ಪೆರ್ಲ: ಗಡಿನಾಡ ಧ್ವನಿ, ಗಡಿನಾಡ ಶ್ರೆಯೋಭಿವ್ರದ್ಧಿ ಟ್ರಸ್ಟ್ ಆಶ್ರಯದಲ್ಲಿ ಎಪ್ರಿಲ್ 4ರಂದು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದ ನೂತನ ಸಭಾಂಗಣದಲ್ಲಿ ನಡೆಯಲಿರುವ ಕರ್ನಾಟಕ ಗಡಿನಾಡ ಸಮ್ಮೇಳನ ದ ಪೂರ್ವಭಾವಿ ಸಭೆ ಮಾ.1ರಂದು ಮಧ್ಯಾಹ್ನ 1.30ಕ್ಕೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಎಲ್ಲಾ ಕನ್ನಡ ಅಭಿಮಾನಿಗಳು ಭಾಗವಹಿಸಿ ಸಲಹೆ ಸೂಚನೆ ನೀಡಿ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಗಡಿನಾಡ ಧ್ವನಿ, ಗಡಿನಾಡ ಶ್ರೆಯೋಭಿವ್ರದ್ಧಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.