ಮುಳ್ಳೇರಿಯ:ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎರಡು ದಿನಗಳ ವಿಶೇಷ ಶಿಬಿರ 'ವಿನಿಮಯ-2020' ಗೆ ಶನಿವಾರ ಚಾಲನೆ ನೀಡಲಾಯಿತು.
ಬೇಕಲ ಉಪಜಿಲ್ಲೆಯ 6 ಶಾಲೆಗಳ 40 ವಿದ್ಯಾರ್ಥಿಗಳು, ಕುಂಬಳೆ ಉಪಜಿಲ್ಲೆ ಬೆಳ್ಳೂರು ಶಾಲೆಯ 40 ವಿದ್ಯಾರ್ಥಿಗಳು ಶಿಬಿರದಲ್ಲಿ ನೋಂದಣಿ ನಡೆಸಿದರು. ಬೇಕಲ ಉಪಜಿಲ್ಲೆಯ ವಿದ್ಯಾರ್ಥಿಗಳನ್ನು ಬೆಳ್ಳೂರು ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರ ನೇತೃತ್ವದಲ್ಲಿ ಸ್ವಾಗತಿಸಲಾಯಿತು.ಸಭಾ ಕಾರ್ಯಕ್ರಮದಲ್ಲಿ ಬೇಕಲ ಬಿ.ಅರ್.ಸಿ.ದಿಲೀಪ್ ಕುಮಾರ್,ಬಿ.ಪಿ.ಸಿ.ಡಾ.ವಿನೋದ್ ಕುಮಾರ್, ಕುಂಬಳೆ ಬಿ.ಪಿ.ಒ. ಶಿವರಾಮ, ಬೆಳ್ಳೂರು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎನ್.ಎಚ್. ಮೊಹಮ್ಮದ್, ಗ್ರಾ.ಪಂ. ಸದಸ್ಯ ಬಾಬು ಅನೆಕ್ಕಳ, ಎಸ್.ಎಂ.ಸಿ.ಅಧ್ಯಕ್ಷ ಶಶಿಧರ ಗೋಳಿಕಟ್ಟೆ, ಮಾತೃಸಂಘದ ಅಧ್ಯಕ್ಷೆ ಶಾಂತಾ, ಮುಖ್ಯ ಶಿಕ್ಷಕಿ ವಾರಿಜಾ ಉಪಸ್ಥಿತರಿದ್ದರು.