HEALTH TIPS

ವಾಹನ ಸವಾರರಿಗೆ ಒಳ್ಳೆ ಸುದ್ದಿ! ಏಪ್ರಿಲ್ 1ರಿಂದ ದೇಶಾದ್ಯಂತ ವಿಶ್ವದರ್ಜೆಯ ಸ್ವಚ್ಚ ಪೆಟ್ರೋಲ್ ಡೀಸೆಲ್ ಲಭ್ಯ

 
        ನವದೆಹಲಿ: ವಾಹನ ಸವಾರರಿಗೆ ಇದು ಒಳ್ಳೇ ಸುದ್ದಿ! ಏಪ್ರಿಲ್ 1 ರಿಂದ ದೇಶದಲ್ಲಿ ವಿಶ್ವದರ್ಜೆಯ ಸ್ವಚ್ಚವಾದ ಪೆಟ್ರೋಲ್ ಮತ್ತು ಡೀಸೆಲ್ ಸಿಗಲಿದೆ. ಸದ್ಯ ಯುರೋ- Iಗಿ ಗ್ರೇಡ್ ನೌನಿಂದ ಯುರೋ- Iಗಿಎಮಿಷನ್ ಕಂಪ್ಲೈಂಟ್ ಇಂಧನಕ್ಕೆ ಬದಲಾಗಲಿದೆ.ಈ ಬದಲಾವಣೆ ಕೇವಲ ಮೂರು ವರ್ಷಗಳಲ್ಲಿ ಸಾಧಿಸಲ್ಪಟ್ಟಿದ್ದು ಜಗತ್ತಿನ ಯಾವುದೇ ಬೃಹತ್ ಆರ್ಥಿಕತೆಗಳಲ್ಲಿ ಇದುವರೆಗೆ ಇಂತಹಾ ಬದಲಾವಣೆ ಕಂಡಿಲ್ಲ.
    ದೇಶದ ಪ್ರಮುಖ ನಗರಗಳಲ್ಲಿ ಉಸಿರುಗಟ್ಟಿಸುವ ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳ ಹೊಗೆಯನ್ನು ಕಡಿಮೆಗೊಳಿಸಲು ಈ ಕ್ರಮ ತೆಗೆದುಕೊಳ್ಲಲಾಗುತ್ತಿದೆ. ಈ ಉಪಕ್ರ್ಮದೊಡನೆ ಭಾರತ ಪ್ರತಿ ಮಿಲಿಯನ್ ಗಂಧಕದಲ್ಲಿ ಕೇವಲ 10 ಭಾಗಗಳಷ್ಟು ಹೊಂದಿರುವ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ರಾಷ್ಟ್ರಗಳ ಲೀಗ್ ಗೆ ಸೇರಲಿದೆ. ದೇಶದ ಇಂಧನ ಮಾರುಕಟ್ಟೆಯ ಅರ್ಧದಷ್ಟು ಭಾಗವನ್ನು ನಿಯಂತ್ರಿಸುವ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪ್ (ಐಒಸಿ) ಅಧ್ಯಕ್ಷ ಸಂಜೀವ್ ಸಿಂಗ್, ಬಹುತೇಕ ಎಲ್ಲಾ ಸಂಸ್ಕರಣಾಗಾರಗಳು ಅಲ್ಟ್ರಾ-ಲೋ ಸಲ್ಫರ್ ಬಿಎಸ್-ವಿ (ಯುರೋ- ಗಿI ದರ್ಜೆಗೆ ಸಮ) ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದಿಸಲು ಪ್ರಾರಂಭಿಸಿದ್ದು 2019 ರ ಅಂತ್ಯದಲ್ಲಿ ದೇಶದ ಪ್ರತಿಯೊಂದು ಹನಿ  ಇಂಧನವನ್ನು ಹೊಸ ಮಾದರಿಯ ತೈಲಕ್ಕೆ ಬದಲಾಗಿಸುವ ಕಾರ್ಯದಲ್ಲಿ ತೊಡಗಿದೆ ಎಂದರು."ಏಪ್ರಿಲ್ 1 ರಿಂದ ಬಿಎಸ್ ಗಿI ಇಂಧನವನ್ನು ಪೂರೈಸಲು ನಾವು ಸಂಪೂರ್ಣವಾಗಿ ಸಿದ್ದವಾಗಿದ್ದೇವೆ. ಬಹುತೇಕ ಎಲ್ಲಾ ಸಂಸ್ಕರಣಾಗಾರಗಳು ಬಿಎಸ್ ಗಿIಇಂಧನವನ್ನು ಪೂರೈಸಲು ಪ್ರಾರಂಭಿಸಿವೆ ಮತ್ತು ಅದೇ ಇಂಧನವು ದೇಶಾದ್ಯಂತದ ಶೇಖರಣಾಗಾರಗಳನ್ನು ತಲುಪಿದೆ. ಶೇಖರಣಾಗಾರಗಳಿಂದ ಇಂಧನವು ಪೆಟ್ರೋಲ್ ಪಂಪ್‍ಗಳಿಗೆತಲುಪಲು ಪ್ರಾರಂಭಿಸಿದೆ ಮತ್ತು ಮುಂದಿನ ಕೆಲವು ವಾರಗಳಲ್ಲಿ ಸಾರ್ವಜನಿಕರಿಗೆ  ಬಿಎಸ್-VI ದರ್ಜೆಯ ಪೆಟ್ರೋಲ್ ಮತ್ತು ಡೀಸೆಲ್ ಮಾತ್ರವೇ ಲಭ್ಯವಾಗುತ್ತದೆ."ಏಪ್ರಿಲ್ 1 ರಂದು ದೇಶದ ಎಲ್ಲಾ ಪೆಟ್ರೋಲ್ ಪಂಪ್‍ಗಳ ನಳಿಕೆಗಳಲ್ಲಿ ಬರುವ ಇಂಧನವು ಬಿಎಸ್- VIಇಂಧನವಾಗಲಿದೆ ಎಂದು ನಮಗೆ 100 ಪ್ರತಿಶತ ವಿಶ್ವಾಸವಿದೆ ಎ0ದಿದೆ.
        ಭಾರತವು 2010 ರಲ್ಲಿ 350 ಪಿಪಿಎಂ ಸಲ್ಫರ್ ಅಂಶದೊಂದಿಗೆ ಯುರೋ -3 ಸಮಾನ (ಅಥವಾ ಇಂಡಿಯಾ ಸ್ಟೇಜ್  -3) ಇಂಧನವನ್ನು ಅಳವಡಿಸಿಕೊಂಡಿತು ಮತ್ತು ನಂತರ 50 ಪಿಪಿಎಂ ಗಂಧಕದ ಅಂಶವನ್ನು ಹೊಂದಿರುವ ಬಿಎಸ್ IV  ಗೆ ಬದಲಾಗಲು  ಏಳು ವರ್ಷಗಳನ್ನು ತೆಗೆದುಕೊಂಡಿತು. ಬಿಎಸ್ Iಗಿ ನಿಂದ ಬಿಎಸ್ IV ಗೆ ಬದಲಾಗಲು ಕೇವಲ ಮೂರು ವರ್ಷಗಳು ಸಾಕಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries