ಕಾಸರಗೋಡು: ರಾಜ್ಯ ಯುವಜನ ಆಯೋಗ ಜಿಲ್ಲಾ„ಕಾರಿ ಕಚೇರಿ ಸಭಾಂಗಣದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಅದಾಲತ್‍ನಲ್ಲಿ 11 ದೂರುಗಳಿಗೆ ತೀರ್ಪು ಒದಗಿಸಲಾಗಿದೆ. ಒಟ್ಟು 20 ಅಹವಾಲುಗಳನ್ನು ಸಲ್ಲಿಸಲಾಗಿತ್ತು. ಉಳಿದ 9 ದೂರುಗಳನ್ನು ಮುಂದಿನ ಅದಾಲತ್‍ನಲ್ಲಿ ಪರಿಶೀಲಿಸುವುದಾಗಿ ತಿಳಿಸಲಾಗಿದೆ. ನೂತನವಾಗಿ ಎರಡು ದೂರುಗಳೂ ಈ ವೇಳೆ ಲಭಿಸಿವೆ.
ಮುಷ್ಕರ ನಡೆಸಿದ ಆರೋಪದಲ್ಲಿ ಉದ್ಯೋಗದಿಂದ ಕೈಬಿಡಲಾದ ಇಬ್ಬರು ದಾದಿಯರಿಗೆ ಕಾನೂನು ರೀತ್ಯಾ ಮೊಬಲಗು ವಿತರಣೆ ನಡೆಸಲು ತಾವು ಸಿದ್ಧರಿರುವುದಾಗಿ ಖಾಸಗಿ ಆಸ್ಪತ್ರೆಯೊಂದರ ಪದಾಧಿಕಾರಿಗಳು ಅದಾಲತ್ ವೇಳೆ ತಿಳಿಸಿದರು. ಮುಷ್ಕರ ಸಂಬಂಧ ಸ್ವಯಂ ಪ್ರೇರಣೆಯಿಂದ ಯುವಜನ ಆಯೋಗ ಕೇಸು ದಾಖಲಿಸಿತ್ತು.
ಕಾಲೇಜೊಂದರ ವಿದ್ಯಾರ್ಥಿಗಳು ಕೆಲವು ಉಪನ್ಯಾಸಕರ ವಿರುದ್ಧ ನೀಡಿದ್ದ ದೂರು ಮಾತುಕತೆ ಮೂಲಕ ಪರಿಹಾರವಾಗಿದೆ ಎಂದು ಕಾಲೇಜು ಅಧಿಕಾರಿಗಳು ಅದಾಲತ್‍ಗೆ ತಿಳಿಸಿದರು. ಯುವಜನ ಆಯೋಗ ಅಧ್ಯಕ್ಷೆ ಚಿಂತಾ ಜೇರೋಂ ಅಧ್ಯಕ್ಷತೆ ವಹಿಸಿದ್ದರು. ಆಯೋಗ ಕಾರ್ಯದರ್ಶಿ ಟಿ.ಕೆ.ಜಯಶ್ರೀ, ಸದಸ್ಯ ಕೆ.ಮಣಿಕಂಠನ್, ಎಸ್.ಒ. ಮನೋಜ್ ಸಿ.ಡಿ. ಅದಾಲತ್‍ಗೆ ನೇತೃತ್ವ ವಹಿಸಿದ್ದರು.