ಬದರಿನಾಥ: ಉತ್ತರ್ ಖಂಡ್ ರಾಜ್ಯದ ಚತುರ್ಧಾಮಗಳಲ್ಲಿ ಒಂದಾಗಿರುವ ಬದರಿನಾಥ್ ದೇವಾಲಯ ಏಪ್ರಿಲ್ 30 ರಿಂದ ಭಕ್ತಾಧಿಗಳಿಗೆ ತೆರೆಯಲಿದೆ. ಶಿವ ಆರಾದನೆಯ ಪುಣ್ಯಕ್ಷೇತ್ರವನ್ನು ತೀವ್ರ ಚಳಿ ಹಾಗೂ ಹಿಮದ ಕಾರಣದಿಂದಾಗಿ ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಈ ಕ್ಷೇತ್ರವನ್ನು ಮುಚ್ಚಲಾಗಿತ್ತು.
ಹಿಮವನ್ನು ತೆರವುಗೊಳಿಸಿದ ಬಳಿಕ ಹನುಮನ್ ಚಾಟಿ ಹಾಗೂ ಬದರಿನಾಥ ಮಂದಿರವನ್ನು ಸಂಪರ್ಕಿಸುವ ಹೆದ್ದಾರಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತದೆ.ರಸ್ತೆ ತೆರವುಗೊಳಿಸುವ ಕಾರ್ಯಾಚರಣೆ ಮಾಡುತ್ತಿರುವುದರಿಂದ ಸದ್ಯ ಸೇನೆ ಹಾಗೂ ಇಂಡೋ ಟಿಬಿಟೆನ್ ಬಾರ್ಡರ್ ಪೆÇಲೀಸರ ವಾಹನಗಳು ಇಲ್ಲಿ ಸಂಚರಿಸುತ್ತಿವೆ.
ಸಮುದ್ರ ಮಟ್ಟಕ್ಕಿಂತ 10 ಸಾವಿರದ 279 ಅಡಿ ಎತ್ತರದಲ್ಲಿರುವ ಬದರಿನಾಥ ದೇವಾಲಯ ವರ್ಷದಲ್ಲಿ ಆರು ತಿಂಗಳು ಮಾತ್ರ ತೆರೆದಿರುತ್ತದೆ. ಚಳಿಗಾಲದ ಸಂದರ್ಭದಲ್ಲಿ ಮುಚ್ಚಲ್ಪಟ್ಟಿರುತ್ತದೆ.