HEALTH TIPS

ಏತಡ್ಕದಲ್ಲಿ ವೈ.ಮಹಾಲಿಂಗ ಭಟ್ ಸಂಸ್ಮರಣೆ-ಶೇಣಿ ಸ್ಮøತಿ ಸರಣಿ 2020


            ಬದಿಯಡ್ಕ: ವರ್ತಮಾನ, ಭವಿಷ್ಯಗಳ ಸಂಘರ್ಷ ರಹಿತ ಬದುಕಿಗೆ ಹಿರಿಯರ ಆದರ್ಶಗಳು ಮಾರ್ಗದರ್ಶಿಯಾಗಿ ಎಂದಿಗೂ ಕೈದೀವಿಗಳಾಗಿವೆ. ಪ್ರತಿಯೊಂದು ಪ್ರದೇಶಗಳಿಗೂ ಸ್ಥಳೀಯ ಚರಿತ್ರೆಗಳು ಮಹತ್ವಪೂರ್ಣ ರೋಚಕ ಇತಿಹಾಸಗಳನ್ನು ಹೊಂದಿದ್ದು, ಅನೇಕ ಸಾಧನಾಶೀಲ ಮಹಾತ್ಮರ ಜೀವ-ಜೀವನ ತ್ಯಾಗಗಳನ್ನು ಹೊಂದಿರುತ್ತದೆ ಎಂದು ಪ್ರಗತಿಪರ ಕೃಷಿಕ, ಹವ್ಯಾಸಿ ಪತ್ರಕರ್ತ, ಲೇಖಕ ಚಂದ್ರಶೇಖರ ಏತಡ್ಕ ಅವರು ತಿಳಿಸಿದರು.
        ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೋಡು ಹಾಗೂ ಯಕ್ಷಸ್ನೇಹಿ ಬಳಗ ಪೆರ್ಲ ಇವುಗಳ ಜಂಟಿ ಆಶ್ರಯದಲ್ಲಿ ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಯಕ್ಷಗಾನ ತಾಳಮದ್ದಳೆ ಅಭಿಯಾನ-ಶೇಣಿ ಸ್ಮøತಿ ಸರಣಿ 2020 ಸಮಾರಂಭದ ಎರಡನೇ ದಿನವಾದ ಶನಿವಾರ ನಡೆದ ದಿ.ವೈ.ಮಹಾಲಿಂಗ ಭಟ್ ಏತಡ್ಕ ಅವರ ಸಂಸ್ಮರಣಾ ಭಾಷಣಗೈದು ಅವರು ಮಾತನಾಡಿದರು.
       ಗ್ರಾಮಾಭಿವೃದ್ದಿಯ ಕನಸುಗಳನ್ನು ಸಾಕಾರಗೊಳಿಸಿದ ವೈ.ಮಹಾಲಿಂಗ್ ಭಟ್ ಅವರ ಅಪರಿಮಿತ ಸಮಾಜ ಸೇವಾ ತತ್ಪರತೆಯ ಫಲವಾಗಿ ಏತಡ್ಕದ ಸಂಪರ್ಕ ರಸ್ತೆಗಳಾದ ಏತಡ್ಕ-ಗಾಳಿಗೋಪುರ-ಕಿನ್ನಿಂಗಾರು ರಸ್ತೆಗಳ ನಿರ್ಮಾಣದಲ್ಲಿ ನೇತೃತ್ವ ವಹಿಸಿದ್ದಲ್ಲದೆ ಶಾಲಾ ಪ್ರಬಂಧಕರಾಗಿ ಅಹರ್ನಿಶಿ ದುಡಿದು ನಾಡ ಶಿಲ್ಪಿಗಳಾಗಿ ಮಾರ್ಗದರ್ಶಿ ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂದು ನೆನಪಿಸಿದರು.
        ಏತಡ್ಕ ಅನುದಾನಿತ ಶಾಲಾ ಪ್ರಬಂಧಕ ವೈ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಡಾ.ವೈ.ಸುಬ್ರಾಯ ಭಟ್, ಶೇಣಿ ರಂಗಜಂಗಮ ಟ್ರಸ್ಟ್‍ನ ವಿ.ಜಿ.ಕಾಸರಗೋಡು, ಯಕ್ಷಸ್ನೇಹಿ ಬಳಗದ ಡಾ.ಸತೀಶ ಪುಣಿಚಿತ್ತಾಯ ಪೆರ್ಲ, ವೈ.ಶಾಮ ಭಟ್, ವೈ.ಶಂಕರ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ಶುಭಹಾರೈಸಿದರು.
       ಸಮಾರಂಭದಲ್ಲಿ ವೈ.ಶಾಮ ಭಟ್ ಹಾಗೂ ಗಣೇಶ ಕುತ್ಯಾಡಿ ರಚಿಸಿದ ಗ್ರಾಮಾಭ್ಯುದಯದ ಹರಿಕಾರ ವೈ.ಮಹಾಲಿಂಗ ಭಟ್ ಏತಡ್ಕ ಕೃತಿಯನ್ನು ಹಿರಿಯ ಸಮಾಜ ಸೇವಕ, ಪ್ರಗತಿಪರ ಕೃಷಿಕ ಪತ್ತಡ್ಕ ಗಣಪತಿ ಭಟ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸ್ಥಳೀಯ ಸಾಧಕರ ಜೀವನ-ಸಾಧನೆಗಳನ್ನು ಪರಿಚಯಿಸುವ ಕೃತಿಗಳು ಇನ್ನಷ್ಟು ಪ್ರಕಟಗೊಳ್ಳಬೇಕು. ಈ ಮೂಲಕ ಯುವ ತಲೆಮಾರಿಗೆ ಪ್ರೇರಣದಾಯಿ ವ್ಯಕ್ತಿತ್ವಗಳ ಪರಿಚಯವಾಗಿ ಬದುಕಿಗೆ ಬೆಳಕಾಗುತ್ತದೆ ಎಂದರು. ವೈ.ಮಹಾಲಿಂಗ ಭಟ್ ಅವರ ಒಡನಾಡಿ, ಸಮಾಜ ಸೇವಕ, ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ರಾಜಾರಾಮ ಮದ್ಯಸ್ಥ ಕುಂಜಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ವಾಲಿಮೋಕ್ಷ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries