ಕಾಸರಗೋಡು: ಆನೆಕಾಲು ರೋಗದ ಬಗ್ಗೆ ಕಾಸರಗೋಡಿನ ಐ.ಎ .ಡಿ ಯಲ್ಲಿ ಮಂಗಳವಾರದಿಂದ ಆರಂಭಗೊಂಡ ಮೂರು ದಿನಗಳ 10 ನೇ ರಾಷ್ಟ್ರೀಯ ವಿಚಾರ ಸಂಕಿರಣದ ಎರಡನೆಯ ದಿನವಾದ ಬುಧವಾರ ಲಂಡನ್ ನ ಚರ್ಮರೋಗ ತಜ್ಞರ ಜನರ ಒಕ್ಕೂಟವಾದ ಡೌಲಿಂಗ್ ಕ್ಲಬ್ ನ ಅಧ್ಯಕ್ಷ ಪೆÇ್ರ.ಅಂಥೋನಿ ಬೌಲೀ ಯವರು "ನೋಡುಲಾರ್ ಪ್ರುರಿಗೊ " ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದರು.
ಬಿಲ್ ಅಂಡ್ ಮಿ ಲಿಂಡಾ ಗೇಟ್ಸ್ ಫೌಂಡೇಷನ್ ನ ಮುಖ್ಯಸ್ಥ ಡಾ. ಭೂಪೇಂದ್ರ ತ್ರಿಪಾಠಿ ಅವರು ಲಿಂಫಾಟಿಕ್ ಫೈಲೇರಿಯಾಸಿಸ್ ನ್ನು ಭಾರತದಿಂದ ನಿರ್ಮೂಲನೆ ಗೊಳಿಸಲಿಕ್ಕಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಆಯುರ್ವೇದದ ಸಾಕ್ಶ್ಯಾಧಾರಿತ ಚಿಕಿತ್ಸೆಗಳ ಬಗ್ಗೆ ಗುಜರಾತ್ ಆಯುರ್ವೇದ ಯುನಿವರ್ಸಿಟಿಯ ನಿರ್ದೇಶಕ ಪೆÇ್ರ.ಅನೂಪ್ ಥಕ್ಕರ್ ವಿಷಯ ಮಂಡಿಸಿದರು. ಪೆÇ್ರ.ಟೆರೆನ್ಸ್ ರೆಯಾನ್, ಕಲ್ಲಿಕೋಟೆಯ ಸರ್ಕಾರಿ ಹೋಮಿಯೋಪತಿ ಕಾಲೇಜಿನ ಡಾ.ಮನ್ಸೂರ್ ಅಲಿ, ಲಂಡನ್ ನ ಯುನಿವೆರ್ಸಿಟಿ ಹೋಸ್ಪಿಟಲ್ಸ್ ಆ ಡರ್ಬಿ ಯಾ ಚರ್ಮ ರೋಗ ತಜ್ಞೆ ಡಾ.ತಾನ್ಯಾ ಬ್ಲೇಯ್ಕೆರ್ , ಸರ್ರೆ ಅಂಡ್ ಸಸೆಕ್ಸ್ ಹೇಳತ್ಕ್ಯಾರೆ ಎನ್ .ಎಚ್ .ಎಸ್ ಟ್ರಸ್ಟ್ ನ ರಿಜಿಸ್ಟ್ರಾರ್ ಡಾ. ಪರಾಜಸಿಂಗಮ್,ಡೌಲಿಂಗ್ ಕ್ಲಬ್ ಲಂಡನ್ ನ ಡಾ. ಅಶಿಮಾ ಲೊವೆ ರವರುಗಳು ಸಂಬಂದಿತ ಅನೇಕ ವಿಷಯಗಳ ಬಗ್ಗೆ ಪ್ರಬಂಧಗಳನ್ನು ಮಂಡಿಸುವುದರೊಂದಿಗೆ ವಿಸ್ತೃತ ಚರ್ಚೆಗಳೂ ನಡೆದುವು .
ಐ. ಎ .ಡಿ. ಯ ಡರ್ಮಟಾಲಜಿ ನಸಿರ್ಂಗ್ ತಂಡವು ಆನೆಕಾಲು ರೋಗಿಗಳ ಜೀ ವನ ಗುಣ ಮಟ್ಟ ವನ್ನು ಸುಧಾರಿಸುವ ಬಗ್ಗೆ ರೋಗಿಗಳೊಂದಿಗೆ ಸಂವಾದ ನಡೆಸಿದರು. ಚಿಕಿತ್ಸೆಗಾಗಿ ಐ. ಎ .ಡಿ.ಗೆ ಬರುವ ಬಡ ಅರ್ಹ ರೋಗಿಗಳಿಗೆ ನೆರವಾಗಲು ಸ್ಥಾಪಿಸಿರುವ " ಎಸ್.ಜನಾರ್ಧನ್ ಧತ್ತಿ ನಿಧಿ"ಗೆ,ಕಾಸರಗೋಡಿನ ಚಿನ್ಮಯ ವಿದ್ಯಾಲದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕುಮಾರಿ ನಿಧಿ ಕಾಮತ್ ತನ್ನ ಪಾಕೆಟ್ ಮನಿ ಯನ್ನು ಸಮರ್ಪಿಸಿದಳು.
ಇಂದು ಸಮಾರೋಪ:
ಫೆ.20 ರಂದು ಬೆಳಿಗ್ಗೆ ದಕ್ಷಿಣ ಆಪ್ರಿಕಾದ ಕೇಪ್ ಟೌನ್ ವಿಶ್ವ ವಿದ್ಯಾನಿಲಯದ ವೈದ್ಯಕೀಯ ವಿಜ್ಞಾನಿ ಡಾ.ಗೈಲ್ ಟೊಡ್ಡ, ದೆಹಲಿ ಎಐಐಎ ಯ ಸಂಶೋಧಕ ಡಾ.ಶಿಶಿರ್ ಕುಮಾರ್ ಮಂಡಲ್, ಡಾ.ಕೆ.ಎಚ್.ಪ್ರಕಾಶ್ ಬೆಂಗಳೂರು, ಡಾ.ಪಿ.ಎಸ್.ಬಾಲು ದಾವಣಗೆರೆ,ಡಾ.ಕೆ.ರಘು ಕೋಝಿಕ್ಕೋಡ್, ಡಾ.ಗುರುಪ್ರಸಾದ್ ಅಗ್ಗಿತ್ತಾಯ ಇವರುಗಳಿಂದ ವಿಶೇಷ ಉಪನ್ಯಾಸ, ವೈದ್ಯಕೀಯ ಶಿಬಿರಗಳು ನಡೆಯಲಿದೆ. ಸಂಜೆ 3.30 ರಿಂದ ಆರಂಭಗೊಳ್ಳುವ ಸಮಾರೋಪ ಸಮಾರಂಭದಲ್ಲಿ ಡಾ.ಟೆರೆನ್ಸ್ ರ್ಯಾನ್, ಡಾ.ಗೈಲ್ ಟೊಡ್ಡ, ಡಾ.ಪಿ.ಎಸ್.ಬಾಲು, ಡಾ.ಭೂಪೇಂದ್ರ ತ್ರಿಪಾಠಿ ಉಪಸ್ಥಿತರಿರುವರು. ಐಎಡಿ ನಿರ್ದೇಶಕ ಡಾ.ಎಸ್.ಆರ್.ನರಹರಿ, ಪ್ರಸನ್ನ ನರಹರಿ, ಡಾ.ಗುರುಪ್ರಸಾದ್ ಅಗ್ಗಿತ್ತಾಯ, ಡಾ.ಟಿ.ಎ.ಬೈಲೂರ್ ಡಾ.ರೂಪಾ ಕಾಮತ್, ಡಾ.ಕೈರುಲ್ ಕುರ್ಶಿದಾ ಜಿ. ನೇತೃತ್ವ ಸಂಯೋಜನೆ ನಡೆಸುವರು. ಐಎಡಿ ಆಡಳಿತಾಧಿಕಾರಿ ಪ್ರಜುಲ್ ಆರ್.ಕೆ. ಉಪಸ್ಥಿತರಿರುವರು.