ಕುಂಬಳೆ: 1957 ಭಾಷಾವಾರು ಪ್ರಾಂತ್ಯ ವಿಂಗಡಣೆ ಬಳಿಕ ಕಾಸರಗೋಡು ತುಳುವರು-ಕನ್ನಡಿಗರು ಪಡುವ ಬವಣೆಗಳು ಪ್ರಸ್ತುತ ಎಲ್ಲೆ ಮೀರುತ್ತಿದೆ. ಕಾಸರಗೋಡಿನಲ್ಲಿ ನಿರಂತರ ಕನ್ನಡ ಕೆಲಸಗಳ ಆಗುತ್ತಿದ್ದರೂ, ವೈಯಕ್ತಿಕ ನೆಲೆಗಳಲ್ಲಿ ಏಕೀಕರಣ ಇಲ್ಲದೆ ಒಕ್ಕೊರಲ ಧ್ವನಿಯಾಗುವುದಿಲ್ಲ. ಭಾರತ ಸ್ವಾತಂತ್ರ್ಯದ ನಂತರ ಕೇವಲ ಕನ್ನಡದ ಹೆಸರಲ್ಲಿ ಮಾತ್ರ ಚುನಾವಣೆ ಗೆಲ್ಲುತ್ತಿದ್ದ ಕನ್ನಡಿಗರು ಇಂದು ಹಲವು ರಾಜಕೀಯ ಪಕ್ಷಗಳಲ್ಲಿ ಸೇರಿಕೊಂಡು ಕನ್ನಡದ ಏಕತೆಗೆ ಧಕ್ಕೆ ಉಂಟಾಗಿದೆ. ಈ ಎಲ್ಲಾ ಉದ್ದೇಶಗಳನ್ನಿಟ್ಟುಕೊಂಡು ಸಮಸ್ತ ಕನ್ನಡಿಗರ ಒಕ್ಕೊರಲ ಧ್ವನಿಯಾಗಬಲ್ಲ, ಕನ್ನಡಿಗರಲ್ಲಿ ನವಚೇತನ ಭಾವೈಕ್ಯ ತುಂಬುವ ವೇದಿಕೆಯನ್ನು ಉಂಟುಮಾಡಬೇಕೆಂಬ ನಿಟ್ಟಿನಲ್ಲಿ, ಸಮಸ್ತ ಕನ್ನಡಿಗರ ನೇತೃತ್ವದಲ್ಲಿ ರಾಷ್ಟ್ರೀಯ ಕನ್ನಡಸಿರಿ-2020 ಎಂಬ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಏ. 10, 11, ಮತ್ತು 12 ರಂದು ಕಾಸರಗೋಡಿನ ಸರೋವರ ಕ್ಷೇತ್ರ ಅನಂತಪುರ ದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರು ಸಮಿತಿ ರೂಪೀಕರಣ ಮತ್ತು ಸಮಾಲೋಚನ ಸಭೆ ಫೆ. 15 ರಂದು ಶನಿವಾರ ಹೋಟೆಲ್ ವುಡ್ ಲ್ಯಾಂಡ್ಸ್‍ನಲ್ಲಿ ಸಂಜೆ 4.ರಿಂದ ಆಯೋಜಿಸಲಾಗಿದೆ. ಎಲ್ಲಾ ಕನ್ನಡ ಅಭಿಮಾನಿಗಳು ಈ ಸಭೆಯಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.