ಕಾಸರಗೊಡು: ರಾತ್ರಿ ನಿದ್ದೆಗಣ್ಣಿನಲ್ಲಿ ವಆಹನ ಚಲಾಯಿಸುವ ಚಾಲಕರಿಗೆ ಹುಮ್ಮಸ್ಸು ಮೂಡಿಸುವ ನಿಟ್ಟಿನಲ್ಲಿ ಕಾಸರಗೋಡು ವಿದ್ಯಾನಗರ ಪೆಟ್ರೋಲ್ ಪಂಪ್ ಬಳಿ ಹಾಲುರಹಿತ ಚಹಾ ಮತ್ತು ಕಾಫಿ ವಿತರಿಸಲಾಗುವುದು. ಜಿಲ್ಲಾ ಪ್ರಿಂಟಿಂಗ್ ಏಂಡ್ ಪಬ್ಲಿಶಿಂಗ್ ಕೋ ಓಪರೇಟಿವ್ ಸೊಸೈಟಿ ವತಿಯಿಂದ ಚಹಾ ಮತ್ತು ಕಾಫಿ ಬೂತ್ ಕಾರ್ಯಾಚರಿಸಲಿದ್ದು, ಇದರ ಉದ್ಘಾಟನೆ ಫೆ. 14ರಂದು ಸಾಯಂಕಾಲ ವಿದ್ಯಾನಗರದಲ್ಲಿ ಜರುಗಲಿರುವುದಾಗಿ ಸೊಸೈಟಿ ಪದಾಧಿಕಾರಿ ಟಿ.ಕೆ ರಾಜನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾತ್ರಿ 11ರಿಂದ ಮುಂಜಾನೆ 5ರ ವರೆಗೆ ಪ್ರತಿ ದಿನ ಬೂತ್ ಕಾರ್ಯಾಚರಿಸಲಿದೆ. ವಾಹನ ಚಾಲಕರಿಗೆ ಮಾತ್ರ ಇದರ ಪ್ರಯೋಜನ ಲಭ್ಯವಾಗಲಿದೆ. ರಾತ್ರಿ ಹೊತ್ತು ವಾಹನ ಚಲಾಯಿಸುವ ಚಾಲಕರಲ್ಲಿ ಹೊಸ ಹುಮ್ಮಸ್ಸು ಮೂಡಿಸುವುದರ ಜತೆಗೆ ಒಂದಷ್ಟು ವಿಶ್ರಾಂತಿ ಈ ಮೂಲಕ ಲಭ್ಯವಾಗಲಿದೆ. ಈ ಸೇವೆ ಉಚಿತವಾಗಿರಲಿದ್ದು, ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಎಸ್.ಪಿ. ಎ.ಎಸ್.ಪಿ, ಆರ್‍ಟಿಓ, ಡಿವೈಎಸ್‍ಪಿಗಳು, ಸಿ.ಐಗಳು ರಾಜಕೀಯ, ಟರೇಡ್ ಯೂನಿಯನ್ ಪ್ರತಿನಿಧಿಗಳು ಪಾಲ್ಗೊಳ್ಳಲಿರುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತಾಮರಾಕ್ಷನ್ ಮುಂತಾದವರು ಉಪಸ್ಥಿತರಿದ್ದರು.