ಪೆರ್ಲ: ಎಣ್ಮಕಜೆ ತರವಾಡುಮನೆ ಪಿಲಿಚಾಮುಂಡಿ, ರಕ್ತೇಶ್ವರೀ ಮತ್ತು ಪರಿವಾರ ದೈವಗಳ ನೇಮೋತ್ಸವ ಮಾರ್ಚ್ 1ರಿಂದ 5ರ ವರೆಗೆ ಜರುಗಲಿದೆ. ಪೂರ್ವಸಂಪ್ರದಾಯದನ್ವಯ ಇಲ್ಲಿ ವರ್ಷಾವಧಿ ನೇಮೋತ್ಸವ ನಡೆದುಬರುತ್ತಿದೆ.
ಪ್ರತಿಷ್ಠಾ ದಿನಾಚರಣೆ ಅಂಗವಾಗಿ ಮಾ.1ರಂದು ಬೆಳಗ್ಗೆ ಶುದ್ಧಿಕಲಶ, ಭಜನೆ ನಡೆಯುವುದು. 2ರಂದು ಸಾಯಂಕಾಲ 7ಕ್ಕೆ ವಿಠಲ ನಾಯಕ್ ವಿಟ್ಲ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯುವುದು. 3ರಂದು ಬೆಳಗ್ಗೆ 9ಕ್ಕೆ ಹರಿಸೇವೆ, 4ರಂದು ಮಧ್ಯಾಹ್ನ 12ರಿಂದ ಶ್ರೀ ಪಿಲಿಚಾಮುಮಡಿ ದೈವದ ನೇಮೋತ್ಸವ, ರಾತ್ರಿ ಸತ್ಯದೇವತೆ ಕೊರತಿ, ಗುಳಿಗ ನೇಮ, 5ರಂದು ಬೆಳಗ್ಗೆ 7ರಿಂದ ಶ್ರೀ ರಕ್ತೇಶ್ವರೀ ದೈವದ ನೇಮೋತ್ಸವ ನಡೆಯುವುದು.