ಕಾಸರಗೋಡು: ಪಿಲಿಕುಂಜೆ ಶ್ರೀ ಐವರ್ ಭಗವತೀ ಕ್ಷೇತ್ರದಲ್ಲಿ ಫೆ.23 ರಿಂದ 28 ರ ವರೆಗೆ ಕಳಿಯಾಟ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಫೆ.23 ರಂದು ಬೆಳಗ್ಗೆ 8 ಕ್ಕೆ ಗಣಪತಿ ಹೋಮ, ರಕ್ತೇಶ್ವರಿ, ಬ್ರಹ್ಮರಕ್ಷಸ್ಸು, ಗುಳಿಗ ಎಂಬಿವುಗಳಿಗೆ ತಂಬಿಲ ಹಾಗು ಶುದ್ಧಿ ಕಲಶ, ಪ್ರಸಾದ ವಿತರಣೆ, ಸಂಜೆ 3.30 ಕ್ಕೆ ಆನೆ ಚಪ್ಪರ ಅಲಂಕರಿಸುವುದು ಮತ್ತು ಆನೆ ಚಪ್ಪರ ಏರಿಸುವುದು. 5.30 ಕ್ಕೆ ಭಂಡಾರ ಕ್ಷೇತ್ರದಿಂದ ಭಂಡಾರ ಹೊರಡುವುದು, 6.30 ಕ್ಕೆ ಕಲಶಾಟ್, ಕೊಡಿಯೆಲೆ ಇಡುವುದು, ರಾತ್ರಿ 9 ರಿಂದ ಸುತ್ತು ದೀಪಾಲಂಕೃತವಾದ ಪ್ರತಿಷ್ಠಾ ಪೂಜೆ, ನೃತ್ಯನೃತ್ತಗಳು, ಬಹುಮಾನ ವಿತರಣೆ, 10 ರಿಂದ ಮರುಪುತ್ತರಿ ಉತ್ಸವ, ಪ್ರಸಾದ ವಿತರಣೆ ನಡೆಯುವುದು.
ಫೆ.24 ರಿಂದ 27 ರ ವರೆಗೆ ವಿವಿಧ ದೈವಗಳ ವೆಳ್ಳಾಟ, ದೈವ ಮೊದಲಾದವು ನಡೆಯಲಿದೆ. ಫೆ.28 ರಂದು ಬೆಳಗ್ಗೆ 6 ರಿಂದ ಕಾಳಪುಲಿಯನ್ ದೈವ, 6.30 ಕ್ಕೆ ಕಾರ್ಯಕ್ಕಾರನ್, 7.30 ಕ್ಕೆ ಪುಲಿಕಂಡನ್ ದೈವ, 10 ಕ್ಕೆ ವೇಟ್ಟಕೊರುಮಗನ್ ದೈವ, 11 ಕ್ಕೆ ಮಂತ್ರಮೂರ್ತಿ ದೈವ, ಸಂಜೆ 3 ಕ್ಕೆ ಪುಲ್ಲೂರಾಳಿ ದೈವ, 5 ಕ್ಕೆ ವಿಷ್ಣುಮೂರ್ತಿ ದೈವ, 5.30 ಕ್ಕೆ ಪುಲ್ಲೂರ್ಣನ್ ದೈವ, 6 ಕ್ಕೆ ಭಜನೆ, ರಾತ್ರಿ 8.30 ಕ್ಕೆ ಪುಷ್ಪಾರ್ಚನೆ ಪೂಜೆ, 9 ಕ್ಕೆ ಹೆಣ್ಣು ಮಕ್ಕಳ ಚಪ್ಪರ ಮುಹೂರ್ತ, ಬಲಿಯುತ್ಸವ, ಬಿಂಬದರ್ಶನ, ಪ್ರಸಾದ ವಿತರಣೆ, ಕೂಟ್ಟ ಅಡಯಾಳಂ, ಪುಲ್ಲೂರ್ಣನ್ ದೈವದ ಹೂಮುಡಿ ಶ್ರದ್ಧಾಭಕ್ತಿಯೊಂದಿಗೆ ಅವರೋಹಣಗೈದು ಕಾರ್ನವರ್ ಕಾಳಿಮಾಡದಲ್ಲಿ ಸಮರ್ಪಿಸುವುದರೊಂದಿಗೆ ಉತ್ಸವ ಮುಕ್ತಾಯಗೊಳ್ಳಲಿದೆ. 2 ಗಂಟೆಗೆ ಭಂಡಾರ ನಿರ್ಗಮನ.