ಬೀಜಿಂಗ್: ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ 150 ಮಂದಿ ಸೋಂಕು ಪೀಡಿತರು ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 2, 592ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದ್ದು, ಫೆಬ್ರವರಿ 23 ರಂದು ಒಂದೇ ದಿನಾ ಚೀನಾದಾದ್ಯಂತ ಸುಮಾರು 150 ಮಂದಿ ಕೊರೋನಾ ವೈರಸ್ ಸೋಂಕು ಪೀಡಿತರು ಸಾವಪನ್ನಪ್ಪಿದ್ದಾರೆ. ಆ ಮೂಲಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 2, 592ಕ್ಕೆ ಏರಿಕೆಯಾಗಿದೆ. ಅಂತೆಯೇ ನಿನ್ನೆ ಒಂದೇ ದಿನ 409 ಮಂದಿಯಲ್ಲಿ ಹೊಸದಾಗಿ ಕೊರೋನಾ ವೈರಸ್ ಸೋಂಕು ಕಂಡು ಬಂದಿದೆ ಎಂದು ಮಾಹಿತಿ ನೀಡಿದೆ.
ಓರ್ವ ಸಿಬ್ಬಂದಿಗೆ ಸೋಂಕು, ಕಂಪನಿಯಬ 82 ಜನರನ್ನು ಪ್ರತ್ಯೇಕವಾಗಿರಿಸಿ ತಪಾಸಣೆ:
ಇತ್ತ ಚೀನಾದ ಆನ್ ಲೈನ್ ಪುಸ್ತಕ ಚಿಲ್ಲರೆ ಅಂಗಡಿಯ ಓರ್ವ ಉದ್ಯೋಗಿಯಲ್ಲಿ ಕೋವಿದ್ ಸೋಂಕು (ಕೊರೋನಾ ವೈರಸ್) ಕಾಣಿಸಿಕೊಂಡಿದ್ದರಿಂದ ಎಲ್ಲಾ 82 ಉದ್ಯೋಗಿಗಳನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಫೆ. 19ರಂದು ದಂಗ್ ದಂಗ್ ಡಾಟ್ ಕಾಮ್ ಅಂಗಡಿಯಯ ಉದ್ಯೊಗಿಯೋರ್ವರಲ್ಲಿ ಸೋಂಕಿರುವುದನ್ನು ವೈದ್ಯರು ದೃಢಪಟಿಸಿದ್ದರು. ಈಕೆ ಜ. 21ರಂದು ಹೆಯಿಲಲಾಂಗ್ ಜಿಯಾಂಗ್ ಕ್ಕೆ ಪ್ರಯಾಣ ಬೆಳೆಸಿ ಫೆ. 5ರಂದು ಬೀಜಿಂಗ್ ಗೆ ಮರಳಿದ್ದರು. ಶನಿವಾರದವರೆಗೆ ಅವರು 82 ಜನರ ಸಂಪರ್ಕಕ್ಕೆ ಬಂದಿದ್ದರು. ಈ ಎಲ್ಲಾ ವ್ಯಕ್ತಿಗಳನ್ನು ಪ್ರತ್ಯೇಕವಾಗಿರಿಸಿ ತಪಾಸಣೆ ನಡೆಸಲಾಗುತ್ತಿದೆ.