ಮಂಜೇಶ್ವರ: ಕಳೆದ ಜನವರಿಯಲ್ಲಿ ನುರಿತ ವೈದ್ಯರ ತಂಡದಿಂದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಮಾಡಿ ಹಾಗೂ ಹಲವಾರು ವರ್ಷಗಳಿಂದ ವಾರ್ಷಿಕೋತ್ಸವದ ಮೂಲಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡಿ ಜನ ಮೆಚ್ಚುಗೆ ಪಡೆದ ಗೆಳೆಯರ ಬಳಗ ಬಲ್ಲಂಗುಡೇಲು ಇದರ ಈ ವರ್ಷದ ವಾರ್ಷಿಕೋತ್ಸವವು ಮಾ.3 ಮತ್ತು 4 ರಂದು ಬಲ್ಲಂಗುಡೇಲು ಶ್ರೀ ಪಾಡಾಂಗರೇ ಭಗವತೀ ಕ್ಷೇತ್ರದ ವಠಾರದಲ್ಲಿ ಜರಗಲಿದೆ.
ಮಾ.3 ರಂದು ರಾತ್ರಿ 8 ಗಂಟೆಗೆ ಕಲ್ಲಡ್ಕ ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ `ಗೀತಾ ಸಾಹಿತ್ಯ ಸಂಭ್ರಮ' ವಿನೂತನ ಶೈಲಿಯ ಕಾರ್ಯಕ್ರಮ ಹಾಗೂ ರಾತ್ರಿ 10 ಗಂಟೆಗೆ ಭ್ರಾಮರಿ ಕಲಾವಿದರು ಉಪ್ಪಳ ಇವರ ತಂಡದವರಿಂದ ರಂಗನಟ ತುಳು ಸಿನಿಮಾ ಕಲಾವಿದ ಅರುಣ್ ಚಂದ್ರ ಬಿ.ಸಿ. ರೋಡ್ ನಿರ್ದೇಶನದ `ಮುರಳಿ ಈ ಪಿರ ಬರೋಲಿ' ಎಂಬ ಹಾಸ್ಯಮಯ ನಾಟಕ ಜರಗಲಿದೆ.
ಮಾ.4 ರಂದು ರಾತ್ರಿ 7.30 ಕ್ಕೆ ಸ್ಥಳೀಯ ಪ್ರತಿಭಾವಂತ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ರಾತ್ರಿ 8.30 ಕ್ಕೆ ಝಮ್-ಝಮ್ ಲೈಟಿಂಗ್ಸ್ ಹೊಸಂಗಡಿ ಇವರ ಪ್ರಾಯೋಜಕತ್ವದಲ್ಲಿ ಇಂಚರ ಮೆಲೋಡೀಸ್ ಕಡಂಬಾರ್ ಮಂಜೇಶ್ವರ ಸಾದರ ಪಡಿಸುವ `ಸಂಗಿತ ಸಂಜೆ' ಕಾರ್ಯಕ್ರಮ ಜರಗಲಿದೆ. ಮಾ.5 ರಂದು ಸಂಜೆ ಗಂಟೆ 7 ರಿಂದ ನ್ಯಾ.ಎಂ.ದಾಮೋದರ ಶೆಟ್ಟಿಯವರ ಸೇವ ರೂಪದಲ್ಲಿ ಹೆಸರಾಂತ ನುರಿತ ಕಲಾವಿದರ ಕೂಡುವಿಕೆಯಿಂದ `ಅತಿಕಾಯ ಮೋಕ್ಷ' ಎಂಬ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಎಂದು ಗೆಳೆಯರ ಬಳಗ ಬಲ್ಲಂಗುಡೇಲು ಇದರ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಕರಿಬೈಲ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರ : ಮಾ.3 ರಂದು ರಾತ್ರಿ 8 ಗಂಟೆಗೆ ಗೀತಾ ಸಾಹಿತ್ಯ ಸಂಭ್ರಮ, 10 ಗಂಟೆಗೆ ಮುರಳಿ ಈ ಪಿರ ಬರೊಲಿ ನಾಟಕ, ಮಾ.4 ರಂದು ರಾತ್ರಿ7.30 ಕ್ಕೆ ನೃತ್ಯ ಕಾರ್ಯಕ್ರಮ ಹಾಗೂ ರಾತ್ರಿ 9 ಗಂಟೆಗೆ ಸಂಗೀತ ಸಂಜೆ, ಮಾ.5 ರಂದು ಸಂಜೆ 7 ಗಂಟೆಗೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.