ಪೆರ್ಲ:ಶ್ರೀ ಸುಬಾಯ ದೇವಸ್ಥಾನ ಕಾಟುಕುಕ್ಕೆ, ಶ್ರೀ ಸುಬಹ್ಮಣ್ಯೇಶ್ವರ ಪ್ರಸಾದಿತ ಭಜನಾ ಸಂಘ ಕಾಟುಕುಕ್ಕೆ ಆಶ್ರಯದಲ್ಲಿ ಭಜನಾ ಸಂಘದ 75ನೇ
ವಾರ್ಷಿಕೋತ್ಸವ ಫೆ.29ರಿಂದ ಮಾರ್ಚ್ 3ರವರೆಗೆ 75 ಗಂಟೆಗಳ ಅಖಂಡ ಭಜನೆ, ಧಾರ್ಮಿಕ ಸಭೆ, ಗೌರವಾರ್ಪಣೆ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಫೆ.29ರಂದು ಸಂಜೆ 4ಕ್ಕೆ ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಉಚ್ಚಿಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು.ದೇವಳದ ಆಡಳಿತ ಮೊಕ್ತೇಸರ ನಾರಾಯಣನ್ ಅಧ್ಯಕ್ಷತೆ ವಹಿಸುವರು.ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದ ಅಧ್ಯಕ್ಷ ವಸಂತ ಪೈ ಬದಿಯಡ್ಕ, ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ತು ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಚೇತನಾ, ಡಾ.ಕೃಷ್ಣ ಭಟ್ ಸೂರ್ಡೇಲು ಉಪಸ್ಥಿತರಿರುವರು. ಹರಿದಾಸದೀಕ್ಷೆ ಪಡೆದ ಶ್ರೀ ಮಧ್ವಾಧೀಶ ವಿಠಲದಾಸ (ರಾಮಕೃಷ್ಣ ಕಾಟುಕುಕ್ಕೆ), ಭಜನಾ ಸಂಘದ ಹಿರಿಯ ಸದಸ್ಯರಾದ ಪುರುಷೋತ್ತಮ ಶೆಟ್ಟಿ ಪುತ್ತೂರು, ನಾರಾಯಣ ರೈ ಪಡ್ಡಂಬೈಲು, ವಿಶ್ವನಾಥ ರೈ ಗುರ್ಮೆ, ವಿಶ್ವನಾಥ ರೈ ಪಡ್ಡಂಬೈಲು, ಕೋಚಣ್ಣ ರೈ ಗುರ್ಮೆ, ಸದಾಶಿವ ರೈ ಬಾಳೆಮೂಲೆ, ಪದ್ಮನಾಭ ಆಚಾರ್ಯ ಪರಗುಡ್ಡೆ, ಗಂಗಾಧರ ಬಲ್ಯಾಯ ಪಟ್ಲ ಇವರಿಗೆ ಗೌರವಾರ್ಪಣೆ ನಡೆಯಲಿದೆ.ಸಂಜೆ 6.30ಕ್ಕೆ ಅಖಂಡ ಭಜನೆ ಆರಂಭವಾಗಲಿದೆ. ಮಾರ್ಚ್ 1ರಂದು ಬೆಳಗ್ಗೆ 7.50ಕ್ಕೆ ಉಷಾಪೂಜೆ, 11ಕ್ಕೆ ಆರಂಭವಾಗುವ ಧಾರ್ಮಿಕ ಸಭೆಯಲ್ಲಿ ಕರಿಂಜ ಶ್ರೀ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಕಾಟುಕುಕ್ಕೆ ದೇವಳದ ಮಾಜಿ
ಆಡಳಿತ ಮೊಕ್ತಸರ ಸಚ್ಚಿದಾನಂದ ಖಂಡೇರಿ ಅಧ್ಯಕ್ಷತೆ ವಹಿಸುವರು.ಕೃಷ್ಣಪ್ರಸಾದ ರೈ ಪೆರಡಾಲ, ಜಗನ್ನಾಥ ರೈ ಪೆರಡಾಲಗುತ್ತು, ಧರ್ಮಸ್ಥಳ ಭಜನಾ ಪರಿಷತ್ತು ಅಧ್ಯಕ್ಷ ಬಾಲಕೃಷ್ಣ ಪಂಜ, ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ, ಭಜನಾ ಪರಿಷತ್ತು ಪುತ್ತೂರು ಅಧ್ಯಕ್ಷ ಧನ್ಯಕುಮಾರ್ ರೈ ಉಪಸ್ಥಿತರಿರುವರು.ಮಧ್ಯಾಹ್ನ 12.20ಕ್ಕೆ ಬಲಿವಾಡುಕೂಟ, ಮಹಾಪೂಜೆ, ರಾತ್ರಿ 7.50ಕ್ಕೆ ರಂಗಪೂಜೆ ನಡೆಯಲಿದೆ. ಮಾರ್ಚ್ 2ರಂದು ಬೆಳಗ್ಗೆ 7.50ಕ್ಕೆ ಉಷಾಪೂಜೆ 11ಕ್ಕೆ ಆರಂಭವಾಗುವ ಧಾರ್ಮಿಕ ಸಭೆಯಲ್ಲಿ ಒಡಿಯೂರು
ಶ್ರೀಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲೊದ್ದಾರೆ.ಕಾಟುಕುಕ್ಕೆ ದೇವಳದ ಮಾಜಿ ಆಡಳಿತ ಮೊಕ್ತಸರ ಸಿ.ಸಂಜೀವ ರೈ ಅಧ್ಯಕ್ಷತೆ ವಹಿಸುವರು.ನಲ್ಕ ಮಹಾಬಲ ರೈ ಕೊಡ್ಡೋಲು, ಕಾಟುಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ವಿದ್ಯಾವರ್ಧಕ ಸಂಘ
ಸಂಚಾಲಕ ಮಿತ್ತೂರು ಶ್ರೀ ಪುರುಷೋತ್ತಮ ಭಟ್, ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುಕುಂದ ನಾಯಕ್ ಶೇಣಿ ತೋಟದಮನೆ ಉಪಸ್ಥಿತರಿರುವರು.
ಮಾರ್ಚ್ 3ರಂದು ಬೆಳಗ್ಗೆ 7.50ಕ್ಕೆ ಉಷಾಪೂಜೆ,11ಕ್ಕೆ ಆರಂಭವಾಗುವ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ಕ್ಷೇತ್ರದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
ಆಶೀರ್ವಚನ ನೀಡಲಿದ್ದಾರೆ.ಕಾಟುಕುಕ್ಕೆ ದೇವಳದ ಮಾಜಿ ಆಡಳಿತ ಮೊಕ್ತಸರ ವಿಷ್ಣುಪ್ರಸಾದ್ ಪಿಲಿಂಗಲ್ಲು ಅಧ್ಯಕ್ಷತೆ ವಹಿಸುವರು.ಕಾಸರಗೋಡು ಪ್ರಸಾದ್ ಗ್ರೂಪ್ ಆಫ್ ಹೋಟೆಲ್ ಮಾಲಕ ರಾಮಪ್ರಸಾದ್, ಕರ್ನಾಟಕ ಜೂನಿಯರ್ ಕಾಲೇಜು ಮಾಣಿ ನಿವೃತ್ತ ಶಿಕ್ಷಕ ಗಂಗಾಧರ ರೈ ಪಡ್ಡಂಬೈಲುಗುತ್ತು, ಮುಂಬಯಿ ಉದ್ಯಮಿ ರಾಧಾಕೃಷ್ಣ ರೈ ಪಡ್ಡಂಬೈಲುಗುತ್ತು ಉಪಸ್ಥಿತರಿರುವರು.