ಮುಳ್ಳೇರಿಯ: ಕಾಸರಗೋಡು ಜಿಲ್ಲಾ ಕ್ವಿಝ್ ಅಸೋಸಿಯೇಶನ್, ಜನಮೈತ್ರಿ ಪೆÇಲೀಸ್ ಆದೂರು, ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ವಾಚನಾಲಯ ಮತ್ತು ಗ್ರಂಥಾಲಯ ಮುಳ್ಳೇರಿಯ ಇವುಗಳ ಜಂಟಿ ಆಶ್ರಯದಲ್ಲಿ ಫೆ.23 ರಂದು ಬೆಳಗ್ಗೆ 9.30 ಕ್ಕೆ ಮುಳ್ಳೇರಿಯ ಗಜಾನನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಾಂತ ಕ್ವಿಝ್-2020 ನಡೆಯಲಿದೆ.
ಗ್ರಾ.ಪಂ. ಸದಸ್ಯೆ ಕೆ.ರೇಣುಕಾ ದೇವಿ ಅಧ್ಯಕ್ಷತೆ ವಹಿಸುವರು. ಆದೂರು ಪೆÇಲೀಸ್ ಠಾಣೆಯ ವೃತ್ತ ನಿರೀಕ್ಷಕ ಕೆ.ಪ್ರೇಮ್‍ಸದನ್ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಕಾರಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿನೋದನ್ ನಂಬ್ಯಾರ್, ಕಾರಡ್ಕ ಗ್ರಾಮ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ವಿಜಯ ಕುಮಾರ್, ಪುತ್ತೂರಿನ ಸೈಂಟ್ ಪಿಲೋಮಿನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪೆÇ್ರ.ಪ್ರಸನ್ನ ರೈ ಕೆ. ಭಾಗವಹಿಸುವರು. ವಿ.ತಂಬಾನ್ ಮಾಸ್ತರ್, ಕೆ.ಬಾಲಕೃಷ್ಣ ರೈ, ಕೆ.ಹೇಮಲತಾ ಟೀಚರ್, ಚಂದ್ರನ್ ಮೊಟ್ಟಮ್ಮಲ್ ಶುಭಹಾರೈಸುವರು.