HEALTH TIPS

ಆಲಂಕೂಡ್ಲುನಲ್ಲಿ ಫೆ.21ರಂದು ಮಹಾಶಿವರಾತ್ರಿ


        ಬದಿಯಡ್ಕ: ನೆಕ್ರಾಜೆ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.21ರಂದು ಮಹಾಶಿವರಾತ್ರಿ ಉತ್ಸವವು ಬಲಿವಾಡುಕೂಟದೊಂದಿಗೆ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
     ಬೆಳಗ್ಗೆ 7.30ಕ್ಕೆ ಉಷಃಪೂಜೆ, ಗಣಪತಿ ಹೋಮ, 9 ಗಂಟೆಯಿಂದ ವಿಶ್ವಪ್ರಿಯಾ ಮಹಿಳಾ ಭಜನಾ ಮಂಡಳಿಯ ಏತಡ್ಕ ವಲಯ ಸದಸ್ಯರಿಂದ ಭಜನೆ, 10.30ರಿಂದ ಧಾರ್ಮಿಕ ಸಭೆಯಲ್ಲಿ ವಾಗ್ಮಿ ಪ್ರವೀಣ್ ಕೋಡೋತ್ ಧಾರ್ಮಿಕ ಭಾಷಣ ಮಾಡುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ಭೋಜನ, ಅಪರಾಹ್ನ ಪುಂಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದವರಿಂದ `ಭಾರ್ಗವ ವಿಜಯ' ಮಕ್ಕಳ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಸಂಜೆ 6 ರಿಂದ ನೆಕ್ರಾಜೆ ಶ್ರೀ ಗೋಪಾಲಕೃಷ್ಣ ಭಜನಾ ಸಂಘ, ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘ, ಪೈಕ ಶ್ರೀರಾಮ ಭಜನಾ ಸಂಘ, ಬಾಲಡ್ಕ ಶ್ರೀ ಅಯ್ಯಪ್ಪ ಭಜನಾ ಸಂಘ, ಚೂರಿಪ್ಪಳ್ಳ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘ ಇವರಿಂದ ಭಜನೆ, ರಾತ್ರಿ 9 ಗಂಟೆಗೆ ಮಹಾಪೂಜೆ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries