ಮಧೂರು: ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸನ್ನಿದಾನಂಗಳವರ ತತ್ಕರ ಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿದಾನಂಗಳವರು ಮಾರ್ಚ್ 6 ಮತ್ತು 7 ರಂದು ಎರಡು ದಿನಗಳ ಕಾಲ ಇತಿಹಾಸ ಪ್ರಸಿದ್ಧವಾದ ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನದಲ್ಲಿ ಮೊಕ್ಕಾಂ ಹೂಡಲಿರುವರು.
ಪೂಜ್ಯ ಶೃಂಗೇರಿ ಜಗದ್ಗುರುಗಳ ಮಧೂರು ವಾಸ್ತವ್ಯದ ಸಂದರ್ಭದಲ್ಲಿ ಧೂಳಿ ಪಾದಪೂಜೆ, ಆಶೀರ್ವಚನ ಮಂತ್ರಾಕ್ಷತೆ ಮೊದಲಾದ ಕಾರ್ಯಕ್ರಮಗಳು ನಡೆಯಲಿದ್ದು ಇದನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶೃಂಗೇರಿ ಜಗದ್ಗುರು ಪೀಠದ ಅನುಯಾಯಿಗಳಾದ ವಿವಿಧ ಸಮಾಜ ಬಾಂಧವರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಕ್ಕಾಗಿ ಮಧೂರು ಕ್ಷೇತ್ರದಲ್ಲಿ ವಿಶೇಷ ಸಭೆಯನ್ನು ನಡೆಸಲಾಯಿತು.
ಮಧೂರು ದೇವಸ್ಥಾನದ ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಅವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀಕೃಷ್ಣ ಉಪಾಧ್ಯಾಯರು ಸ್ವಾಮೀಜಿಯವರ ಆಗಮನದ ಬಗ್ಗೆ ವಿವರಣೆ ನೀಡಿದರು. ಬಿ.ಮಹಾಲಿಂಗಯ್ಯ, ಅಳಿಕೆ ಶಂಕರನಾರಾಯಣ ಭಟ್, ನಾರಾಯಣಯ್ಯ, ಎ.ಸುಬ್ರಹ್ಮಣ್ಯ ಶರ್ಮಾ, ವಸಂತ್‍ರಾಜ್ ಎ, ಉಮೇಶ್ ನಾೈಕ್, ಗೋಪಾಲ ನಾೈಕ್, ಮಹಾಲಿಂಗ ನಾೈಕ್, ಸತೀಶ್, ಬಲರಾಮ ಭಟ್, ಸಂತೋಷ್ ಮಧೂರು, ಎಸ್.ಎನ್.ಮಯ್ಯ, ರಾಧಾಕೃಷ್ಣ ಮಯ್ಯ, ಅನಂತ ರಾಮನ್, ಮಂಜುನಾಥ ಕಾಮತ್, ಗಣೇಶ ಭಟ್ ನೀರ್ಚಾಲು, ಕೆ.ಜಗದೀಶ್ ಕೂಡ್ಲು, ಗುರು ಪ್ರಸಾದ್ ಕೋಟೆಕಣಿ ಮೊದಲಾದವರು ಅಭಿಪ್ರಾಯ ಮಂಡಿಸಿದರು.
ಶೃಂಗೇರಿ ಪೀಠಕ್ಕೆ ಸಂಬಂಧಿಸಿದ ಕಾಸರಗೋಡು ಜಿಲ್ಲೆಯ ವಿವಿಧ ಸಮುದಾಯದವರನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಳ್ಳಲಾಯಿತು. ಪ್ರಭಾಶಂಕರ ಮಾಸ್ತರ್ ಸ್ವಾಗತಿಸಿ, ಎ.ಮನೋಹರ ವಂದಿಸಿದರು. ಅಯ್ಯಪ್ಪ ನಾೈಕ್ ಮಧೂರು ಕಾರ್ಯಕ್ರಮ ನಿರೂಪಿಸಿದರು.