ಕಾಸರಗೋಡು: ಕೋಟಿಕುಳಂ ರೈಲ್ವೇ ಮೇಲ್ಸೇತುವೆಯ ನಿರ್ಮಾಣ ಕಾರ್ಯ ಸ್ಥಗಿತಗೊಳ್ಳಲು ಕಾರಣ ನಿರ್ಮಾಣವೆಚ್ಚದ ಶೇ.50 ವೆಚ್ಚವನ್ನು ರಾಜ್ಯ ಸರಕಾರವು ನೀಡದ ಕಾರಣವೆಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಆರೋಪಿಸಿದ್ದಾರೆ.
2005-2006 ಆರ್ಥಿಕ ವರ್ಷದಲ್ಲಿ ಪ್ರಾರಂಭಗೊಳ್ಳಬೇಕಾದ ನಿರ್ಮಾಣ ಕಾರ್ಯ ಇದುವರೆಗೂ ಮುಂದೂಡಲು ರಾಜ್ಯ ಸರಕಾರದ ಅನಾಸ್ಥೆಯೇ ಪ್ರಮುಖ ಕಾರಣವೆಂದು ಶ್ರೀಕಾಂತ್ ತಿಳಿಸಿದರು. ಮೇಲ್ಸೇತುವೆಯ ನಿರ್ಮಾಣ ಕಾರ್ಯಕ್ಕೆ ತಗಲುವ ವೆಚ್ಚದಲ್ಲಿ 50 ಶತಮಾನಕ್ಕಿಂತ ಹೆಚ್ಚಾಗಿ ಕೇಂದ್ರ ರೈಲ್ವೇ ಇಲಾಖೆ ವಹಿಸುತ್ತದೆ. ಬಾಕಿ ಬರುವಂತಹ ವೆಚ್ಚವನ್ನು ರಾಜ್ಯ ಸರಕಾರ ಭರಿಸಬೇಕಾದದ್ದು. ಈ ಮೊತ್ತವನ್ನು ರೈಲ್ವೇಗೆ ರಾಜ್ಯ ಸರಕಾರವು ಇದುವರೆಗೂ ಹಸ್ತಾಂತರಿಸಲಿಲ್ಲ. 2005-2006 ಆರ್ಥಿಕ ವರ್ಷದಿಂದಲೇ ಕೋಟಿಕುಳಂ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕಾಗಿ ರೈಲ್ವೇ ಸಜ್ಜಾಗಿತ್ತು. 2010-2011ಆರ್ಥಿಕ ವರ್ಷದಿಂದ ರೈಲ್ವೇ 5,47,90 ಕೋಟಿ ರೂಪಾಯಿ ನಿಗಾ ಇರಿಸಿತ್ತು. ಆದರೆ ರಾಜ್ಯ ಸರಕಾರವು ಇದಕ್ಕೆ ಪೂರಕವಾದ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. 2018-2019 ವರ್ಷದಲ್ಲಿ 16.70 ಕೋಟಿ ರೂಪಾಯಿ ನಿರ್ಮಾಣ ವೆಚ್ಚಕ್ಕಾಗಿ ನಿಗದಿಪಡಿಸಿತ್ತು. ಇದಕ್ಕೆ ದೇಶೀಯ ರೈಲ್ವೇ ಸುರಕ್ಷಾ ನಿ„ಯಿಂದ 5.31 ಕೋಟಿ ರೂಪಾಯಿಯನ್ನ ಇರಿಸಲಾಗಿತ್ತು. ನಿರ್ಮಾಣ ಮೊತ್ತದ ರಾಜ್ಯ ಸರಕಾರದ ಪಾಲು 5.47ಕೋಟಿ ರೊಪಾಯಿ ರೈಲ್ವೇಗೆ ಹಸ್ತಾಂತರಿಸಬೇಕಾಗಿತ್ತು. ಆದರೆ ಇದಕ್ಕಾಗಿ ಎಡರಂಗ ಸರಕಾರ ತಯಾರಾಗಲಿಲ್ಲ. ಯೋಜನೆಯು ಜಾರಿಗೊಳಿಸಲು 2005-2006 ರಿಂದ 2018-2019 ರ ವರೆಗೆ ನಿರ್ಮಾಣ ಮೊತ್ತವನ್ನು ಇರಿಸಲಾಗಿದ್ದು ರಾಜ್ಯ ಸರಕಾರದ 50 ಶೇಕಡಾ ಪಾಲು ನೀಡದುದರಿಂದ ನಿರ್ಮಾಣ ಕಾರ್ಯಗಳು ನಡೆಯಲಿಲ್ಲ. ಇನ್ನೂ ನಿರ್ಮಾಣ ನಡೆಯಲು ಎಸ್ಟಿಮೇಟ್ ನವೀಕರಿಸಬೇಕಾಗಿದೆ. ರಾಜ್ಯ ಸರಕಾರದ ಪಾಲನ್ನು ರೈಲ್ವೇಗೆ ನೀಡಿದರೆ ನಿರ್ಮಾಣ ಕಾರ್ಯವೆಸಗಲು ರೈಲ್ವೇ ಸಿದ್ಧವಾಗಿದೆ.
ನಿಜಸ್ಥಿತಿ ಇದಾದುದರಿಂದ ಮೇಲ್ಸೇತುವೆಯ ನಿರ್ಮಾಣದ ಎಲ್ಲಾ ಮೊತ್ತವನ್ನು ಹಾಗೂ ಖರ್ಚನ್ನು ರಾಜ್ಯ ಸರಕಾರವು ಭರಿಸಬೇಕು. ಅದಕ್ಕಾಗಿ 19 ಕೋಟಿ ರೂಪಾಯಿ ರಾಜ್ಯ ಸರಕಾರ ನಿಗಾ ಇರಿಸಲಾಗಿದೆ ಎಂದೂ ಇದು ರೈಲ್ವೇಯ ತಾಂತ್ರಿಕ ಕಾರಣಗಳಿಂದಾಗಿ ನಿರ್ಮಾಣ ಕಾರ್ಯಗಳನ್ನು ಪ್ರಾರಂಭಗೊಳಿಸಲು ಸಾದ್ಯವಾಗಿಲ್ಲವೆಂದು ಉದುಮ ಶಾಸಕ ಕೆ.ಕುಂಞÂರಾಮನ್ ಅವರ ಆರೋಪ ಆಧಾರ ರಹಿತವಾಗಿದೆ ಎಂದು ಶ್ರೀಕಾಂತ್ ವ್ಯಕ್ತಗೊಳಿಸಿದರು.
ಅಪೆÇ್ರೀಚ್ ರೋಡ್ ಕಾಮಗಾರಿ ನಿರ್ಮಿಸಬೇಕಾದದ್ದು ರಾಜ್ಯ ಸರಕಾರದ ಹೊಣೆಗಾರಿಕೆಯಾಗಿದ್ದು ಆ ಕೆಲಸ ಕಾರ್ಯಗಳನ್ನು ಇನ್ನೂ ಪ್ರಾರಂಭಗೊಳಿಸಲಿಲ್ಲ. ರಾಜ್ಯ ಸರಕಾರದ ಅಡಚಣೆಗಳನ್ನು ಮರೆಯಾಗಿರಿಸಿಕೊಂಡು ಉದುಮ ಶಾಸಕರು ಅಪಪ್ರಚಾರ ನಡೆಸುತಿದ್ದಾರೆ. ರೈಲ್ವೇ ಮೇಲ್ಸೇತುವೆಯ ಕೆಲಸ ಕಾರ್ಯಗಳಿಗೆ ಅಡಚಣೆಗಳನ್ನು ಉಂಟುಮಾಡಿದ್ದಲ್ಲಿ ರಾಜ್ಯ ಸರಕಾರಕ್ಕೆ ವಿರುದ್ಧವಾಗಿ ಬೃಹತ್ ಪ್ರತಿಭಟನೆಗಳಿಗೆ ನೇತೃತ್ವ ನೀಡುವೆವು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.