ಕುಂಬಳೆ: ಸಮಸ್ತ ಕನ್ನಡಿಗರ ನೇತೃತ್ವದಲ್ಲಿ ಏ.10 ರಿಂದ 12ರ ವರೆಗೆ ಸರೋವರ ಕ್ಷೇತ್ರವೆಂದೇ ಖ್ಯಾತವಾಗಿರುವ ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರ ಪರಿಸರದಲ್ಲಿ ಐತಿಹಾಸಿಕವಾಗಿ ಆಯೋಜಿಸಲಾಗುವ ರಾಷ್ಟ್ರೀಯ ಕನ್ನಡ ಸಿರಿ-2020 ರಾಷ್ಟ್ರೀಯ ಕನ್ನಡ ಸಮ್ಮೇಳನದ ಯಶಸ್ವಿ ನಿರ್ವಹಣೆಗಾಗಿ ವಿವಿಧ ಸ್ತರಗಳಲ್ಲಿ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಭಾನುವಾರ ಕುಂಬಳೆಯಲ್ಲಿ ನಡೆದ ಸ್ವಾಗತ ಸಮಿತಿ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ಜಯದೇವ ಖಂಡಿಗೆ, ಎಂ.ವಿ.ಮಹಾಲಿಂಗೇಶ್ವರ ಭಟ್, ಎಸ್.ವಿ.ಭಟ್, ಪ್ರದೀಪ್ ಶೆಟ್ಟಿ ಬೇಳ, ಗೋಪಾಲ ಶೆಟ್ಟಿ ಅರಿಬೈಲು ಹಾಗೂ ಪ್ರೊ.ಎ.ಶ್ರೀನಾಥ್ ಅವರನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.
ಕಾಸರಗೋಡು-ಕುಂಬಳೆ ಘಟಕಗಳ ಸಭೆ:
ಕನ್ನಡ ಸಿರಿ ಸಮ್ಮೇಳನದ ಕಾಸರಗೋಡು ನಗರ ಘಟಕದ ಸಭೆ ಫೆ.19 ರಂದು ಬುಧವಾರ ಸಂಜೆ 4.30ಕ್ಕೆ ಕೋಟೆಕಣಿ ರಸ್ತೆಯಲ್ಲಿರುವ ಶ್ರೀರಾಮನಾಥ ಭವನ ಸಮಿತಿ ಸಭಾಂಗಣದಲ್ಲಿ ನಡೆಯಲಿದೆ. ಜೊತೆಗೆ ಕುಂಬಳೆ ಘಟಕದ ಸಭೆ ಫೆ.20 ರಂದು ಸಂಜೆ 4.30ಕ್ಕೆ ಕುಂಬಳೆಯಲ್ಲಿರುವ ಸಮ್ಮೇಳನದ ಪ್ರಧಾನ ಕಾರ್ಯಾಲಯ ಮಾಧವ ಪೈ ಸಭಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಕನ್ನಡ ಸಿರಿ ಸಮ್ಮೇಳನದ ಪ್ರಕಟಣೆಯಲ್ಲಿ ಸಂಬಂಧಪಟ್ಟವರು ವಿನಂತಿಸಿದ್ದಾರೆ.