ಮಂಜೇಶ್ವರ: ಮೀಯಪದವಿನ ಚೌಟರ ಚಾವಡಿಯ ಆರ್ಶರಯದಲ್ಲಿ ಬೃಹತ್ ಕೃಷಿ ಮೇಳ 2020 ಮಾ.7 ಹಾಗೂ 8 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಮದಿಗೆ ನಡೆಯಲಿದೆ.
ಮಾ. 7 ರಂದು ಬೆಳಿಗ್ಗೆ 10ಕ್ಕೆ ಚೌಟರ ಚಾವಡಿಯ ಅಧ್ಯಕ್ಷ ಡಾ.ಡಿ.ಸಿ.ಚೌಟರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕಾಸರಗೋಡು ಸಿಪಿಸಿಆರ್‍ಐ ಯ ನಿರ್ದೇಶಕಿ ಡಾ.ಅನಿತಾ ಕರುಣ್ ಉದ್ಘಾಟಿಸುವರು. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಕರ್ನಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ವಿನಯ್ ಭಟ್ ಪಿ.ಜೆ., ತ್ರಿಶೂರಿನ ಕೇರಳ ಕೃಷಿ ವಿದ್ಯಾನಿಲಯದ ಡೀನ್ ಡಾ.ಸಿ.ನಾರಾಯಣನ್ ಕುಟ್ಟಿ, ಮೀಂಜ ಗ್ರಾ.ಪಂ.ಅಧ್ಯಕ್ಷೆ ಶಂಶಾದ್ ಶುಕೂರ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನ ಎಂ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಬಳಿಕ ನಡೆಯುವ ವಿಚಾರ ಸಂಕಿರಣದಲ್ಲಿ ಕರಾವಳಿಯಲ್ಲಿ ಹೂಕೋಸು, ಎಲೆಕೋಸು ಮತ್ತು ಕಸಿ ಟೊಮೇಟೋ ಕೃಷಿಯ ಬಗ್ಗೆ ಡಾ.ಸಿ.ನಾರಾಯಣನ್ ಕುಟ್ಟಿ, ಮಣಿಕಂಠನ್, ಡಾ.ಕೃಷ್ಣಮೂರ್ತಿ ವಾರಣಾಸಿ, ಡಾ.ಅಶ್ವನಿ ಕೃಷ್ಣಮೂರ್ತಿ ವಾರಣಾಸಿ ಪ್ರಬಂಧ-ಚರ್ಚೆ ವಿಚಾರ ವಿನಿಮಯ ನಡೆಸುವರು. ಮನೆಮನೆಗೆ ನಮ್ಮದೇ ತರಕಾರಿ ವಿಷಯದ ಬಗ್ಗೆ ಶಿವಪ್ರಸಾದ ವರ್ಮುಡಿ, ಪ್ರದೀಪ್ ಸೂರಿ ಮಾತನಾಡುವರು.
ಮಾ.8 ರಂದು ಬೆಳಿಗ್ಗೆ 10ಕ್ಕೆ ಕರಾವಳಿಯಲ್ಲಿ ಹಣ್ಣುಇಗಳ ಕೃಷಿ ವಿಷಯದಲ್ಲಿ ಡಾ.ಎಂ.ಆರ್.ದಿನೇಶ್, ಚಾಕೋಬ್ ಪಾನ್ಸಿಸ್, ಅನಿಲ್ ಬಳಂಜ ವಿಚಾರ ಮಂಡನೆ ನಡೆಸುವರು. ಕರಾವಳಿ ಕೃಷಿಗೆ ಭರವಸೆದಾಯಕ ಹಬ್ಬಗಳು ಎಂಬ ವಿಷಯದಲ್ಲಿ ಡಾ.ಜಿ.ಕರುಣಾಕರನ್, ನಿತಿನ್ ಅಲೆಕ್ಸ್, ಬಾಲಕೃಷ್ಣ ಮಾರ್ಗದರ್ಶನ ನೀಡುವರು. ಹಣ್ಣು-ತರಕಾರಿಗಳ ಮೌಲ್ಯ ವರ್ಧನೆಯ ಬಗ್ಗೆ ವಸಂತಿ ಮುಡಿಪು, ಗಣಪತಿ ಭಟ್ ಹೊನ್ನಾವರ ಮಾರ್ಗದರ್ಶನ ನೀಡುವರು. ಹಣ್ಣು-ತರಕಾರಿ ಮಾರುಕಟ್ಟೆಯ ಬಗ್ಗೆ ಕೆ.ನಟರಾಜ ಹೆಗ್ಡೆ, ಚಂದ್ರಮೌಳಿ ಶೆಣೈ, ಗೋಪಾಲಕೃಷ್ಣ ಭಟ್ ಅಡ್ಕತ್ತಿಮಾರ್ ಮೊದಲಾದವರು ಮಾರ್ಗದರ್ಶನ ನೀಡುವರು.