ಉಪ್ಪಳ: ಚೆರುಗೋಳಿಯ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನಡಾವಳಿ ಉತ್ಸವವು ಮಾರ್ಚ್ 3ರಿಂದ 9ರವರೆಗೆ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕೊಂಡೆವೂರು ಇವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಹಾಗೂ ಬ್ರಹ್ಮಶ್ರೀ ಬಂಬ್ರಾಣ ಶಂಕರನಾರಾಯಣ ಕಡಮಣ್ಣಾಯರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮಾರ್ಚ್ 3ರಂದು ಸಂಜೆ 3.30 ರಿಂದ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಪರಿಸರದಿಂದ ಹೊರೆಕಾಣಿಕೆ ಮೆರೆವಣಿಗೆ ಆಗಮಿಸಲಿದೆ. ಸಂಜೆ 5.30ರಿಂದ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, 5.45ಕ್ಕೆ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ, 6.00ಕ್ಕೆ ಉಗ್ರಾಣ ಮೂಹೂರ್ತ, 6.30ಕ್ಕೆ ಶ್ರೀ ಸತ್ಯನಾರಾಯಣ ಐಲ ಇವರ ಸಂಗೀತ ನಿರ್ದೇಶನದಲ್ಲಿ ಸೌಮ್ಯ ಪ್ರವೀಣ್ ಕಾಸರಗೋಡು ರಚಿಸಿದ ಶ್ರೀ ಚೀರುಂಬಾ ಭಗವತೀ ಸ್ತುತಿಯ ಅಂಬಾ ಚೀರುಂಬಾ ಭಕ್ತಿಗೀತೆಯ ಧ್ವನಿ ಸುರುಳಿ ಬಿಡುಗಡೆ, ಸಂಜೆ 6.15ರಿಂದ ಆಚಾರ್ಯ ವರಣ, ದೇವತಾ ಪ್ರಾರ್ಥನೆ, ಪುಣ್ಯಾಹ ಅಂಕುರಾರೋಹಣ ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಬಲಿ, ಕುಂಡ ಶುದ್ಧಿ ರಾತ್ರಿ 8.00ಕ್ಕೆ ಮಹಾಪೂಜೆ ನಡೆಯಲಿದೆ.
4ರಂದು ಬೆಳಗ್ಗೆ 5.30ರಿಂದ ಗಣಪತಿ ಹೋಮ, ಅಂಕುರ ಪೂಜೆ, ತ್ರಿಕಾಲ ಪೂಜೆ, ಬಿಂಬ ಶುದ್ಧಿ, ಪ್ರಾಯಶ್ಚಿತ್ತ ಹೋಮ, ಸ್ಥಳ ಶುದ್ಧಿ, ಕಲಶಾಭಿಷೇಕ, 6.30ರಿಂದ ಭಜನಾ ಸಂಕೀರ್ತನೆ, 12.00ಕ್ಕೆ ಮಹಾಪೂಜೆ 4.15ಕ್ಕೆ ಗಣ್ಯರಿಂದ ದೀಪ ಬೆಳಗಿಸುವಿಕೆ, 4.30ರಿಂದ ಭಜನಾ ಸಂಕೀರ್ತನೆ 5.30ರಿಂದ ಆಯುಧ (ಪೀಠ) ಪರಿಗ್ರಹ, ಜಲಾಧಿವಾಸ ಕ್ರಿಯೆ, ತ್ರಿಕಾಲ ಪೂಜೆ, ಕುಂಡ ಶುದ್ಧಿ, ರಾತ್ರಿ 8.00ಕ್ಕೆ ಮಹಾಪೂಜೆ, 8.15ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 5 ರಂದು ಬೆಳಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ತ್ರಿಕಾಲ ಪೂಜೆ, ಶ್ವಶಾಂತಿ, ಅದ್ಭುತ ಶಾಂತಿ, ಚೋರ ಶಾಂತಿ, ದಹನ ಪ್ರಾಯಶ್ಚಿತ್ತ ಹೋಮದ ಕಲಶಾಭಿಷೇಕ, 6.30ರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ 4.15ಕ್ಕೆ ದೀಪ ಬೆಳಗಿಸುವಿಕೆ, 4.30ರಿಂದ ಭಜನಾ ಸಂಕೀರ್ತನೆ, 5.30ರಿಂದ ತ್ರಿಕಾಲ ಪೂಜೆ, ಅಂಕುರ ಪೂಜೆ, ಕುಂಡ ಶುದ್ಧಿ ರಾತ್ರಿ 8.00ಕ್ಕೆ ಮಹಾಪೂಜೆ, 8.15ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾರ್ಚ್ 6ಕ್ಕೆ ಬೆಳಗ್ಗೆ 5.30ರಿಂದ ಗಣಪತಿ ಹೋಮ, ಅಂಕುರ ಪೂಜೆ, ತ್ರಿಕಾಲ ಪೂಜೆ, ತತ್ವ ಹೋಮ ತತ್ವ ಕಲಶಪೂಜೆ, ಅನುಜ್ಞಾ ಕಲಶ ಪೂಜೆ, ಕಲಶಾಭಿಷೇಕ, ಅನುಷ್ಠಾ ಬಲಿ, 6.30ರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ 4.15ಕ್ಕೆ ದೀಪ ಬೆಳಗಿಸುವಿಕೆ, 4.30ರಿಂದ ಭಜನಾ ಸಂಕೀರ್ತನೆ, 5.30ರಿಂದ ತ್ರಿಕಾಲ ಪೂಜೆ, ಅಂಕುರ ಪೂಜೆ, ಬಿಂಬ ಶುದ್ಧಿ, ಕಲಶ ಪೂಜೆ, ಅಧಿವಾಸ ಹೋಮ, ಕುಂಡ ಶುದ್ಧಿ, ಸಂಜೆ 5.30ರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಮಾರ್ಚ್ 7ರಂದು ಬೆಳಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ಸಂಹಾರ ತತ್ವ ಹೋಮ, ಸಂಹಾರ ತತ್ವಕಲಶ ಪೂಜೆ, ಕುಂವೇರ ಕರ್ಕರಿ ಪೂಜೆ, ಜಲದ್ರೊಣೆ, ಶಮ್ಯ ಪೂಜೆ, ನಿದ್ರಾ ಕಲಶ ಪೂಜೆ, ವಿದ್ವೇಶ್ವರ ಕಲಶ ಪೂಜೆ, ಬ್ರಹ್ಮ ಕಲಶಪೂಜೆ, ಪರಿಕಲಶಪೂಜೆ, ಜೀವ ಕಲಶ ಪೂಜೆ, ಜೀವೋದ್ವಾಸನೆ ಕ್ರಿಯೆ ಶಮ್ಯೆಯಲ್ಲಿ ಮಹಾಪೂಜೆ, 6.30ರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಸಂಜೆ 4.15ಕ್ಕೆ ದೀಪ ಬೆಳಗಿಸುವಿಕೆ, 4.30ರಿಂದ ಭಜನಾ ಸಂಕೀರ್ತನೆ, 5.30ರಿಂದ ಪುಣ್ಯಾಹ, ಪ್ರಾಸಾದ ಶುದ್ಧಿ, ರಾಕÉ್ಷೂೀಘ್ನ ಹೋಮ, ವಾಸ್ತು, ಹೋಮ, ವಾಸ್ತು ಬಲಿ, ಬಿಂಬ ಶುದ್ಧಿ ಕ್ರಿಯೆ, ಅಧಿವಾಸ, ಹೋಮ, ದ್ಯಾನಾಧಿವಾಸ, ಕಲಶಧಿವಾಸ, ಅಧಿವಾಸ ಬಲಿ, ಪೀಠಧಿವಾಸ, ಪ್ರಸಾಚವಾಧಿವಾಸ, ಮಂಡಲ ಪೂಜೆ, ಕುಂಡ ಶುದ್ಧಿ ಸಂಜೆ 5.30ರಿಂದ ಧಾರ್ಮಿಕ ಸಭೆ, ರಾತ್ರಿ 8.00ಕ್ಕೆ ಮಹಾಪೂಜೆ, 8.15ರಿಂದ ಸಾರಾಂಗಿ ಓರ್ಕೆಸ್ಟ್ರಾ ಉಪ್ಪಳ ಇವರಿಂದ ಸಂಗೀತ ರಸ ಮಂಜರಿ ನಡೆಯಲಿದೆ.
ಮಾರ್ಚ್ 8.ರಂದು ಪ್ರಾತಃಕಾಲ 5.00ರಿಂದ ಗಣಪತಿ ಹೋಮ, ಶಯ್ಯೆಯಲ್ಲಿ ಪೂಜೆ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ, 7.30ಕ್ಕೆ ಮೀನ ಲಗ್ನ ಶುಭ ಮೂರ್ಹೂತದಲ್ಲಿ ಶ್ರೀ ಭಗವತೀ ದೇವಿಯ ಪ್ರತಿಷ್ಠೆ, ಉಪದೈವಗಳ ಪ್ರತಿಷ್ಠೆ, ಬ್ರಹ್ಮಕಲಶಭೀಷೇಕ, ಪ್ರತಿಷ್ಠಾ ಬಲಿ, 6.30ರಿಂದ ಭಜನಾ ಸಂಕೀರ್ತನೆ, 10.00ಕ್ಕೆ ಶ್ರೀ ಬಿ.ವಿ ರವಿರಾಜ ಬಲ್ಲಾಳರರು ಬಂಗಾಡಿ ಅರಮನೆ ಅವರಿಗೆ ಪೂರ್ಣಕುಂಭ ಸ್ವ್ವಾಗತ, 11.00 ಗಂಟೆಗೆ ಸಾಮೂಹಿಕ ಲಲಿತಾ ಸಹಸ್ರನಾಮ ಪಠಣ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ, 1.00ರಿಂದ ರಾಗ ತರಂಗ (ಶ್ರೀ ವೈಕುಂಠ ಕಾಮತ್ ಕುಂಬಳೆ ಮತ್ತು ಬಳಗದವರಿಂದ) ಮಧ್ಯ್ಯಾಹ್ನ 2.30 ರಿಂದ ನೃತ್ಯ ಭಜನೆ ವಿವಿಧ ಮಹಿಳಾ ಭಾಂಧವರಿಂದ, ಸಂಜೆ 4.45ರಿಂದ ಮೇಘಾ ತಿರುವಾದಿರ ನೃತ್ಯ, ಸಂಜೆ 5.30ರಿಂದ ಮಹಿಳಾ ಸಂಗಮ, ಸಂಜೆ 7.00ರಿಂದ ನಡಾವಳಿ ಉತ್ಸವಕ್ಕೆ ಪ್ರಾರ್ಥನೆ, ಸಾಯಂಕಾಲ 7.30ಕ್ಕೆ ಶ್ರೀ ಭಂಡಾರದ ಮೆರೆವಣಿಗೆ, ರಾತ್ರಿ 8.00ಕ್ಕೆ ಬಲಿ ಉತ್ಸವ, ರಾತ್ರಿ 9.00ರಿಂದ ಲೇಬರ್ಸ್ ಮಲೆಮಾಟ್ ತ್ರೀಕರಿಪುರ ಇವರಿಂದ ಕಳಿಂ ಕುಟ್ಟಿ ತೈಯಂ, ಎಂಬ ಮಳೆÀಯಾಳ ನಾಟಕ ಜರಗಳಿದೆ. ಮಾರ್ಚ್ 9ರಂದು ಪ್ರಾತಃಕಾಲ 4.30ಕ್ಕೆ ಬಲಿ ಉತ್ಸವ, 5.30ಕ್ಕೆ ಶ್ರೀ ವಿಷ್ಣು ಮೂತಿ ದೈವದ ಕುಳಿಚ್ಚಾಟಂ, ವಿಷ್ಣುಮೂರ್ತಿ ದೈವದ ಕೋಲ, 1.00 ಗಂಟೆಗೆ ಮಹಾಪೂಜೆ, 1.30ರಿಂದ ಶ್ರೀ ವಿ.ಟಿ ಸುಧಾಕರನ್ ಮತ್ತು ತಂಡದವರಿಂದ ಭಕ್ತಿಗಾನ ಮೇಳ, ಅಪರಾಹ್ನ 3.00ರಿಂದ ಶ್ರೀ ಮಲರಾಯ ಮತ್ತು ಬಂಟ ದೈವಗಳ ನೇಮೋತ್ಸವ ಬಳಿಕ ಶ್ರೀ ಗುಳಿಗನ ಕೋಲ ನಡೆಯಲಿದೆ. ಬ್ರಹ್ಮಕಲಶೋತ್ಸವದ ಎಲ್ಲ ದಿನಗಳಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂರ್ತಪಣೆ ನಡೆಯಲಿದೆ.