HEALTH TIPS

ರಾಜ್ಯದಲ್ಲಿ 340 ವಾಹನ ಅಪಘಾತ `ಬ್ಲ್ಯಾಕ್ ಸ್ಪೋಟ್'ಗಳು


                 
       ಕಾಸರಗೋಡು: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ಅಪಘಾತಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಅಪಘಾತ ವಲಯವನ್ನು ಗುರುತಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ 15 ಅಪಘಾತ ಬ್ಲ್ಯಾಕ್ ಸ್ಪೋಟ್‍ಗಳಿವೆ. ರಾಜ್ಯದಲ್ಲಿ ಒಟ್ಟು ಅಪಘಾತ ಬ್ಲ್ಯಾಕ್ ಸ್ಪೋಟ್‍ಗಳ ಸಂಖ್ಯೆ 340 ಎಂದು ರಸ್ತೆ ಸುರಕ್ಷಾ ಕೌನ್ಸಿಲ್ ಗುರುತಿಸಿದೆ.
        ಕಾಸರಗೋಡು ಜಿಲ್ಲೆಯ ಬ್ಲ್ಯಾಕ್ ಸ್ಪೋಟ್‍ಗಳು : ಕಾಸರಗೋಡು ಜಿಲ್ಲೆಯಲ್ಲಿ 15 ವಾಹನ ಅಪಘಾತ ವಲಯಗಳನ್ನು ರಸ್ತೆ ಸುರಕ್ಷಾ ಕೌನ್ಸಿಲ್ ಗುರುತಿಸಿದೆ. ಜಿಲ್ಲೆಯ ಕುಂಜತ್ತೂರು ಮಾಡ, ಹೊಸಂಗಡಿಯ ವಾಮಂಜೂರು, ಉಪ್ಪಳದ ಹಿದಾಯತ್‍ನಗರ, ಉಪ್ಪಳ ಗೇಟ್, ಮಂಗಲ್ಪಾಡಿ, ಚೆರ್ಕಳ, ಉದುಮದ ಲಲಿತ್ ರೆಸೋರ್ಟ್ ಪರಿಸರ, ಪಾಲಕುನ್ನು, ತೃಕ್ಕನ್ನಾಡ್, ಪೆÇಯಿನಾಚಿ, ಪೆರಿಯಾ ಬಜಾರ್, ಐಂಙõÉೂೀತ್, ನೀಲೇಶ್ವರ,  ಕರುವಾಚ್ಚೇರಿ, ಚೆರುವತ್ತೂರು, ತಪಾಸಣಾ ಕೇಂದ್ರ ಪರಿಸರಗಳು ವಾಹನ ಅಪಘಾತಕ್ಕೆ ಹೆಚ್ಚು ಸಾಧ್ಯತೆಯಿರುವ ಬ್ಲ್ಯಾಕ್ ಸ್ಪೋಟ್‍ಗಳನ್ನು ಗುರುತಿಸಲಾಗಿದೆ. ಇದಲ್ಲದೆ ಕಾಸರಗೋಡು ಚಂದ್ರಗಿರಿ, ಹೊಸದುರ್ಗ  ಕೆ.ಎಸ್.ಟಿ.ಪಿ. ರಸ್ತೆಯ ಹಲವು ಪ್ರದೇಶಗಳನ್ನು ಇದರಲ್ಲಿ ಈಗ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ.
       2016-18 ನೇ ವರ್ಷದಲ್ಲಿ ಈ 15 ಅಪಘಾತ ಕೇಂದ್ರಗಳಲ್ಲಿ 215 ವಾಹನ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 59 ಮಂದಿ ಸಾವಿಗೀಡಾಗಿದ್ದಾರೆ. ಈ 15 ಬ್ಲ್ಯಾಕ್ ಸ್ಪೋಟ್ ಕೇಂದ್ರಗಳಲ್ಲಿ ಉಚಿತವಾಗಿ ಟೀ-ಕಾಫಿ ವಿತರಿಸುವ ಬೂತ್‍ಗಳನ್ನು ಸ್ಥಾಪಿಸುವ ತೀರ್ಮಾನ ಜಿಲ್ಲಾ ಆಡಳಿತೆ ಕೈಗೊಂಡಿದೆ. ಅದಕ್ಕಾಗಿ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಾಂಸ್ಕøತಿಕ ಸಂಸ್ಥೆಗಳ ಸಹಾಯ, ಸಹಕಾರವನ್ನು ಜಿಲ್ಲಾಡಳಿತೆ ಬಯಸಿದೆ.
ರಾಜ್ಯದಲ್ಲಿ 340 ಬ್ಲ್ಯಾಕ್ ಸ್ಪೋಟ್‍ಗಳು : ಕೇರಳ ರಾಜ್ಯದಲ್ಲಿ ಅತೀ ಹೆಚ್ಚು ವಾಹನ ಅಪಘಾತಗಳು ಸಂಭವಿಸುವ ಬ್ಲ್ಯಾಕ್ ಸ್ಪೋಟ್‍ಗಳನ್ನು ಕೇಂದ್ರ ಸಾರಿಗೆ ಸಚಿವಾಲಯದ ಲೆಕ್ಕಾಚಾರದಲ್ಲಿ ಗುರುತಿಸಿದೆ.
ಈ ಪೈಕಿ 232 ಅತೀ ಹೆಚ್ಚು ಸಾಧ್ಯತೆ ಹೊಂದಿರುವ ಕೇಂದ್ರಗಳಾಗಿವೆ ಎಂದೂ, 108 ಕೇಂದ್ರಗಳು ಅಪಘಾತ ಸಾಧ್ಯತೆ ಹೊಂದಿರುವ ಕೇಂದ್ರಗಳಾಗಿವೆ ಎಂದೂ ಗುರುತಿಸಲಾಗಿದೆ.
      ಅತೀ ಹೆಚ್ಚು ಅಪಘಾತ ಸಂಭವಿಸಲು ಸಾಧ್ಯತೆಯಿರುವ ಕೇಂದ್ರಗಳ ಪೈಕಿ 157 ರಾಷ್ಟ್ರೀಯ ಹೆದ್ದಾರಿಯಲ್ಲಿವೆ. ರಾಜ್ಯ ಹೆದ್ದಾರಿಯಲ್ಲಿ 49 ಮತ್ತು ಇತರ ರಸ್ತೆಗಳಲ್ಲಿ ಇಂತಹ 26 ಕೇಂದ್ರಗಳಿವೆ ಎಂದು ಕೇಂದ್ರ ಸಾರಿಗೆ ಇಲಾಖೆ ಗುರುತಿಸಿ ಯಾದಿಯಲ್ಲಿ ಸೇರ್ಪಡೆಗೊಳಿಸಿದೆ. ಇಂತಹ ಕೇಂದ್ರಗಳಲ್ಲಿ ಅತೀ ಹೆಚ್ಚಿನ ನಿಗಾ ವಹಿಸಬೇಕಾಗಿದೆ. ಮಾತ್ರವಲ್ಲ, ಅಪಘಾತ ನಿಯಂತ್ರಿಸಲು ಅಗತ್ಯದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಕೇಂದ್ರ ಸರಕಾರ ಕೇರಳ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿದೆ. ಅದಕ್ಕೆ ಅಗತ್ಯದ ಸಹಾಯದ ಭರವಸೆಯನ್ನೂ ಕೇಂದ್ರ ಭೂಸಾರಿಗೆ ನಿಗಮ ಕೇರಳಕ್ಕೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries