ಮಂಜೇಶ್ವರ: ಎಸ್ ಎನ್ ಡಿಪಿ ಯೋಗ ಕುಂಜತ್ತೂರು ಮಾಡ ಶಾಖೆಯ ವಾರ್ಷಿ ಮಹಾಸಭೆ ಮಾಡದಲ್ಲಿ ಜರುಗಿತು. ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಗಣೇಶ್ ಪಾರಕಟ್ಟ ಉದ್ಘಾಟಿಸಿದರು. ಶ್ರೀದೈವ ಪಾತ್ರಿ ರಾಜ ಬೆಳ್ಚಪ್ಪಾಡ ದೀಪ ಬೆಳಗಿಸಿದರು. ಯೂನಿಯನ್ ಉಪಾಧ್ಯಕ್ಷ ಎ.ಟಿ ವಿಜಯನ್ ಮುಖ್ಯ ಭಾಷಣ ಮಾಡಿದರು. ಯೂನಿಯನ್ ಅಧ್ಯಕ್ಷ ನಾರಾಯಣ ಮಂಜೇಶ್ವರ, ತೀಯಾ ಸಮಾಜದ ಹಿರಿಯರಾದ ನೀಲನ್ ಮೇಸ್ತ್ರಿ, ಪ್ರಕಾಶ್ ಬಂಗೇರ ಉಪಸ್ಥಿತರಿದ್ದರು.
ಈ ಸಂದರ್ಭ ಕ್ಷೇತ್ರ ಸ್ಥಾನಿಕರ ಹಾಗೂ ಕೋಲಧಾರಿಗಳ ಮಾಸಿಕ ಪಿಂಚಣಿಯನ್ನು 5ಸಾವಿರ ರೂ.ಗೆ ಏರಿಸುವಂತೆ ಸಭೆಯಲ್ಲಿ ಠರಾವು ಮಂಡಿಸಲಾಯಿತು. ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪ್ರಕಾಶ್ ಬಂಗೇರ ಅಧ್ಯಕ್ಷ, ಶಿವಕುಮಾರ್ ಉಪಾಧ್ಯಕ್ಷ, ಶಾಖಾ ಕಾರ್ಯದರ್ಶಿಯಾಗಿ ಕೇಶವ ಮತ್ತು ಸಮಿತಿ ಸದಸ್ಯರಾಗಿ ರಾಮನ್, ಯಜ್ಷೇಶ್, ಮುರಳೀಧರನ್, ಬಾಲಕೃಷ್ಣನ್, ಉಷಾ, ನೀಲನ್ ಮೇಸ್ತ್ರಿ, ಜನಾರ್ದನ, ಲೋಕೇಶ್ ಅವರನ್ನು ಆಯ್ಕೆ ಮಾಡಲಾಯಿತು.