HEALTH TIPS

ಉದನೇಶ್ವರ ಯಕ್ಷಗಾನ ಕಲಾಸಂಘದ 39ನೇ ವಾರ್ಷಿಕೋತ್ಸವ


      ಬದಿಯಡ್ಕ: ಪ್ರಾಮಾಣಿಕ ಸೇವೆ, ನೈಜ ಭಕ್ತಿಗೆ ಭಗವಂತನ ಆಶೀರ್ವಾದ, ಅನುಗ್ರಹ ಸದಾ ಇರುತ್ತದೆ. ತೋರಿಕೆಯ ಭಕ್ತಿಯಿಂದ, ಹರಕೆಯ  ನೆಪದಿಂದ   ಎಂದೂ ಏನನ್ನೂ ಪಡೆಯಲು ಸಾಧ್ಯವಿಲ್ಲ. ಬದಲಾಗಿ ಭಕ್ತಿಯ ಸೇವೆಯನ್ನು ಭಗವಂತ ಸ್ವೀಕರಿಸುತ್ತಾನೆ ಎಂದು ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದ ಅಧ್ಯಕ್ಷ, ಧಾರ್ಮಿಕ ಮುಂದಾಳು  ವಸಂತ ಪೈ ಬದಿಯಡ್ಕ ಅಭಿಪ್ರಾಯಪಟ್ಟರು.
       ಅವರು ಶ್ರೀ ಉದನೇಶ್ವರ ಯಕ್ಷಗಾನ ಕಲಾಸಂಘ ಪೆರಡಾಲ ಇದರ 39ನೇ ವಾರ್ಷಿಕೋತ್ಸದ ಅಂಗವಾಗಿ ಮಹಾಶಿವರಾತ್ರಿಯ ಪುಣ್ಯದಿನದಂದು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ವಠಾರದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
    ಕಲೆಯ ಮೇಲಿನ ಪ್ರೀತಿ ಮತ್ತು ಕಲಾ ಪೆÇೀಷಣೆಗೆ ನೀಡುವ ಪ್ರಾಮುಖ್ಯತೆ ಕಲೆ, ಆ ಮೂಲಕ ಸಂಸ್ಕøತಿಯ ಸಂರಕ್ಷಣೆ ಮಾಡುವಲ್ಲಿ ಕಲಾಸಂಘ ತೋರುತ್ತಿರುವ ಆಸಕ್ತಿ, ಉತ್ಸಾಹ ಹಾಗೂ ಮಾಡುವ ಕಾರ್ಯ ಶ್ಲಾಘನೀಯ ಎಂದರು.
     ಶ್ರೀ ಉದನೇಶ್ವರ  ಭಕ್ತವೃಂದದ ಅಧ್ಯಕ್ಷ ತಿರುಪತಿ ಕುಮಾರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ ಕುದ್ವ ಅತಿಥಿಯಾಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಭೂತಾರಾಧಕ ಡಾ.ರವೀಶ ಪರವ ಪಡುಮಲೆ ಹಾಗೂ ಯಕ್ಷಗಾನ ಕಲಾವಿದ ಮೂಲಡ್ಕ ನಾರಾಯಣ ಮಣಿಯಾಣಿ ಇವರನ್ನು ಸಮ್ಮಾನಿಸಲಾಯಿತು. ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ವೆಂಕಟಕೃಷ್ಣ ಮಕ್ಕಿಕ್ಕಾನ  ಮತ್ತು ಬ್ಲಾಕ್ ಪಂಚಾಯತಿ ಮಾಜಿ ಸದಸ್ಯ ನ್ಯಾಯವಾದಿ.ನರಸಿಂಹ ಶೆಣೈ ಬದಿಯಡ್ಕ, ಪೆರಡಾಲ ಶ್ರೀ ಕ್ಷೇತ್ರದ ಟ್ರಸ್ಟಿ ಜಗನ್ನಾಥ ರೈ ಶುಭಾಶಂಸನೆಗೈದರು. ರಾಮ ಮುರಿಯಂಕೂಡ್ಲು ಸ್ವಾಗತಿಸಿ, ಪದ್ಮನಾಭ ಶೆಟ್ಟಿ ವಳಮಲೆ ವಂದಿಸದರು.  ಉದನೇಶ್ವರ ಸೇವಾ ಸಮಿತಿ ಕಾರ್ಯದರ್ಶಿ ನಿರಂಜನ ರೈ ಕಾರ್ಯಕ್ರಮ ನಿರೂಪಿಸಿದರು. ವಾರ್ಷಿಕೋತ್ಸವದ ಪ್ರಯುಕ್ತ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿಯವರ ನಿರ್ದೇಶನದಲ್ಲಿ ಕದಂಬ ಕೌಶಿಕೆ, ಪದ್ಯಾಣ ಗಣಪತಿ ಭಟ್ಟರ ಸಾರಥ್ಯದಲ್ಲಿ ಸೀತಾ ಕಲ್ಯಾಣ ಮತ್ತು ಹವ್ಯಾಸಿ ಭಾಗವತರಾದ ತಲ್ಪನಾಜೆ ವೆಂಕಟ್ರಮಣ ಭಟ್ ಇವರ ಸಾರಥ್ಯದಲ್ಲಿ ಮೈರಾವಣ ಕಾಳಗ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries