ಕಾಸರಗೋಡು: ಆನೆಕಾಲು ಮತ್ತು ಇತರ ಗಂಭೀರ ಸ್ವರೂಪದ ಚರ್ಮ ವ್ಯಾದಿಗಳ ನಿಯಂತ್ರಣ-ಚಿಕಿತ್ಸೆಗಳಲ್ಲಿ ಅಂತರಾಷ್ಟ್ರೀ ಮಟ್ಟದಲ್ಲಿ ಗುರುತಿಸಿಕೊಂಡಿರುವ ಉಳಿಯತ್ತಡ್ಕದ ಐಎಡಿ(ಇಸ್ಟಿಟ್ಯೂಪ್ ಆಫ್ ಅಪ್ಲೈಡ್ ಡರ್ಮಟೋಲಜಿ) ನೇತೃತ್ವದಲ್ಲಿ ಮೂರು ದಿನಗಳ 10ನೇ ರಾಷ್ಟ್ರೀಯ ವಿಚಾರ ಸಂಕಿರಣವು ಉಳಿಯತ್ತಡ್ಕ ಐಎಡಿ ಸಭಾಂಗಣದಲ್ಲಿ ಫೆ.18 ರಿಂದ 20ರ ವರೆಗೆ ಆಯೋಜಿಸಲಾಗಿದೆ.
ಫೆ.18 ರಂದು ಬೆಳಿಗ್ಗೆ 9 ಕ್ಕೆ ಗಣ್ಯರು ವಿಚಾರ ಸಂಕಿರಣವನ್ನು ಉದ್ಘಾಟಿಸುವರು. ಬಳಿಕ 9.10ರಿಂದ ಆರಂಭಗೊಳ್ಳುವ ಮೊದಲ ಹಂತದ ವಿಚಾರ ಸಂಕಿರಣದಲ್ಲಿ ಆನೆಕಾಲು ರೋಗದ ಚಿಕಿತ್ಸೆ-ನಿರ್ವಹಣೆ-ಔಷಧ ವಿಚಾರಗಳ ಬಗ್ಗೆ ವಿವಿಧ ಆಯಾಮಗಳ ಪ್ರಬಂಧ ಮಂಡನೆ ಮತ್ತು ಚರ್ಚೆಗಳು ನಡೆಯಲಿದೆ. ಬೆಳಗಾವಿ ವೈದ್ಯಕೀಯ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಎಸ್.ಎಲ್.ಹೋಠಿ, ಇಂಗ್ಲೆಂಡ್ ನ ಡರ್ಬೆ ಮತ್ತು ಬುರ್ಟೋನ್ ವೈದ್ಯಕೀಯ ವಿಜ್ಞಾನ ವಿವಿಯ ಪ್ರೊ.ವುಗೋನ್ ಕೀಲೇ, ತಮಿಳುನಾಡು ಚಿದಂಬರಂ ಪ್ಲಾಸ್ಟಿಕ್ ಸರ್ಜರಿ ಸಂಶೋಧನಾ ವೈದ್ಯಕೀಯ ವಿಜ್ಞಾನ ಕೇಂದ್ರದ ಡಾ.ಎಸ್.ಮಿಸ್ರಾ, ಐಎಡಿಯ ಆಯುರ್ವೇದ ಘಟಕದ ಡಾ.ರೂಪಾ ಕಾಮತ್, ಮುಂಬೈಯ ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ಚಂದ್ರಕಾಂತ್ ರೇವಣ್ಕರ್, ಇಗ್ಲೆಂಡ್‍ನ ವೈದ್ಯಕೀಯ ವಿಜ್ಞಾನಿ ಡಾ.ಡೊನ್ನಾ ಥೋಮ್ಸ್‍ನ್, ಡಾ.ಮಾರ್ಕ್ ಗುಡ್‍ಪೀಲ್ಡ್, ಬೆಂಗಳೂರಿನ ಯೋಗ ತಜ್ಞ ಡಾ.ಹೇಮಂತ್ ಭಾರ್ಗವ್, ಇಂಗ್ಲೆಂಡ್‍ನ ವೈದ್ಯಕೀಯ ಸಸ್ಯ ವಿಜ್ಞಾನಿ ಡಾ.ಜೋನಥನ್ ಕೆನ್‍ಟ್ಲೀ, ಡಾ.ಫರಾಝ್ ಅಲಿ ಇಂಗ್ಲೆಂಡ್ ವಿವಿಧ ಚಿಂತನೆ-ಸಂಶೋಧನೆಗಳ ಬಗ್ಗೆ ಚರ್ಚೆ ನಡೆಸುವರು.
ಸಂಜೆ 5 ರಿಂದ ಆರಂಭಗೊಳ್ಳುವ ಸಾರ್ವಜನಿಕ ಸಮಾರಂಭದಲ್ಲಿ ಖ್ಯಾತ ಅಂಕಣಕಾರ-ಚಿಂತಕ, ಐಎಡಿಯ ವಿಶೇಷ ಸ್ವಯಂಸೇವಕ ಎಸ್.ಆರ್.ವಿಜಯಶಂಕರ್ ಅವರಿಂದ ದಿಕ್ಸೂಚಿ ಭಾಷಣ ಮಾಡುವರು. ಶಾಸಕ ಎನ್.ಎ.ನೆಲ್ಲಿಕುನ್ನು, ಲಂಡನ್ ಆಕ್ಸ್‍ಫರ್ಡ್ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಟೆರೆನ್ಸ್ ರ್ಯಾನ್, ಲಂಡನ್ ನ ಹಿರಿಯ ವೈದ್ಯ ವಿಜ್ಞಾನಿ ಡಾ.ಆಂಟೋನಿ ಬಿವ್ಲೀ, ಪಿ.ಕೆ.ದುತ್ತ, ಡಾ.ಭೂಪೇಂದ್ರ ತ್ರಿಪಾಠಿ, ಡಾ.ಟಿ.ಎ.ಬೈಲೂರು ಮೊದಲಾದವರು ಉಪಸ್ಥಿತರಿರುವರು. ಪ್ರೊ.ಟೆರೆನ್ಸ್ ರ್ಯಾನ್ ಅವರು ಬರೆದಿರುವ ಮೆಡಿಸಿನ್ ಆಂಡ್ ಬಾಡಿ ಇಮೇಜ್ ಸಂಶೋಧನಾ ಕೃತಿಯ ಬಿಡುಗಡೆ, ಆನೆಕಾಲು ರೋಗ ಬಾಧಿತ ಅತಂತ್ರ ಕುಟುಂಬಗಳಿಗೆ ಆರ್ಥಿಕ ನೆರವಿನ ಹಸ್ತಾಂತರ ಮೊದಲಾದ ಕಾರ್ಯಕ್ರಮಗಳು ಈ ಸಂದರ್ಭ ನಡೆಯಲಿದೆ. ಫೆ.19 ರಂದು ವಿವಿಧ ವಿಷಯಗಳ ಅಂತರಾಷ್ಟ್ರೀಯ ತಜ್ಞರಿಂದ ಉಪನ್ಯಾಸ, ಸಂಶೋಧನಾ ವರದಿ, ರೋಗಿಗಳ ತಪಾಸಣೆ ನಡೆಯಯಲಿದೆ.
ಫೆ.20 ರಂದು ಬೆಳಿಗ್ಗೆ ದಕ್ಷಿಣ ಆಪ್ರಿಕಾದ ಕೇಪ್ ಟೌನ್ ವಿಶ್ವ ವಿದ್ಯಾನಿಲಯದ ವೈದ್ಯಕೀಯ ವಿಜ್ಞಾನಿ ಡಾ.ಗೈಲ್ ಟೊಡ್ಡ, ದೆಹಲಿ ಎಐಐಎ ಯ ಸಂಶೋಧಕ ಡಾ.ಶಿಶಿರ್ ಕುಮಾರ್ ಮಂಡಲ್, ಡಾ.ಕೆ.ಎಚ್.ಪ್ರಕಾಶ್ ಬೆಂಗಳೂರು, ಡಾ.ಪಿ.ಎಸ್.ಬಾಲು ದಾವಣಗೆರೆ,ಡಾ.ಕೆ.ರಘು ಕೋಝಿಕ್ಕೋಡ್, ಡಾ.ಗುರುಪ್ರಸಾದ್ ಅಗ್ಗಿತ್ತಾಯ ಇವರುಗಳಿಂದ ವಿಶೇಷ ಉಪನ್ಯಾಸ, ವೈದ್ಯಕೀಯ ಶಿಬಿರಗಳು ನಡೆಯಲಿದೆ. ಸಂಜೆ 3.30 ರಿಂದ ಆರಂಭಗೊಳ್ಳುವ ಸಮಾರೋಪ ಸಮಾರಂಭದಲ್ಲಿ ಡಾ.ಟೆರೆನ್ಸ್ ರ್ಯಾನ್, ಡಾ.ಗೈಲ್ ಟೊಡ್ಡ, ಡಾ.ಪಿ.ಎಸ್.ಬಾಲು, ಡಾ.ಭೂಪೇಂದ್ರ ತ್ರಿಪಾಠಿ ಉಪಸ್ಥಿತರಿರುವರು. ಐಎಡಿ ನಿರ್ದೇಶಕ ಡಾ.ಎಸ್.ಆರ್.ನರಹರಿ, ಪ್ರಸನ್ನ ನರಹರಿ, ಡಾ.ಗುರುಪ್ರಸಾದ್ ಅಗ್ಗಿತ್ತಾಯ, ಡಾ.ಟಿ.ಎ.ಬೈಲೂರ್ ಡಾ.ರೂಪಾ ಕಾಮತ್, ಡಾ.ಕೈರುಲ್ ಕುರ್ಶಿದಾ ಜಿ. ನೇತೃತ್ವ ಸಂಯೋಜನೆ ನಡೆಸುವರು. ಐಎಡಿ ಆಡಳಿತಾಧಿಕಾರಿ ಪ್ರಜುಲ್ ಆರ್.ಕೆ. ಉಪಸ್ಥಿತರಿರುವರು.