ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ವಿಶಿಷ್ಟ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದು, ದೃಷ್ಟಿ ಸಮಸ್ಯೆ ಎದುರಿಸುತ್ತಿರುವವರಿಗೆ ಭಾರತೀಯ ಬ್ಯಾಂಕ್ ನೋಟ್ ಗಳನ್ನು ಗುರುತಿಸುವುದಕ್ಕೆ ಸಹಕಾರಿಯಾಗಲಿದೆ.
ಮೊಬೈಲ್ ಏಡೆಡ್ ನೋಟ್ ಐಡೆಂಟಿಫೈಯರ್-(ಮನಿ) ಹೊಸದಾಗಿ ಬಿಡುಗಡೆಯಾಗಿರುವ ಆಪ್ ನ ಹೆಸರಾಗಿದೆ. ಪ್ರಸ್ತುತ ಭಾರತೀಯ ಬ್ಯಾಂಕ್ ನೋಟ್ ಗಳಲ್ಲಿ ದೃಷ್ಟಿ ದೋಷ ಹೊಂದಿರುವವರಿಗೆ ಗುರುತಿಸಲು ಸಾಧ್ಯವಾಗುವ ವೈಶಿಷ್ಟ್ಯಗಳಿವೆ.
ಭಾರತೀಯ ಬ್ಯಾಂಕ್ ಗಳ ನೋಟ್ ಗಳನ್ನು ದೃಷ್ಟಿ ದೋಷ ಹೊಂದಿರುವವರು ಮತ್ತಷ್ಟು ಪರಿಣಾಮಕಾರಿಯಾಗಿ ಗುರುತಿಸುವುದಕ್ಕೆ ತಾಂತ್ರಿಕ ಪ್ರಗತಿ ಹೊಸತನಕ್ಕೆ ತೆರೆದುಕೊಂಡಿದೆ, ಈ ಮೂಲಕ ಅವರ ದೈನಂದಿನ ವಹಿವಾಟುಗಳಿಗೆ ಅನುಕೂಲವಾಗಲಿದೆ ಎಂದು ಆರ್ ಬಿಐ ಹೇಳಿದೆ.
ಈ ಆಪ್ ನ ವಿಶೇಷತೆಗಳೇನು, ಹೇಗೆ ಕಾರ್ಯನಿರ್ವಹಣೆ ಮಾಡಲಿದೆ?:
ಈ ಮೊಬೈಲ್ ಆಪ್ ಮಹಾತ್ಮಾ ಗಾಂಧಿ ಸರಣಿ ಹಾಗೂ ಮಹಾತ್ಮಾ ಗಾಂಧಿ ಹೊಸ ಸರಣಿಗಳ ಬ್ಯಾಂಕ್ ನೋಟ್ ಗಳನ್ನು ಗುರುತಿಸುವ, ನೋಟಿನ ಮುಂಭಾಗ, ಹಿಮ್ಮುಖಗಳನ್ನು ಗುರುತಿಸುವ, ಅಥವಾ ಅರ್ಧ ಮಡಚಿದ ನೋಟುಗಳನ್ನು ಗುರುತಿಸುವ ಸಾಮಥ್ರ್ಯ ಹೊಂದಿದೆ.
ಹಿಂದಿ, ಇಂಗ್ಲೀಷ್ ಭಾಷೆಗಳ ಧ್ವನಿಯಲ್ಲಿ ನೋಟುಗಳ ಮುಖಬೆಲೆಯನ್ನೂ ಗುರುತಿಸುವ ಸಾಮಥ್ರ್ಯವನ್ನು ಹೊಂದಿರುವುದು ಈ ಆಪ್ ನ ವೈಶಿಷ್ಟ್ಯವಾಗಿದ್ದು, ಧ್ವನಿ ನಿಯಂತ್ರಿತ ನ್ಯಾವಿಗೆ?ಷನ್ ಹೊಂದಿದೆ.
ಈ ಆಪ್ ಅಂತರ್ಜಾಲ ಸೇವೆಯ ಹೊರತಾಗಿಯೂ ಆಫ್ ಲೈನ್ ನಲ್ಲಿ ಈ ಆಪ್ ಕಾರ್ಯನಿರ್ವಹಣೆ ಮಾಡಲಿದೆ.