HEALTH TIPS

ತ್ರಿದಿನಗಳ ವೇದ-ನಾದ-ಯೋಗ ತರಂಗಿಣಿ 2020ಗೆ ಚಾಲನೆ-ಜೀವನದ ಆತ್ಯಂತಿಕ ವಿಕಾಸವು ಆಂತರಂಗಿಕ:ಡಾ.ವಸಂತಕುಮಾರ್ ಪೆರ್ಲ ಅಭಿಮತ


          ಬದಿಯಡ್ಕ: ಸೃಷ್ಟಿ, ಸ್ಥಿತಿ, ಲಯಗಳ ಸಂಕೇತವಾದ ಓಂಕಾರದ ವಿಸ್ಕøತ ರೂಪವಾಗಿ ಸಂಗೀತ ಶಾಸ್ತ್ರವು ಲೋಕಹಿತಕ್ಕಾಗಿ ಅರ್ಪಿಸಲ್ಪಟ್ಟಿದೆ. ಭೌತಿಕ ಜ್ಞಾನದ ಜೊತೆಗೆ ಸಂಸ್ಕಾರ, ಸಂಸ್ಕøತಿಯನ್ನು ಬದುಕಲ್ಲಿ ಅಳವಡಿಸುವ ಅಗತ್ಯ ಇದ್ದು, ಆಧುನಿಕ ಉಪಭೋಗ ಸಂಸ್ಕøತಿ ವಿನಾಶಕ್ಕೆ ಕಾರಣವಾಗುತ್ತಿರುವುದು ಆತಂಕಕಾರಿ. ಈ ನಿಟ್ಟಿನಲ್ಲಿ ಭಾರತೀಯ ಪರಂಪರೆಯ ಜ್ಞಾನ ಮೂಲದ ವೇದ, ಸಂಗೀತ ಮೂಲದ ನಾದ ಮತ್ತು ಆರೋಗ್ಯ ಮೂಲದ ಯೋಗದ ಮರು ಓದಿನ ಅಗತ್ಯ ಇದೆ ಎಂದು ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ, ಸಾಹಿತಿ ಡಾ.ವಸಂತಕುಮಾರ್ ಪೆರ್ಲ ಅವರು ತಿಳಿಸಿದರು.
         ಬಳ್ಳಪದವು ನಾರಾಯಣೀಯಂ ಸಂಗೀತ ಕಲಾ ಶಾಲೆಯಲ್ಲಿ ಶುಕ್ರವಾರದಿಂದ ಆರಂಭಗೊಂಡ ವೇದ ನಾದ ಯೋಗ ತರಂಗಿಣಿ 2020 ಎಂಬ ವಿಶೇಷ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
          ಯೋಗಶಾಸ್ತ್ರ, ಆಯುರ್ವೇದ ಮತ್ತು ಸಂಗೀತ ಕಲೆ ವೇದಗಳ ತಳಹದಿಯಲ್ಲಿ ಬೆಳೆದುನಿಂತ ಸಂಪನ್ನತೆಯಾಗಿದೆ. ಜಗತ್ತಿನ ಆವಿರ್ಭಾಹದ ಮೂಲವಾದ ನಾದದ ಸ್ವರೂಪ ಭಾಗವಾದ ಸಂಗೀತ ಶಾಸ್ತ್ರ ದೇವ-ಭಾವ ಸಂಬಂಧಗಳಿಂದ ಮಹತ್ವದ್ದು ಎಂದು ಅವರು ತಿಳಿಸಿದರು. ಮನುಷ್ಯ ಜೀವನದ ಆತ್ಯಂತಿಕ ವಿಕಾಸವು ಆಂತರಂಗಿಕವಾದುದಾಗಿದ್ದು, ಭೌತಿಕತೆಯಲ್ಲಿ ಅಲ್ಲ. ಅಂತರಂಗದ ವಿಕಾಸಕ್ಕೆ ಸಂಗೀತ ಶಾಸ್ತ್ರದ ಶಾಸ್ತ್ರೀಯ ಅಧ್ಯಯನದ ಮೂಲಕ ನೆಮ್ಮದಿಯನ್ನು ಕಾಣಬಹುದು ಎಂದ ಅವರು ನಾರಾಯಣೀಯಂನ ಅಪೂರ್ವ ಸಂಗೀತ ಕೈಂಕರ್ಯಗಳು ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಅಲಭ್ಯವಾಗಿರುವ ಅಪೂರ್ವ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದು ಅವರು ತಿಳಿಸಿದರು.
          ಸಮಾರಂಭವನ್ನು ಜಂಟಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದ ಚೆನ್ನೈಯ ಅಬಕಾರಿ ವಿಭಾಗೀಯ ನ್ಯಾಯಾಧೀಶ ಪಿ.ದಿನೇಶ್ ಹಾಗೂ ಡೆಹ್ರಾಡೂನ್ ನ ಕೇದಾರನಾಥ್-ಬದರೀನಾಥ್ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಸದಸ್ಯ ಗಂಗಾಧರ ಎಸ್.ಕುಷ್ಠಗಿ ಮಾತನಾಡಿ ಶುಭಹಾರೈಸಿದು.
    ಆಲುವ ತಂತ್ರವಿದ್ಯಾಪೀಠದ ಅಧ್ಯಕ್ಷ ಮುಲ್ಲಪ್ಪಳ್ಳಿ ಕೃಷ್ಣ ನಂಬೂದಿರಿ, ಈಶಾ ಪೌಂಡೇಶನ್ ನ ಯೋಗ ಮಾರ್ಗದರ್ಶಕ ಪ್ರವೀಣ್, ರಾಧಾಕೃಷ್ಣ ಭಟ್ ಉಪಸ್ಥಿತರಿದ್ದು ಮಾತನಾಡಿದರು. ವೀಣಾವಾಧಿನಿಯ ನಿರ್ದೇಶಕ ವಿದ್ವಾನ್.ಯೋಗೀಶ ಶರ್ಮ ಬಳ್ಳಪದವು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಧವನ್ ನಂಬೂದಿರಿ ವಂದಿಸಿದರು. ಅರ್ಥಾ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.
    ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 5.45ಕ್ಕೆ  ಮಹಾಗಣಪತಿ ಹವನದೊಂದಿಗೆ ಸಮಾರಂಭ ಆರಂಭಗೊಂಡಿತು. 6ಕ್ಕೆ ಈಶ ಪೌಂಡೇಶನ್ ನೇತೃತ್ವದಲ್ಲಿ ಉಪ-ಯೋಗ ಶಿಬಿರ ನಡೆಯಿತು. ಮಧ್ಯಾಹ್ನ 1.30ಕ್ಕೆ ಮಹಾ ಶ್ರೀಚಕ್ರಾರಾಧನೆ, ಸಂಜೆ 7.30 ರಿಂದ ನವಾವರಣ ಪೂಜೆಗಳು ಮುಲ್ಲಪ್ಪಳ್ಳಿ ಕೃಷ್ಣ ನಂಬೂದಿರಿ ಅವರ ನೇತೃತ್ವದಲ್ಲಿ ನಡೆಯಿತು. ಅಪರಾಹ್ನ 1.45ಕ್ಕೆ ಬ್ರಹ್ಮಶ್ರೀ ಶ್ರೀಧರ ಭಟ್ ಸಜಂಗದ್ದೆ ಮತ್ತು ತಂಡದವರಿಂದ ವೇದಘೋಷ, 2.30 ರಿಂದ ಎಲೂರ್ ಬಿಜು ಅವರಿಂದ ಸೋಪಾನ ಸಂಗೀತ, 3.45 ರಿಂದ ವೀಣಾವಾದಿನಿ ತಂಡದಿಂದ ನವಾವರಣ ಕೃತಿಗಳ ಗಾಯನ ನಡೆಯಿತು. ಸಂಜೆ 6ರಿಂದ ಯೋಗೀಶ ಶರ್ಮಾ ಬಳ್ಳಪದವು ಅವರಿಂದ ದೇವೀ ಸಂಕೀರ್ತನೆ, 7.30ಕ್ಕೆ ಮಂಗಲ ನೀರಾಜನ ನಡೆಯಿತು. 
          ಇಂದಿನ ಕಾರ್ಯಕ್ರಮ:
    ಫೆ.1 ರಂದು ಬೆಳಿಗ್ಗೆ 9ಕ್ಕೆ ನವಗ್ರಹ ಕೃತಿಗಳ ಆಲಾಪನೆ, ರಸಿಕಪ್ರಿಯ, 10.30 ರಿಂದ ರತ್ನಮಾಲಾ ಅವರಿಂದ, 11 ರಿಂದ ಅಶ್ವಿನಿ ಮಳಿವು, 11.30ರಿಂದ ಪಲ್ಲವಿ ಸುರತ್ಕಲ್, ಅಪರಾಹ್ನ 2 ರಿಂದ ಕೃಷ್ಣಕುಮಾರಿ ಮುಣ್ಚಿಕ್ಕಾನ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಸಂಜೆ 4ರಿಂದ ವಿದುಷಿಃ ಅಯನಾ ಪೆರ್ಲ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. 5ರಿಂದ ಹಿಂದೂಸ್ಥಾನಿ ಸಂಗೀತ ವಾದ್ಯೋಪಕರಣಗಳ ಗೋಷ್ಠಿ ನಡೆಯಲಿದ್ದು ಉಸ್ತಾದ್ ರಫೀಕ್ ಖಾನ್ ಮಂಗಳೂರು ಸಿತಾರ್ ಹಾಗೂ ರತ್ನಶ್ರೀ ಅಯ್ಯರ್ ತಬ್ಲಾದಲ್ಲಿ ಭಾಗವಹಿಸುವರು. 7.30ರಿಂದ ಕಲಾಮಂಡಲಂ ಮೋಹನಕೃಷ್ಣನ್ ತಂಡದವರಿಂದ ಓಟ್ಟಂ ತುಳ್ಳಲ್ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries