HEALTH TIPS

ಕಾಸರಗೋಡು ಜಿಲ್ಲಾ ಪೆÇಲೀಸ್ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ

   
        ಕಾಸರಗೋಡು: ರಾಜ್ಯದ ಪೆÇಲೀಸ್ ಪಡೆಯನ್ನು  ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯತ್ನ ನಡೆಸುತ್ತಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಅವರು ಕಾಸರಗೋಡು ಪಾರೆಕಟ್ಟೆಯಲ್ಲಿ ಜಿಲ್ಲಾ ಪೆÇಲೀಸ್ ಸಹಕಾರಿ ಸಂಘದ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
       ಈ ಹಿಂದಿನ ಪೆÇಲೀಸ್ ವ್ಯವಸ್ಥೆಗಿಂತ ಇಂದು ಹೆಚ್ಚಿನ ಬದಲಾವಣೆ ಉಂಟಾಗಿದೆ. ಪ್ರತಿ ಠಾಣೆ ವ್ಯಾಪ್ತಿಯಲ್ಲೂ ಸಹಾಯ ಯಾಚಿಸಿ ಬರುವವರನ್ನು ಅವರ ಅಗತ್ಯಕ್ಕನುಸಾರವಾಗಿ ಸಹಾಯ ಒದಗಿಸುವ ಜನಪರ ನೀತಿ ಇಂದಿನ ಪೆÇಲೀಸರು ಜಾರಿಗೊಳಿಸುತ್ತಿದ್ದಾರೆ. ಅಪರಾಧಿಗಳ ವಿರುದ್ಧ ನಿಷ್ಪಕ್ಷಪಾತಿ ಧೋರಣೆ, ಎಲ್ಲರಿಗೂ ಸಮಾನನೀತಿ ಜಾರಿಗೊಳಿಸುವ ಹೊಣೆಗಾರಿಕೆಯಿಂದ ಪೆÇಲೀಸರು ತಮ್ಮ ಕರ್ತವ್ಯ ನಡೆಸಬೇಕು. ಪೆÇಲೀಸರ ಶಿಸ್ತಿನ ಕರ್ತವ್ಯಕ್ಕೆ ಸಹಕಾರಿ ಸಂಘಗಳಂತಹ ಸಂಘಟನೆಗಳು ಹೆಚ್ಚಿನ  ಬಲನೀಡುತ್ತವೆ. ದೈನಂದಿನ ಅಗತ್ಯಗಳಿಗೆ ಹೆಚ್ಚುವರಿ ಯೋಜನೆಗಳ ಜಾರಿ ಮೂಲಕ ಪೂರಕ ವಾತಾವರಣ ಲಭಿಸುತ್ತದೆ ಎಂದು ತಿಳಿಸಿದರು.
     ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕಟ್ಟಡದ ಗುತ್ತಿಗೆದಾರ ಎಂ.ಎಸ್.ಪ್ರದೀಪ್, ಸಂಘದ ಮಾಜಿ ಪದಾಧಿಕಾರಿಗಳಾದ ಎ.ಬಾಲಕೃಷ್ಣನ್ ನಾಯರ್, ಕೆ.ಕೆ.ರಾಘವನ್, ವಿ.ಪಿ.ಕೋರನ್, ಪಿ.ಕೆ.ಶ್ರೀಕುಮಾರ್, ಎಂ.ಆನಂದನ್, ಪಾಂಡಿಯಾಟ್ ಕಣ್ಣನ್, ಎಂ.ಸದಾಶಿವನ್ ಅವರನ್ನು ಅಭಿನಂದಿಸಲಾಯಿತು.
       ಜಿಲ್ಲಾ ಪೆÇಲೀಸ್ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ಮಧೂರು ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಮಾಧವ ಮಾಸ್ಟರ್, ಕಾಸರಗೋಡು ಸಹಕಾರಿ ಸಂಘ ಜತೆ ರೆಜಿಸ್ತ್ರಾರ್ ವಿ.ಮಹಮ್ಮದ್ ನೌಷಾದ್, ಸಹಾಯಕ ರೆಜಿಸ್ತ್ರಾರ್(ಜನರಲ್) ಕೆ.ಜಯಚಂದ್ರನ್, ಕೆ.ಪಿ.ಒ.ಎ. ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಆರ್.ಬಿಜು, ಕೆ.ಪಿ.ಎ. ರಾಜ್ಯ ಸಮಿತಿ ಅಧ್ಯಕ್ಷ ಸನ್ನಿ ಜೋಸೆಫ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪೆÇಲೀಸ್ ಸಹಕಾರಿ ಸಂಘ ಅಧ್ಯಕ್ಷ ಸುರೇಶ್ ಮುರಿಕೋಳಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಟಿ.ಗಿರೀಶ್ ಬಾಬು ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries