ಮಂಜೇಶ್ವರ: ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರೋತ್ಸವದ ಫೆ.11 ರಂದು ರಾತ್ರಿ 6ರಿಂದ ಗಾನ ನೃತ್ಯ ವೈವಿಧ್ಯ ಹಾಗೂ ಗಡಿನಾಡ ತುಳು ಸಾಹಿತಿ ಯೋಗೀಶ ರಾವ್ ಚಿಗುರುಪಾದೆ ರಚಿಸಿರುವ ಭಾರತದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾvಟಗಾರ್ತಿ ಅಬ್ಬಕ್ಕ ದೇವಿಯ ಜೀವನ ಗಾಥೆಗೆ ಕೈಗನ್ನಡಿಯಾದ ಕಥಾ ಹೂರಣವನ್ನೊಳಗೊಂಡ ವಿಶಿಷ್ಟ ತುಳು ರೂಪಕ ಉಳ್ಳಾಲ ರಾಣಿ ಅಬ್ಬಕ್ಕ ಮಾಸ್ಟರ್ಸ್ ಮೀಯಪದವು ತಂಡದ 40 ಗ್ರಾಮೀಣ ಕಲಾಪ್ರತಿಭೆಗಳಿಂದ ಪ್ರದರ್ಶನಗೊಳ್ಳಲಿದೆ. ಅಬ್ಬಕ್ಕ ರೂಪಕ ಈಗಾಗಲೇ ಪ್ರದರ್ಶನಗೊಂಡಲ್ಲೆಲ್ಲಾ ವಿದ್ವಾಂಸರಿಂದ ಪ್ರೇಕ್ಷಕರಿಂದ ಮುಕ್ತ ಪ್ರಶಂಸೆಗೊಳಗಾಗಿದ್ದು ತುಳುನಾಡ ರತ್ನ ದಿನೇಶ ಅತ್ತಾವರ ನಿರ್ದೇಶಿಸಿ ಕಂಠದಾನ ಗೈದಿರುವ ರೂಪಕದಲ್ಲಿ ಸುರೇಶ ಶೆಟ್ಟಿ ಜೋಡುಕಲ್ಲು ಅಬ್ಬಕ್ಕನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಲಿದ್ದಾರೆ.
ಫೆ.11: ಚಿಗುರುಪಾದೆಯಲ್ಲಿ ರಂಜಿಸಲಿರುವ ಉಳ್ಳಾಲ ರಾಣಿ ಅಬ್ಬಕ್ಕ
0
ಫೆಬ್ರವರಿ 08, 2020