ನವದೆಹಲಿ: ನಿನ್ನೆ ಮಧ್ಯೆರಾತ್ರಿ ಹೊಸ ವರ್ಷನ್ನು ನಾವು ಬರಮಾಡಿಕೊಳ್ಳಲು, ಕ್ಷಣವನ್ನು ಕಣ್ಣು ತುಂಬಿ ಕೊಳ್ಳಲು ವಿಶ್ವವೇ ಸಿದ್ಧವಾಗಿರುವಂತೆ ವಿಶ್ವದ ದೊಡ್ಡ ಸರ್ಚ್ ಇಂಜಿನ್ ಗೂಗಲ್ ಹೊಸ ವರ್ಷದ ಮುನ್ನಾದಿನಕ್ಕೆ ನೂತನ ಡೂಡಲ್ ಮೆರಗು ನೀಡಿದೆ.
ಗೂಗಲ್ ತಯಾರಿಸಿದ ಹೊಸ ಡೂಡಲ್ ನಲ್ಲಿ ಕಪ್ಪೆ ಹಾಗೂ ಪಕ್ಷಿಯೊಂದು ತಲೆಗೆ ಕ್ಯಾಪ್ ಧರಿಸಿ, ನವ ವರ್ಷದ ಸ್ವಾಗತಕ್ಕೆ ಸಿದ್ಧವಾಗಿವೆ. ಇವುಗಳ ಮುಂದೆ ಬಹು ಅಂತಸ್ಥಿನ ಕಟ್ಟಡ ಇದೆ. ಈ ಚಿತ್ರವನ್ನು ನೋಡಿದರೆ ಈ ಪ್ರಾಣಿಗಳು ಹೊಸ ವರ್ಷವನ್ನು ಬರಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತತೆ ಕಾಣುತ್ತದೆ. ಅಲ್ಲದೆ ತಮ್ಮ ಎದುರು ಆಕಾಶದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಯನ್ನು ಕಣ್ಣು ತುಂಬಿಕೊಂಡಿವೆ. ಪಟಾಕಿಗಳು ಐದು ಬಣ್ಣಗಳಿಂದ ಕೂಡಿವೆ.
ವಿಶೇಷ ದಿನಗಳಲ್ಲಿ ಗೂಗಲ್ ವಿವಿಧ ರೀತಿಯ ಡೂಡಲ್ ಗಳನ್ನು ರಚಿಸುತ್ತದೆ. ಜೊತೆಗೆ ಹೊಸ ವರ್ಷದ ಸಂಭ್ರಮದ ಮೆರಗು ಹೆಚ್ಚಿಸಲು ಪರಿಚಯಿಸಿರುವ ಗೂಗಲ್ ಡೂಡಲ್ ಕೂಡ ವಿಶೇಷವಾಗಿದೆ.