ಬದಿಯಡ್ಕ: ಉಳ್ಳೋಡಿ ಚೇಡಿಕ್ಕಾನ ಚಡ್ಯಾಲ ಶ್ರೀ ಜುಮಾದಿ ದೈವಸ್ಥಾನದ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವವು ಮಾರ್ಚ್ 10ರಿಂದ 12ರ ತನಕ ನಡೆಯಲಿರುವುದು. ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಮಾ.10ರಂದು ಗುಳಿಗನ ಕೋಲ, ರಾತ್ರಿ ಕುತ್ತಿಪೂಜೆ ನಡೆಯಲಿರುವುದು. ಮಾ.11ರಂದು ಬೆಳಗ್ಗೆ ಗಣಪತಿ ಹೋಮ, ಬೆಳ್ಳರ್ಮೆಯಿಂದ ಶ್ರೀ ಚಡ್ಯಾಲ ಜುಮಾದಿ ದೈವದ ಭಂಡಾರ ಆಗಮನ, ಬೆಳಗ್ಗೆ 8.13ರಿಂದ 8.34ರ ಮಧ್ಯೆಯುಳ್ಳ ಶುಭಮುಹೂರ್ತದಲ್ಲಿ ಶ್ರೀ ದೈವದ ಪ್ರತಿಷ್ಠೆ, ಮಧ್ಯಾಹ್ನ ಗುಳಿಗ ದೈವದ ಕೋಲ, ಅನ್ನದಾನ ನಡೆಯಲಿರುವುದು. ಸಂಜೆ 6.30ಕ್ಕೆ ದೈವಗಳ ತೊಡಂಗಲ್, ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವದ ಕೋಲ ನಡೆಯಲಿದೆ. ಮಾ.12ರಂದು ಪಂಜುರ್ಲಿ ಮತ್ತು ಕಲ್ಲುರ್ಟಿ ದೈವಗಳ ಅರಶಿನ ಹುಡಿ ಪ್ರಸಾದ ವಿತರಣೆ, ಅಣ್ಣಪ್ಪ ದೈವದ ಕೋಲ, 10 ಗಂಟೆಯಿಂದ ಚಡ್ಯಾಲ ಜುಮಾದಿ ದೈವದ ನೃತ್ಯೋತ್ಸವ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ.