ಉಪ್ಪಳ: ಸಿ.ರಾಘವ ಬಲ್ಲಾಳ್ ಅಭಿನಂದನ ಸಮಿತಿ ಪೈವಳಿಕೆ ಇದರ ಆಶ್ರಯದಲ್ಲಿ ಜರಗಿದ ಸಿ.ರಾಘವ ಬಲ್ಲಾಳ್ ಪೌರ ಸಮ್ಮಾನ ಸಮಾರಂಭದ ಕಾರ್ಯಕ್ರಮಕ್ಕೆ ತಗಲಿದ ಖರ್ಚು ವೆಚ್ಚದ ಹಾಗು ಆದಾಯದ ಲೆಕ್ಕಪತ್ರ ಮಂಡನೆ, ಅಂಗೀಕಾರ ಸಭೆ ಮಾ.1 ರಂದು ಅಪರಾಹ್ನ 3 ಗಂಟೆಗೆ ಪೈವಳಿಕೆ ನಗರ ಹೈಯರ್ ಸೆಕೆಂಡರಿ ಶಾಲಾ ವಠಾರದಲ್ಲಿ ಜರಗಲಿದೆ.
ಸಮಾರಂಭವನ್ನು ಯಶಸ್ಸುಗೊಳಿಸಲು ದುಡಿದ ಅಭಿನಂದನಾ ಸಮಿತಿ ಪದಾಧಿಕಾರಿಗಳು, ಆರ್ಥಿಕ ಸಹಾಯ ನೀಡಿದ ದಾನಿಗಳು, ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ರೀತಿಯಲ್ಲಿ ಸಹಾಯ ಮಾಡಿದ ಸ್ನೇಹಿತರು, ಉಪಸಮಿತಿಗಳ ಪದಾಧಿಕಾರಿಗಳು, ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸುವಂತೆ ಸಮಿತಿ ಅಧ್ಯಕ್ಷ ಎಸ್.ವಿ.ಭಟ್ ವಿನಂತಿಸಿದ್ದಾರೆ.