ಮಂಜೇಶ್ವರ: ತೊಟ್ಟೆತ್ತೋಡಿ ಬುಡ್ರಿಯ ಶ್ರೀ ಮಲರಾಯ ಬಂಟ ದೈವಸ್ಥಾನದ ವಾರ್ಷಿಕ ನೇಮೋತ್ಸವ ಬ್ರಹ್ಮಶ್ರೀ ಗೋವಿಂದ ಭಟ್ ಪೆÇಳ್ಳಕಜೆ ಅವರ ನೇತೃತ್ವದಲ್ಲಿ ಫೆ.18ನೇ ಮಂಗಳವಾರ ಜರಗಲಿದೆ ಹಾಗೂ ಮೃತ್ಯುಂಜಯ ಯುವಕ ವೃಂದ ಕಲ್ಲಗದ್ದೆ ಬುಡ್ರಿಯ ಸಂಸ್ಥೆಯ ವಿಂಶತಿ ವಾರ್ಷಿಕೋತ್ಸವವು ಅದೇ ದಿನ ಶ್ರೀ ಕ್ಷೇತ್ರ ವಠಾರದಲ್ಲಿ ಜರಗಲಿದೆ.
ಸಮಾರಂಭದ ಅಂಗವಾಗಿ ಸಂಜೆ 5ಕ್ಕೆ ತಂಬಿಲ ಸೇವೆ, 6ಕ್ಕೆ ಭಂಡಾರ ಏರುವುದು , 6.15ರಿಂದ ನೃತ್ಯ ವೈವಿಧ್ಯ ಜರಗಲಿದೆ. ರಾತ್ರಿ 7ರಿಂದ ಸಭಾಕಾರ್ಯಕ್ರಮ ಜರಗಲಿದ್ದು ಪ್ರೇಮಾ ಕೆ.ಭಟ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಮೀಂಜ ಗ್ರಾಮ ಪಂಚಾಯತಿ ನಿವೃತ್ತ ಕಾರ್ಯದರ್ಶಿ ರವೀಂದ್ರ ಜೋಡುಕಲ್ಲು, ನಾರಾಯಣ ನಾೈಕ್ ನಡುಹಿತ್ಲು ಕುಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಅವರನ್ನು ಗಣ್ಯರ ಸಮಕ್ಷಮ ಸಮ್ಮಾನಿಸ ಲಾಗುವುದು. ಯುವಕ ವೃಂದ ಅಧ್ಯಕ್ಷ ಸದಾಶಿವ ಅಮ್ಮೆನಡ್ಕ, ಕಾರ್ಯದರ್ಶಿ ನಿತಿನ್ ಕಲ್ಲಗದ್ದೆ ಉಪಸ್ಥಿತರಿರುವರು. ಬಳಿಕ ನೇಮೋತ್ಸವ ಹಾಗೂ ಅನ್ನ ಸಂತರ್ಪಣೆ ಜರಗಲಿದ್ದು ರಾತ್ರಿ 10.30ರಿಂದ ಭ್ರಾಮರಿ ಕಲಾವಿದೆರ್ ಉಪ್ಪಳ ತಂಡದಿಂದ `ಮುರಳಿ ಈ ಪಿರಬರೊಲಿ' ತುಳು ಹಾಸ್ಯಮಯ ನಾಟಕ ಜರಗಲಿದೆ.