ಕಾಸರಗೋಡು: ಎಫ್.ಎಚ್.ಸಿ. ಓಲಾಟ್ ನ ನೂತನ ಬ್ಲೋಕ್ ಕಟ್ಟಡದ ನಿರ್ಮಾಣಕ್ಕೆ 1.65 ಕೋಟಿ ರೂ. ಮಂಜೂರು ಮಾಡಲಾಗಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳನ್ನು ಆದ್ರರ್ಂ ಯೋಜನೆಯ ಗುಣಮಟ್ಟಕ್ಕೆ ಎತ್ತರಿಸುವ ಕಾರ್ಯಕ್ರಮದ ಅಂಗವಾಗಿ ಈ ನಿಟ್ಟನಲ್ಲಿ ಆಡಳತೆ ಮಂಜೂರಾತಿ ನೀಡಲಾಗಿದೆ. ಶಾಸಕ ಎಂ.ರಾಜಗೋಪಾಲ್ ಅವರ ಸ್ಥಳೀಯ ಅಭಿವೃಧ್ಧಿ ನಿಧಿಯಿಂದ 25 ಲಕ್ಷ ರೂ., ಗ್ರಾಮಪಂಚಾಯತ್ ನ ಪಾಲು ರೂಪದಲ್ಲಿ 10 ಲಕ್ಷ ರೂ., ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ 30 ಲಕ್ಷ ರೂ. ಮಂಜೂರು ಮಾಡಲಾಗುವುದು. ಯೋಜನೆಯಲ್ಲಿ ನೂತನ ಪ್ರತ್ಯೇಕಬ್ಲೋಕ್ ನಿರ್ಮಾಣದ ಜೊತೆ ತ್ಯಾಜ್ಯ ಪರಿಷ್ಕರಣೆ ಸೌಲಭ್ಯವನ್ನೂ ಅಳವಡಿಸಲಾಗಿದೆ. ರಾಜ್ಯದಲ್ಲಿ ಜನಸೌಹಾರ್ದ ಆರೋಗ್ಯ ವಿತರಣೆ ಸೌಲಭ್ಯ ನಿರ್ಮಿಸುವ ಉದ್ದೇಶದಿಂದ ಆದ್ರರ್ಂ ಮಿಷನ್ ಜಾರಿಗೊಳಿಸಲಾಗುತ್ತಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಯೋಜನೆ ಜಿಲ್ಲಾ ಮಟ್ಟದ ಸಮಿತಿ ಈ ಯೋಜನೆಗೆ ಮಂಜೂರಾತಿ ನೀಡಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಲೋಕೋಪಯೋಗಿ ಕಟ್ಟಡ ನಿರ್ಮಾಣ ವಿಭಾಗ ಕಾರ್ಯಕಾರಿ ಇಂಜಿನಿಯರ್ ಕೆ.ದಯಾನಂದ ಸಹಿತ ಇತರ ಸದಸ್ಯರು ಉಪಸ್ಥಿತರಿದ್ದರು.