HEALTH TIPS

ಐಎಡಿಯ 10ನೇ ರಾಷ್ಟ್ರೀಯ ವಿಚಾರ ಸಂಕಿರಣ ಸಂಪನ್ನ-ಬಡತನ ಕಾರಣದಿಂದ ಆನೆಕಾಲು ರೋಗಿಗಳಾರೂ ಚಿಕಿತ್ಸೆ ಲಭಿಸದೆ ಐ.ಎ .ಡಿ ಯಿಂದ ಮರಳುವಂತಾಗಬಾರದು-ಡಾ.ಎಸ್.ಆರ್. ನರಹರಿ


      ಕಾಸರಗೋಡು: ಆನೆಕಾಲು ಮತ್ತು ಇನ್ನಿತರ ದೀರ್ಘ ಕಾಲಿಕ ಚರ್ಮರೋಗಗಳ ಕುರಿತು ಕಾಸರಗೋಡಿನ ಐ .ಎ ಡಿ ಯಲ್ಲಿ ಫೆಬ್ರವರಿ 18 ರಿಂದ 20 ರ ವರೆಗೆ ನಡೆದ  10 ನೇ ರಾಷ್ಟ್ರೀಯ ವಿಚಾರಸಂಕಿರಣ ಗುರುವಾರ ಸಂಪನ್ನಗೊಂಡಿತು.
      ಗುರುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಯುನಿವರ್ಸಿಟಿಯ ಚರ್ಮರೋಗ ವಿಭಾಗದ ಪೆÇ್ರ. ಗೈಲ್ ಟಾಡ್ ಅವರು ಆನೆ ಕಾಲು  ರೋಗಿಗಳಲ್ಲಿ ಚರ್ಮ ಸಂರಕ್ಷಣೆಯ ತೊಡಕುಗಳ ಬಗ್ಗೆ ವಿಚಾರ ಮಂಡಿಸಿದರು.  ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದದ  ಡಾ.ಸಿಸಿರ್ ಕುಮಾರ್ ಮಂಡಲ್ ಅವರು ಚರ್ಮ ರೋಗ ಚಿಕಿತ್ಸೆಯಲ್ಲಿ ಮನಸ್ಸಿನ  ಪಾತ್ರದ ಕುರಿತು ಪ್ರಬಂಧ ಮಂಡಿಸಿದರು. ಲಿಂಫೇಟಿಕ್ ಪೈಲೇರಿಯಾಸಿಸ್  ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಮುದಾಯಗಳ ಒಳಗೊಳ್ಳುವಿಕೆಯ ಕುರಿತು ವಿಷಯ ಪ್ರಸ್ತುತ ಪಡಿಸಿದರು.
      ಬಿಲ್ ಅಂಡ್ ಮಿಲಿಂಡಾ ಗೇಟ್ಸ್  ಫೌಂಡೇಷನ್ ನ ಡಾ.ಭೂಪೇಂದ್ರ ತ್ರಿಪಾಠಿ, ಐ .ಎ ಡಿ ಯ ಆಯುರ್ವೇಧ ವಿಭಾಗದ ಹಿರಿಯ ವೈದ್ಯ ಡಾ. ಗುರುಪ್ರಸಾದ್ ಅಗ್ಗಿತ್ತಾಯ ಮುಂತಾದವರು ವಿವಿಧ ವಿಷಯಗಳ  ಬಗ್ಗೆ ಪ್ರಬಂಧ-ಸಂಶೋಧನಾ ಮುನ್ನೋಟಗಳ ಬಗ್ಗೆ ಪ್ರಬಂಧ ಮಂಡಿಸಿದರು. ಪೆÇ್ರ .ಟೆರೆನ್ಸ್.ಜೆ. ರೆಯಾನ್, ಡಾ.ಚಂದ್ರಕಾಂತ್ ರೇವಂಕರ್, ಡಾ.ಎಸ್ದ.ಆರ್. ನರಹರಿ ಮೊದಲಾದವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
      ಸಮುದಾಯಗಳನ್ನು ಜೊತೆ ಸೇರಿಸಿ  ಆನೆಕಾಲು ರೋಗದ  ಪ್ರಸರಣವನ್ನು ಹೇಗೆ ತಡೆಗಟ್ಟಬಹುದೆಂಬುದರ ಬಗ್ಗೆ ದಾವಣೆಗೆರೆಯ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ಡಾ. ಪಿ.ಎಸ್.ಬಾಲು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆಯನ್ನು ನಡೆಸಿ ಕೊಟ್ಟರು.
    ಮೂರು ದಿನಗಳ ಕಾಲ ನಡೆದ ಈ ವಿಚಾರಸಂಕಿರಣ ದಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ಮತ್ತು ಅತಿಥಿಗಳಿಗೆ ಬಡಿಸಿದ ಪ್ರತಿಯೊಂದು ಆಹಾರ ತಿನಸುಗಳಲ್ಲಿ ಅಡಗಿದ್ದ ಕ್ಯಾಲೋರಿ ಯ ಬಗ್ಗೆ ಡಾ.ರೂಪಾ ಕಾಮತ್ ಮಾಹಿತಿ ನೀಡಿದುದು ವಿಶೇಷವಾಗಿತ್ತು.
   ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಇಗ್ಲೆಂಡ್ ಆಕ್ಸ್‍ಫರ್ಡ್ ಮಹಾ ವಿದ್ಯಾಲಯದ ಚರ್ಮರೋಗ ವಿಭಾಗ ಮುಖ್ಯಸ್ಥ ಪೆÇ್ರ.ಟೆರೆನ್ಸ್ ಜೆ ರೇಯಾನ್, ದೆಹಲಿಯ ಬಿಲ್ ಅಂಡ್ ಮಿಲಿಂಡಾ ಗೇಟ್ಸ್  ಫೌಂಡೇಷನ್ ಡಾ.ಭೂಪೇಂದ್ರ ತ್ರಿಪಾಠಿ ಶುಭಾಶಂಸೆಗೈದರು. ರಾಯಲ್ ಡರ್ಬೆ ಇಗ್ಲೆಮಡ್ ನ ಪ್ರಾಧ್ಯಾಪಕಿ ಪ್ರೊ. ವಘೋನ್ ಕೀಲೆ, ದಕ್ಷಿಣ ಆಪ್ರಿಕಾದ ಕೇಪ್ ಟೌನ್ ಚರ್ಮ ರೋಗ ವಿಭಾಗಚ ಮುಖ್ಯಸ್ಥೆ ಪ್ರೊ.ಗೈಲ್ ಟೋಡ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
   ಈ ಸಂದರ್ಭ ಸಮಾರೋಪ ಭಾಷಣಗೈದು ಮಾತನಾಡಿದ ಐಎಡಿಯ ನಿರ್ದೇಶಕ ಡಾ.ಎಸ್.ಆರ್.ನರಹರಿ ಅವರು, ಬಡವರ ದೊಡ್ಡ ಅನಾರೋಗ್ಯವೆಂದೇ ಬಿಂಬಿತವಾಗಿರುವ ಆನೆಕಾಲು ರೋಗ ನಿಯಂತ್ರಣ-ಚಿಕಿತ್ಸೆಗಾಗಿ ಐಎಡಿಗೆ ಆಗಮಿಸುವ ರೋಗಿಗಳು ಯಾವ ಕಾರಣಕ್ಕೂ ಚಿಕಿತ್ಸೆಗೆ ಹಣವಿಲ್ಲವೆಂದು ಹಿಂತೆರಳುವ ಸಾಧ್ಯತೆಯೇ ಇಲ್ಲ. ಈ ನಿಟ್ಟಿನಲ್ಲಿ ಅಂತವರಿಗೆ ಐಎಡಿ ಗರಿಷ್ಠ ಮಟ್ಟದ ಅತ್ಯುತ್ತಮ ಚಿಕಿತಸೆಯನ್ನು ಉಚಿತವಾಗಿ ನೀಡಲಿದೆ ಎಂದರು. ವಿವಿಧ ಸರ್ಕಾರಿ ವಲಯಗಳು ಆವಶ್ಯಪಟ್ಟರೆ ರಾಷ್ಟ್ರಾದ್ಯಂತ ಐಎಡಿಯ ಉಪ ಕೇಂದ್ರಗಳನ್ನು, ತರಬೇತಿಗಳನ್ನು ಆರಂಭಿಸಲು ಐಎಡಿ ಎಂದಿಗೂ ಮುಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    ಐಎಡಿಯ ಆಯುರ್ವೇದ ವಿಭಾಗದ ಹಿರಿಯ ವೈದ್ಯ ಡಾ. ಗುರುಪ್ರಸಾದ್ ಅಗ್ಗಿತ್ತಾಯ ಮಧೂರು ಸ್ವಾಗತಿಸಿ, ಐ .ಎ ಡಿ ಯ ಆಡಳಿತಾಧಿಕಾರಿ ಪ್ರಜುಲ್ ಆರ್ .ಕೆ  ವಂದಿಸಿದರು. ಡಾ.ಪ್ರಸನ್ನ ನರಹರಿ ಸಹಿತ ಐಎಡಿಯ ಎಲ್ಲಾ ವಿಭಾಗಗಳ ವೈದ್ಯರು, ಸಿಬ್ಬಂದಿಗಳು ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries