ನವದೆಹಲಿ: ಶಬರಿಮಲೆ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಇರುವ ವಿವಿಧ ಧಾರ್ಮಕ ಕೇಂದ್ರಗಳಲ್ಲಿ ಮಹಿಳೆಯರಿಗೆ ಆಗುತ್ತಿರುವ ತಾರತಮ್ಯಕ್ಕೆ ಸಂಬಂಧಿಸಿದ ಕಾನೂನು ವ್ಯಾಪ್ತಿಯ ಪ್ರಶ್ನೆಗಳ ಪರಾಮರ್ಶೆ ವಿಚಾರಣೆ ಗುರುವಾರ ನಡೆದಿದ್ದು,ಸುಪ್ರೀಂ ಕೋರ್ಟ್? ಇದರ ತೀರ್ಪನ್ನು ಫೆ.10ಕ್ಕೆ ಕಾಯ್ದಿರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಒಂಭತ್ತು ನ್ಯಾಯಮೂರ್ತಿಗಳ ಪೀಠ ಇಂದು ಬೆಳಗ್ಗೆಯಿಂದ ಸಂಜೆ ತನಕ ಇದರ ವಿಚಾರಣೆ ನಡೆಸಿದ್ದು, ಅಂತಿಮವಾಗಿ ಕಾನೂನು ಪ್ರಶ್ನೆಗಳ ನ್ಯಾಯ ಪರಾಮರ್ಶೆ ವಿಚಾರವನ್ನು ಉನ್ನತ ನ್ಯಾಯಪೀಠಕ್ಕೆ ವಹಿಸಬೇಕೋ ಬೇಡವೋ ಎಂಬುದನ್ನು ಫೆ.10ಕ್ಕೆ ಹೇಳುವುದಾಗಿ ತಿಳಿಸಿತು. ಅಲ್ಲದೆ, ಫೆ.12ರಿಂದ ನಿತ್ಯವೂ ಎಂಬಂತೆ ಈ ಪ್ರಕರಣದ ವಿಚಾರಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿತು.
ಶಬರಿಮಲೆ ಸೇರಿ ದೇಶದ ವಿವಿಧ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಮಹಿಳೆಯರಿಗೆ ಆಗುತ್ತಿರುವ ತಾರತಮ್ಯದ ವಿಚಾರವನ್ನು ನ್ಯಾಯಪೀಠ ಪರಿಗಣಿಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ನ್ಯಾಯ ತೀರ್ಮಾನ ಮಾಡುವ ಸಲುವಾಗಿ ಈ ವಿಚಾರಣೆ ನಡೆದಿದೆ.