಸುವ ಮತ್ತು ಸಮಾಜದಲ್ಲಿ ಅಳಿದುಳಿದಿರುವ ರೋಗಿಗಳನ್ನು ಪತ್ತೆಮಾಡಿ ಅವರನ್ನು ಸಂಪೂರ್ಣ ಚಿಕಿತ್ಸೆಗೊಳಪಡಿಸಿ, ಈ ರೋಗವನ್ನು ಬುಡಸಮೇತ ಕಿತ್ತೆಸೆಯುವ ಉದ್ದೇಶದಿಂದ ಈ ಪಕ್ಷಾಚರಣೆಗೆ ಚಾಲನೆ ಲಭಿಸಿದೆ. ಫೆ.12 ವರೆಗೆ ಜಿಲ್ಲೆಯಲ್ಲಿ ಈ ಸಂಬಂಧ ವಿವಿಧ ಚಟುವಟಿಕೆಗಳು ನಡೆಯಲಿವೆ. ಪಕ್ಷಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ಗುರುವಾರ ಅಂಬಲತ್ತರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಪುಲ್ಲೂರು-ಪೆರಿಯಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಾ ಎಸ್.ನಾಯರ್ ನೆರವೇರಿಸಿದರು.
         ಜಿಲ್ಲೆಯಲ್ಲಿ 35 ರೋಗಿಗಳು :
  ಜಿಲ್ಲೆಯಲ್ಲಿ 35 ಮಂದಿ ಕುಷ್ಠರೋಗದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮೂವರು ಮಕ್ಕಳು ಮತ್ತು ಇತರ ರಾಜ್ಯಗಳ ಕಾರ್ಮಿಕರೂ ಸೇರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ವರದಿ ತಿಳಿಸುತ್ತದೆ. ರೋಗದಿಂದ ಅಂಗವಿಕಲತೆ ಹೊಂದಿರುವ ಮೂವರನ್ನೂ ಈ ವರ್ಷ ಜಿಲ್ಲೆಯಲ್ಲಿ ಪತ್ತೆಮಾಡಲಾಗಿದೆ ಎಂದು ವರದಿ ಸೂಚಿಸುತ್ತದೆ. ಈ ಬಾರಿಯ ಪಕ್ಷಾಚರಣೆ ಜಿಲ್ಲೆಯನ್ನು ಸಂಪೂರ್ಣ ಕುಷ್ಠರೋಗ ಮುಕ್ತಗೊಳಿಸುವ ಉದ್ದೇಶಹೊಂದಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries