ಬ್ಯಾಂಕಾಕ್: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಕ ರೋಗ ಕೊರೊನಾ ವೈರಸ್ ಗೆ ಕೊನೆಗೂ ಮದ್ದು ಸಿಕ್ಕಿದೆ. 48 ಗಂಟೆಗಳ ಚಿಕಿತ್ಸೆಯಿಂದ ಮಹಿಳೆಯ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡು ಬಂದಿದೆ. 71 ವರ್ಷದ ವೃದ್ಧೆಗೆ ತಗುಲಿದ್ದ ಸೋಂಕು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಥೈಲ್ಯಾಂಡ್ ನಲ್ಲಿ ಕೊರೊನಾ ವೈರಸ್ ಗೆ ವೈದ್ಯರು ಮದ್ದು ಕಂಡು ಹಿಡಿದಿರುವ ಬಗ್ಗೆ ಅಲ್ಲಿನ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಫೆಬ್ರವರಿ.02ರ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ತಜ್ಞವೈದ್ಯ ಕ್ರಿಯೇಂಗ್ ಸ್ಯಾಕ್ ಆಟ್ರಿಪೆÇೀರ್ನ್ ವ್ಯಾನಿಚ್ ಸಿಹಿಸುದ್ದಿ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾದ 71 ವರ್ಷದ ವೃದ್ಧೆಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಆದರೆ, ವೈದ್ಯರು ಎರಡು ದಿನಗಳ ಕಾಲ ನೀಡಿದ ಚಿಕಿತ್ಸೆಯ ಬಳಿಕ ವೃದ್ಧೆಯ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡು ಬಂದಿದೆ.
ಥೈಲ್ಯಾಂಡ್ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿ:
ಕೊರೊನಾ ವೈರಸ್ ಪೀಡಿತ ವೃದ್ಧೆಗೆ 48 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಲಾಯಿತು. ವಿಸ್ಕಿ, ಬ್ರಾಂದಿ, ರಮ್, ಜಿನ್ ಹೀಗೆ ವಿವಿಧ ಬಗೆಯ ಮದ್ಯದ ಜೊತೆ ಹಣ್ಣಿನ ರಸವನ್ನು ಬೆರೆಸಿದ ರೋಗನಿರೋಧಕ ಔಷಧಿಯನ್ನು ನೀಡಲಾಯಿತು. ಈ ಚಿಕಿತ್ಸೆ ನೀಡಿದ ಬಳಿಕ ವೃದ್ಧೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಬೆಡ್ ಮೇಲೆ ಸಹಜವಾಗಿ ಎದ್ದು ಕೂರುವಂತೆ ಆಗಿದೆ. ನಂತರ ಪರೀಕ್ಷೆಗೆ ಒಳಪಡಿಸಿದಾಗ ವೃದ್ಧೆಯಲ್ಲಿ ಕೊರೊನಾ ವೈರಸ್ ಅಂಶ ಇಲ್ಲವೆಂದು ವೈದ್ಯ ಕ್ರಿಯೇಂಗ್ ಸ್ಯಾಕ್ ಆಟ್ರಿಪೆÇೀರ್ನ್ ವ್ಯಾನಿಚ್ ತಿಳಿಸಿದ್ದಾರೆ.
19 ಜನರಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್:
ಥೈಲ್ಯಾಂಡ್ ನಲ್ಲಿ 19 ಜನರಿಗೆ ಕೊರೊನಾ ವೈರಸ್ ತಗಲಿರುವ ಬಗ್ಗೆ ಸ್ಪಷ್ಟವಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಮಹಿಳೆಗೆ ನೀಡಿದ ಮಾದರಿಯಲ್ಲಿ ಉಳಿದ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿದ್ದಾರೆ. ಕೊರೊನಾ ವೈರಸ್ ಗೆ ಮದ್ದು ಪರಿಶೋಧನೆ ನಡೆಸುವುದನ್ನೇ ಆರೋಗ್ಯ ಸಚಿವಾಲಯ ಎದುರು ನೋಡುತ್ತಿದೆ
ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವರು ವುಹಾನ್ ನಿಂದ ಆಗಮಿಸಿದ ವೃದ್ಧೆಯಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ನಿವಾರಣೆ ಆದ ಬೆನ್ನಲ್ಲೇ ಭಾನುವಾರ ಆಸ್ಪತ್ರೆಗೆ ಥೈಲ್ಯಾಂಡ್ ಆರೋಗ್ಯ ಸಚಿವ ಆಂಟಿನ್ ಚರ್ನವಿರ್ಕುಲ್ ಭೇಟಿ ನೀಡಿದರು. ವೃದ್ಧೆಗೆ ಶುಭಾಷಯ ಕೋರಿದ ಸಚಿವರು, ವೈದ್ಯರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಚೀನಾದಲ್ಲಿ 361 ಸಾವು, 16 ಸಾವಿರ ಮಂದಿಗೆ ಸೋಂಕು:
ಚೀನಾದಲ್ಲಿ ಈವರೆಗೂ 361 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ. ಭಾನುವಾರ 2,103 ಜನರಿಗೆ ಸೋಂಕು ತಗಲಿದ್ದು, ಇದರಿಂದ ಸೋಂಕಿತರ ಸಂಖ್ಯೆ ಚೀನಾ ಒಂದರಲ್ಲೇ 16,600ಕ್ಕೆ ಏರಿಕೆಯಾಗಿದೆ. ಕೊರೊನಾ ವೈರಸ್ ತಗಲಿರುವ 9,618 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ 478 ಸೋಂಕಿತರ ಪರಿಸ್ಥಿತಿ ಚಿಂತಾಜನಕವಾಗಿದೆ. ಜಪಾನ್ ನಲ್ಲಿ 20, ಯುನೈಟೆಡ್ ಸ್ಟೇಟ್ಸ್ ನಲ್ಲಿ 9, ಕ್ಯಾಲಿಫೆÇೀರ್ನಿಯಾದಲ್ಲಿ 4, ವಾಶಿಂಗ್ ಟನ್ ಮತ್ತು ಅರಿಜೋನಾದಲ್ಲಿ 2 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.