ಬದಿಯಡ್ಕ: ಏತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ 8ನೇ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಫೆ.10 ಸೋಮವಾರ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟರನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಸಂಜೆ 5ರಿಂದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀದುರ್ಗಾ ಬಾಲಗೋಕುಲದ ಮಕ್ಕಳಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, 7ರಿಂದ ಮಹಾಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಜರಗಲಿದೆ.
8.30ಕ್ಕೆ ಏತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘದ ಅಧ್ಯಕ್ಷ ಬಾಲಕೃಷ್ಣ ಕೆ. ಕೆ. ಕುಂಡಾಪು ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ವಿಶ್ವಹಿಂದೂ ಪರಿಷತ್ ದುರ್ಗಾವಾಹಿನಿ ಕರ್ನಾಟಕ ದಕ್ಷಿಣ ಪ್ರಾಂತ್ಯ ಪ್ರಮುಖ್ ವಿದ್ಯಾಮಲ್ಯ ಮಂಗಳೂರು ಧಾರ್ಮಿಕ ಭಾಷಣ ಮಾಡುವರು. ಏತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘದ ಗೌರವಾಧ್ಯಕ್ಷ ವೈ. ಕೆ. ಗಣಪತಿ ಭಟ್ ಉಪಸ್ಥಿತರಿರುವರು. ರಾತ್ರಿ 10 ರಿಂದ ಮಹತೋಭಾರ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ ಶ್ರೀಮತಿ ಹಾಗೂ ಶ್ರೀ ಬಾಬು ಮಣಿಯಾಣಿ ಬಾಂಡಿಲಮೂಲೆ ಇವರ ಮಕ್ಕಳಾದ ದೇವಿಕಿರಣ ಮತ್ತು ಕೀರ್ತನರವರ ಹರಕೆ ಸೇವೆ ಬಾಬ್ತು ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ ಎಂಬ ಪೌರಾಣಿಕ ಕನ್ನಡ ಯಕ್ಷಗಾನ ಬಯಲಾಟ ನಡೆಯಲಿದೆ.