ಇಗ್ಲೆಂಡ್: ಇದೀಗ ಜಗತ್ತಿನೆಲ್ಲೆಡೆ ಕೊರೋನಾ ವೈರಸ್ ಭೀತಿ ಹರಡಿದೆ. ಆದರೆ ಇಲ್ಲೊಂದು ತಮಾಷೆ ಇದೆ, ಅದೆಂದರೆ ಈ ಜಗತ್ತಿನಲ್ಲಿ ಎರಡು ಕೊರೋನಾಗಳಿದೆ! ಇದರಲ್ಲಿ ಒಂದು ನಿಮಗೆ ಹ್ಯಾಂಗೋವರ್ ತರಿಸಬಲ್ಲದು, ಇನ್ನೊಂದು ಸಾವನ್ನ ತರಬಹುದು. ಆದರೆ ಬಹುತೇಕರಿಗೆ ಈ ಎರಡು ಕೊರೋನಾಗಳ ನಡುವೆ ವ್ಯತ್ಯಾಸಗಳಿರುವುದು ತಿಳಿದಿಲ್ಲ!
ಫಾಕ್ಸ್ ನ್ಯೂಸ್ ಪ್ರಕಾರ, ಇತ್ತೀಚಿನ ಗೂಗಲ್ ಟ್ರೆಂಡ್ಸ್ಗಳ ಅಂಕಿಅಂಶಗಳಂತೆ ಕೊರೋನಾ ಬಿಯರ್ ವೈರಸ್" ಗಾಗಿನ ಸರ್ಚ್ ಗಳು ಹೆಚ್ಚಾಗುತ್ತಿದೆ. ಕೊರೋನಾ ವೈರಸ್ ಖಾಯಿಲೆ ಹಾಗೂ ಜನಪ್ರಿಯ ಬಿಯರ್ ಬ್ರ್ಯಾಂಡ್ ಕೊರೋನಾಗಳ ನಡುವೆ ಜನರು ಗೊಂದಲಕ್ಕೊಳಗಾಗಿದ್ದಾರೆ. ಪೂರ್ವ ಯುರೋಪಿಯನ್ ರಾಷ್ಟ್ರವಾದ ಎಸ್ಟೋನಿಯಾ ಈ :ಕೊರೋನಾ ಬಿಯರ್ ವೈರಸ್" ಹುಡುಕಾಟದಲ್ಲಿ ಅತ್ಯಂತ ಮುಂಚೂಣಿಯಲ್ಲಿದೆ.
ಅದೃಷ್ಟವಶಾತ್, ಎರಡು ಕೊರೋನಾಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ವಿವರಿಸುವ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ರಿಯಲ್‍ಬೋಗಾ ಮಾಶಿಯಾನ್ ಎಂಬ ವ್ಯಕ್ತಿ ಈಗೊಂದಲದ ಬಗೆಗೆ ತುಸು ಬೆಳಕು ಮೂಡಿಸಿದ್ದಾರೆ. ಇದೀಗ ನೀವು ತೀವ್ರ ನ್ಯುಮೋನಿಯಾದಿಂದ ಸಾಯುವ ಬಗ್ಗೆ ಚಿಂತಿಸದೆ ಸಾವಕಾಶವಾಗಿ ಬಿಯರ್ ಹೀರುತ್ತಾ ಆನಂದದಲ್ಲಿ ತೇಲಾಡಲು ಅಡ್ಡಿ ಇಲ್ಲ ಎಂದು ಇದರಿಂದ ಖಚಿತವಾಗಿದೆ.