ಕಾಸರಗೋಡು: ಭಾರತ ಜನಗಣತಿ 2021ರ ಪ್ರಾರಂಭ ಚಟುವಟಿಕೆಗಳು ಆರಂಭಗೊಂಡಿವೆ. ಈ ಬೃಹತ್ ಕಾರ್ಯದಲ್ಲಿ ಸರಿಸುಮಾರು 30 ಲಕ್ಷದಷ್ಟು ಸರಕಾರಿ ಸಿಬ್ಬಂದಿ ಮಾಹಿತಿ ಸಂಗ್ರಹಕ್ಕಾಗಿ ಮನೆಮನೆ ಸಂದರ್ಶನ ನಡೆಸುವರು. ಜನಗಣತಿಯ ಇತಿಹಾಸದಲ್ಲೇ ಪ್ರಥಮಬಾರಿಗೆ ಸಿಬ್ಬಂದಿ ಮೊಬೈಲ್ ಆಪ್ ಬಳಸಲಿದ್ದಾರೆ. ಜೊತೆಗೆ ಜನಗಣತಿ ಚಟುವಟಿಕೆಗಳ ಯಥಾ ವೇಳೆಗಿನ ಪ್ರಗತಿ ಪರಿಶೀಲನೆಗೆ ವೆಬ್ ಪೆÇೀರ್ಟಲ್ ಬಳಸಲಾಗುವುದು. ಈ ನಿಟ್ಟಿನಲ್ಲಿ ದೇಶದ ಜನಗಣತಿ ಇತಿಹಾಸದಲ್ಲಿ ಮೊದಲ "ಡಿಜಿಟಲ್ ಜನಗಣತಿ" ಎಂಬ ವಿಶೇಷತೆಯೂ 2021ನೇ ಗಣತಿ ಚಟುವಟಿಕೆಗೆ ಇದೆ. ಜನಗಣತಿ ವೇಳೆ ನೀಡುವ ಮಾಹಿತಿಗಳು ಪೂರ್ಣ ಗುಪ್ತವಾಗಿರುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಮನೆ ಸಂದರ್ಶನ ನಡೆಸುವ ಎನ್ಯಮರೇಟರ್ ಗಳಿಗೆ, ಮೇಲ್ವಿಚಾರಕರಿಗೆ ನಿಖರ ಮಾಹಿತಿಗಳನ್ನು ನೀಡಬೇಕು ಜೊತೆಗೆ ಜನಗಣತಿಗೆ ಸಂಪೂರ್ಣ ಸಹಕಾರವನ್ನು ನೀಡಬೇಕು. ಇದು ಭಾರತ ಜನಗಣನತಿ 2021ರ ಯಶಸ್ಸಿಗೆ ಅನಿವಾರ್ಯವಾಗಿದೆ.
ಜನಗಣತಿಯ ಪ್ರಥಮ ಹಂತವಾಗಿ ಮನೆಗಳ ಪಟ್ಟಿ ಸಿದ್ದಪಡಿಸುವಿಕೆ ಮತ್ತು ಮನೆಗಳ ಗಣನತಿ ನಡೆಯಲಿದೆ. ಸರಿಸುಮಾರು 77 ಸಾವಿರ ಸರಕಾರಿ ಸಿಬ್ಬಂದಿ ಕೇರಳದಲ್ಲಿ ಗಣತಿಗಾಗಿ ನೇಮಕಗೊಳ್ಳಲಿದ್ದಾರೆ. ದ್ವಿತೀಯ ಹಂತದಲ್ಲಿ ಜನಗಣನತಿ 2021 ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ.
ಪ್ರಥಮ ಹಂತದಲ್ಲಿ ಮನೆಗಳ ಪಟ್ಟಿ ಸಿದ್ಧಪಡಿಸುವುದರ ಜೊತೆಗೆ ನಿವಾಸ ಸ್ಥಿತಿ, ಮೂಲಭೂತ ಸೌಲಭ್ಯಗಳ ಲಭ್ಯತೆ, ಮನೆಗಳ ಕೊರತೆ ಇತ್ಯಾದಿ ಅವಲೋಕನ ನಡೆಸುವ ನಿಟ್ಟಿನಲ್ಲಿ ಕುಟುಂಬಕ್ಕೆ ಲಭಿಸಿರುವ ವಿವಿಧ ಸೌಲಭ್ಯಗಳ ಸಂಬಂಧ ಪ್ರಶ್ನೆಗಳನ್ನು , ಕುಟುಂಬದ ಸ್ವಾಮ್ಯದಲ್ಲಿರುವ ಸಾಮಾಗ್ರಿಗಳ ಸಂಬಂಧ ಪ್ರಶ್ನೆಗಳ ಸಹಿತ 31 ಪ್ರಶ್ನೆಗಳು ಅಳವಡಿಸಲಾಗಿದೆ.
ಪ್ರಶ್ನೆಗಳು ಯಾವುವು ಗೊತ್ತಾ:
: ಕಟ್ಟಡದ ನಂಬ್ರ,ಜನಗಣನತಿ ಮನೆಯ ನಂಬ್ರ, ಜನಗಣತಿ ಮನೆಯ ನಂಬ್ರ, ಭಿತ್ತಿ, ಮೇಲ್ಫಾವಣೆ ಇತ್ಯಾದಿಗೆ ಬಳಸಿದ ಪ್ರಧಾನ ಸಾಮಾಗ್ರಿಗಳು., ಜನಗಣನತಿ ಮನೆಯ ಬಳಕೆ, ಜನಗಣನತಿ ಮನೆಯ ಸ್ಥಿತಿ, ಕುಟುಂಬದ ನಂಬ್, ಕುಟುಂಬದಲ್ಲಿ ಶಾಸ್ವತ ನಿವಾಸ ಮಾಡುವವರ ಒಟ್ಟು ಸಂಖ್ಯೆ,,ಕುಟುಂಬದ/ ಯಜಮಾನನ ಹೆಸರು, , ಗಂಡು/ಹೆಣ್ಣು/ಟ್ರಾನ್ಸ್ ಜೆಂಟರ್ ವ್ಯಕ್ತಿಯೋ, ಪರಿಶಿಷ್ಟ ಜಾತಿ-ಪಂಗಡ ಜನಾಂಗದವರೋ, ಮನೆಯ ಮಾಲೀಕೆ,, ವಸತಿಗೆ ಕುಟುಂಬಕ್ಕೆ ಮಾತ್ರ ಸ್ವಾಮ್ಯದಲ್ಲಿರುವ ಕೊಠಡಿಗಳ ಸಂಖ್ಯೆ, ಪ್ರಧಾನ ಕುಡಿಯುವ ನೀರಿನ ಮೂಲ, ಕುಡಿಯುವ ನೀರಿನ ಲಭ್ಯತೆ, ಬೆಳಕಿನ ಪ್ರಧಾನ ಆಸರೆ, ಶೌಚಾಲಯ ಲಭ್ಯತೆ, ಶೌಚಾಲಯ ಹೊಂದಿರುವ ದೂರ, ಕೊಳಚೆ ನೀರಿನ ರವಾನೆ ಸೌಲಭ್ಯ, ಸ್ನಾನಕ್ಕಿರುವ ಸೌಲಭ್ಯ,, ಅಡುಗೆಮನೆ ಎಲ್.ಪಿ.ಜಿ/ಪಿ,ಎನ್.ಜಿ. ಸಂಪರ್ಕ ಲಭ್ಯತೆ, ಅಡುಗೆ ಮನೆಯಲ್ಲಿ ಬಳಸುವ ಪ್ರಧಾನ ಇಂಧನ, ರೇಡಿಯೋ/ಟ್ರಾನ್ಸಿಸ್ಟರ್, ಟೆಲಿವಿಷನ್, ಇಂಟರ್ ನೆಟ್ ಲಭ್ಯತೆ, ಲ್ಯಾಪ್ ಟಾಪ್/ಕಂಪ್ಯೂಟರ್, ಟೆಲಿಫೆÇೀನ್, ಮೊಬೈಲ್/ ಸ್ಮಾರ್ಟ್ ಫೆÇೀನ್, ಸೈಲಕ್/ಸ್ಕೂಟರ್/ಮೊಟಾರುಬೈಕ್/ಮೊಪೆಡ್, ಕಾರು/ಜೀಪು/ವ್ಯಾನ್, ಕುಟುಂಬ ಪ್ರಧಾನವಾಗಿ ಬಳಸುವ ಧಾನ್ಯ, ಮೊಬೈಲ್ ನಂಬ್ರ.
ಜನಗಣತಿ 2021: ಎರಡು ದಿನಗಳ ತರಬೇತಿ
ಜನಗಣತಿ 2021ರ ಅಂಗವಾಗಿ ಕಾಸರಗೋಡು ಜಿಲ್ಲೆಯ ಜಿಲ್ಲಾ ಮಟ್ಟದ ಸಿಬ್ಬದಿಗೆ, ಪ್ರಭಾರ ಅಧಿಕಾರಿಗಳಿಗೆ ಎರಡು ದಿನಗಳ ತರಬೇತಿ ನಡೆಯಿತು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಗಣದಲ್ಲಿ ನಡೆದ ತರಬೇತಿಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸ್ವಾತಂತ್ರ್ಯಾನಂತರ ದೇಶದಲ್ಲಿ ನಡೆಯುವ 8ನೇ ಜನಗಣತಿ 2021ರಲ್ಲಿ ಪೂರ್ಣಗೊಳ್ಳಲಿದೆ. ರಾಜ್ಯ ಸರಕಾರ ನೀಡಿದ ಆದೇಶವನ್ನು ಪಾಲಿಸಿದರೆ ಸಾಕು. ಕೇರಳದಲ್ಲಿ ರಾಜ್ಯ ಸರಕಾರ ಜನಗಣನತಿ ನಡೆಸಬೇಕಿದ್ದು, ಇತರ ಮಾಹಿತಿಸಂಗ್ರಹಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ನುಡಿದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ವಲಯ ಕಂದಾಯಧಿಕಾರಿ ಕೆ.ರವಿಕುಮರ್, ಜಿಲ್ಲಾ ಮಟ್ಟದ ಸಿಬ್ಬಂದಿ, ತಹಸೀಲ್ದಾರರು, ಜನಗಣಣತಿ ಗುಮಾಸ್ತರು ಮೊದಲಾದವರು ಉಪಸ್ಥಿತರಿದ್ದರು. ಜನಗಣತಿ ಜಿಲ್ಲಾ ನೋಡೆಲ್ ಅಧಿಕಾರಿ ಸಜಿ ಲಾಲ್ ತರಗತಿ ನಡೆಸಿದರು.