HEALTH TIPS

ಗ್ರಾಹಕರೇ ಬಿಲ್ ಕೇಳಿ! ಜಿಎಸ್‍ಟಿ ಲಾಟರಿ ಬಹುಮಾನವನ್ನು 10 ಲಕ್ಷದಿಂದ 1 ಕೋಟಿ ರೂಗೆ ಹೆಚ್ಚಿಸಲು ಸರ್ಕಾರ ಚಿಂತನೆ

 
      ನವದೆಹಲಿ: ಗ್ರಾಹಕರು ಖರೀದಿಸಿದ ವತುಗಳ ಬಿಲ್ ಗಳನ್ನು ಕೇಳೀ ಪಡೆದುಕೊಳ್ಳುವಂತೆ ಮಾಡುವ ಸಲುವಾಗಿ ಸಾರ್ವಜನಿಕರನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ  ಜಿಎಸ್‍ಟಿ ಅಡಿಯಲ್ಲಿ ಲಾಟರಿ ಕೊಡುಗೆಗಳನ್ನು 10 ಲಕ್ಷದಿಂದ 1 ಕೋಟಿ ರೂ.ಗಳವರೆಗೆ ಏರಿಸಲು ಸರ್ಕಾರ ಯೋಜಿಸಿದೆ.
      ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಆಡಳಿತದಡಿ ಪ್ರತಿ ಬಿಲ್ ಸಹ ಗ್ರಾಹಕರಿಗೆ ಲಾಟರಿ ಗೆಲ್ಲುವ ಅವಕಾಶವನ್ನು ಒದಗಿಸುತ್ತದೆ ಮತ್ತು ಇದು ತೆರಿಗೆ ಪಾವತಿಸಲು ಅವರಿಗೆ ಉತ್ತೇಜನಕಾರಿಯಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ (ಸಿಬಿಐಸಿ) ಸದಸ್ಯ ಜಾನ್ ಜೋಸೆಫ್ ಹೇಳಿದರು. .ನಾವು ಹೊಸ ಲಾಟರಿ ವ್ಯವಸ್ಥೆ ಪರಿಚಯಿಸಲು ಯೋಜಿಸಿದ್ದೇವೆ.ಜಿಎಸ್‍ಟಿಅಡಿಯಲ್ಲಿ ಪ್ರತಿ ಬಿಲ್ ಸಹ  ಲಾಟರಿ ಟಿಕೆಟ್ ನಂತೆ ಇರಲಿದೆ. ಇದು ಡ್ರಾಗೆ ಹೋಗಲಿದ್ದು ಇದಕ್ಕೆ ಬಹುಮಾನವಾಗಿ  1 ಕೋಟಿಗೆಲ್ಲುವ ಅವಕಾಶ ಒದಗಿಸಲಾಗುವುದು.  ಇದು ಗ್ರಾಹಕರ ನಡವಳಿಕೆಯನ್ನು ಬದಲಿಸುವ ಪ್ರಯತ್ನವಾಗಿದೆ. ಯೋಜನೆಯ ಪ್ರಕಾರ, ಖರೀದಿಸಿದ ಬಿಲ್ ಅನ್ನು ಪೆÇೀರ್ಟಲ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ ಮತ್ತು ಡ್ರಾ ಸ್ವಯಂಚಾಲಿತವಾಗಿ ನಡೆಯುವುದಲ್ಲದೆ ವಿಜೇತರಿಗೆ ಅದರ ಮಾಹಿತಿ ಲಭಿಸಲಿದೆ. ಲ್ಕು ಹಂತದ ಜಿಎಸ್‍ಟಿ ಅಡಿಯಲ್ಲಿ ಸರಕು ಮತ್ತು ಸೇವೆಗಳಿಗೆ ಶೇ 5, 12, 18 ಮತ್ತು 28 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದಲ್ಲದೆ, ಅತಿ ಹೆಚ್ಚು ತೆರಿಗೆ ದರದ ಮೇಲೆ ಐಷಾರಾಮಿ,ಸಿನ್ ಹಾಗೂ  ಡಿಮೆರಿಟ್ ಸರಕುಗಳ ಮೇಲೆ ಸೆಸ್ ವಿಧಿಸಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಸಹವರ್ತಿಗಳನ್ನು ಒಳಗೊಂಡ ಜಿಎಸ್ಟಿ ಕೌನ್ಸಿಲ್ ಪ್ರಸ್ತಾವಿತ ಲಾಟರಿ ಯೋಜನೆ ಪರಿಶೀಲನೆ ನಡೆಸಲಿದೆ.
     ಲಾಟರಿಯಲ್ಲಿ ಸೇರಿಸಲಾಗುವ ಬಿಲ್ ಗಳಿಗೆ ಕನಿಷ್ಠ ಮಿತಿಯನ್ನು ಕೌನ್ಸಿಲ್ ನಿರ್ಧರಿಸುತ್ತದೆ.ಯೋಜನೆಯ ಪ್ರಕಾರ, ಲಾಟರಿಗಾಗಿ ಹಣವು ಗ್ರಾಹಕ ಕಲ್ಯಾಣ ನಿಧಿಯಿಂದ ಬರುತ್ತದೆ, ಅಲ್ಲಿ ಆಂಟಿ ಪ್ರಾಫಿಟ್ ಬಿಲ್ ಆದಾಯವನ್ನು ವರ್ಗಾಯಿಸಲಾಗುತ್ತದೆ.ಜಿಎಸ್‍ಟಿಆದಾಯದಲ್ಲಿ ಸೋರಿಕೆ ತಡೆಯಲು ರವು ಲಾಟರಿಗಳು ಮತ್ತು ಕ್ಯೂಆರ್ ಕೋಡ್ ಆಧಾರಿತ ವಹಿವಾಟುಗಳನ್ನು ಉತ್ತೇಜಿಸುವುದು ಸೇರಿದಂತೆ  ಝಲವು ಕ್ರಮಗಳಿಗೆ ಮುಂದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries