ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿನ 256 ಹೊಸ ಪ್ರಕರಣಗಳು ದಾಖಲಾಗಿದ್ದು ಶುಕ್ರವಾರದ ವೇಳೆಗೆ ಒಟ್ಟು ಕೊರೊನಾ ಸೋಂಕು ಪೀಡಿತರ ಸಂಖ್ಯೆ 2022 ಕ್ಕೆ ಏರಿಕೆಯಾಗಿದೆ.
ಗ್ರೀನ್ ವಿಚ್ ಕಾಲಮಾನ 00.00 ಗಂಟೆಗೆ ಒಟ್ಟು ಕೊರೊನಾ ಸೋಂಕು ಪೀಡಿತರ ಸಂಖ್ಯೆ 2022 ರಷ್ಟಿದ್ದು ಈ ಸೋಂಕಿಗೆ ಬಲಿಯಾದವರ ಸಂಖ್ಯೆ 13ಕ್ಕೇರಿದೆ. ಕೊರೋನಾ ವೈರಸ್ ಭೀತಿಯಿಂದಾಗಿ ಕೊರಿಯಾದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.
ಇಲ್ಲಿನ ಡಯಾಗು ಮತ್ತು ಉತ್ತರ ಜಿಯೋಂಗ್ ಸ್ಯಾಂಗ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಸೋಂಕು ತಗುಲಿರುವುದು ವರದಿಯಾಗಿದೆ. ಚೀನಾ ಹೊರತುಪಡಿಸಿದರೆ, ದಕ್ಷಿಣ ಕೊರಿಯಾ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರವಾಗಿದೆ.