ಕಾಸರಗೋಡು: ಮುಂದಿನ ತಲೆಮಾರನ್ನು ಜವಾಬ್ದಾರಿಯುತರನ್ನಾಗಿಸುವ ಉದ್ದೇಶದಿಂದ ಕೇರಳ ಕೇಂದ್ರ ವಿ.ವಿ.ಯ ಸಾಮಾಜಿಕ ಕಾರ್ಯ ವಿಭಾಗ, ಜಿಲ್ಲಾ ಶಿಶು ಸಂರಕ್ಷಣ ಘಟಕ, ಅಬಕಾರಿ ಇಲಾಖೆ ಜಂಟಿ ವತಿಯಿಂದ `ಒಪ್ಪಂ 2020' ಕಾರ್ಯಕ್ರಮ ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಸಿ.ಎ.ಬಿಂದು ಉದ್ಘಾಟಿಸಿದರು. ಸಹಾಯಕ ಪ್ರಾಚಾರ್ಯ ಡಾ.ಜಿಲ್ಲಿ ಜಾನ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಸಿವಿಲ್ ಅಬಕಾರಿ ಅಧಿಕಾರಿ ಎನ್.ಜನಾರ್ದನ, ಬದಿಯಡ್ಕ ಅಬಕಾರಿ ಪ್ರಿವೆಂಟೀವ್ ಅಧಿಕಾರಿ ಸಿ.ಕೆ.ವಿ.ಸುರೇಶ್ ಜನಜಾಗೃತಿ ಉಪನ್ಯಾಸ ನಡೆಸಿದರು. ಎಂ.ಎಸ್.ಡಬ್ಲ್ಯೂ. ವಿದ್ಯಾರ್ಥಿ ವಿ.ಆರ್.ಅಖಿಲ್ ತರಗತಿ ನಡೆಸಿದರು. ಶಿಶು ಸಂರಕ್ಷಣೆ ಅಧಿಕಾರಿ ಎ.ಜಿ.ಫೈಝಲ್, ಡಾ.ದಿಲೀಪ್ ದಿವಾಕರ್, ಮಹಮ್ಮದ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ಎಚ್.ಎಂ. ಪಿ.ಮಿನಿ ಸ್ವಾಗತಿಸಿ, ಗೂಗ್ಲೋತ್ ನರೇಶ್ ವಂದಿಸಿದರು.