ಬದಿಯಡ್ಕ: ಕುಂಬ್ಡಾಜೆ ಗ್ರಾಮದ ಗೋಸಾಡದಲ್ಲಿರುವ ಶ್ರೀ ಮಹಿಷಮರ್ದಿನಿ ದೇವಾಲಯದ ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ.6ರಿಂದ ಫೆ.12ರ ತನಕ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸುಮಾರು 2500 ವರ್ಷಗಳಷ್ಟು ಅತೀ ಪುರಾತನವಾದ ಕ್ಷೇತ್ರವು ನವೀಕರಣಗೊಂಡು ಶ್ರೀಮಹಿಷಮರ್ದಿನಿ ಅಮ್ಮನವರ ಹಾಗೂ ಪರಿವಾರ ದೇವತೆಗಳ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ತುಳು ಲಿಪಿಯಲ್ಲಿರುವ ಪುರಾತನ ಶಿಲಾಶಾನವೊಂದು ಈ ದೇವಾಲಯದ ಗರ್ಭಗುಡಿಯ ವಾಯುವ್ಯ ದಿಕ್ಕಿನಲ್ಲಿರುವುದು ವಿಶೇಷತೆಯಾಗಿದೆ. ಈ ದೇವಾಲಯದಲ್ಲಿ ಶ್ರೀ ಮಹಿಷಮರ್ದಿನಿ ಅಮ್ಮನವರು ಪ್ರಧಾನ ದೇವತೆಯಾಗಿದ್ದಾರೆ. ಅಲ್ಲದೇ ಶ್ರೀಗಣಪತಿ ದೇವರು, ಶಾಸ್ತಾರ ಮತ್ತು ದಕ್ಷಿಣಾಮೂರ್ತಿ ಉಪದೇವರುಗಳಾಗಿವೆ. ಶ್ರೀ ಕ್ಷೇತ್ರದ ಸಮೀಪದಲ್ಲಿಯೇ ನಾಗದೇವರ ಬನ, ಶ್ರೀ ರಕ್ತೇಶ್ವರೀ, ಧೂಮಾವತೀ ಹಾಗೂ ಮಹಾವಿಷ್ಣು ದೈವಗಳು ಕೂಡ ಶ್ರೀ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ನೆಲೆಗೊಂಡಿದೆ.
ಫೆ.6ರಂದು ಗಣಪತಿ ಹವನ, ಉಗ್ರಾಣ ತುಂಬಿಸುವುದು, ಭಜನೆ, ಮಹಾಪೂಜೆ, ಸಂಜೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯುವುದು. ಫೆ.7ರಂದು ಸಂಜೆ ವೈದಿಕ ಕಾರ್ಯಕ್ರಮಗಳು ನಡೆಯುವುದು. ಸಂಜೆ ನಡೆಯುವ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಉದ್ಘಾಟನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ನಿರ್ವಹಿಸುವರು. ಕಾಣಿಯೂರು ಮಠದ ಶ್ರೀಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿ, ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್, ವಸಂತ ಪೈ ಬದಿಯಡ್ಕ ಮತ್ತಿತರರು ಭಾಗವಹಿಸುವರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ನಾಟ್ಯರಂಜನಿ ಪ್ರದರ್ಶನಗೊಳ್ಳಲಿದೆ.
ಫೆ.8ರಂದು ವೈದಿಕ ಕಾರ್ಯಕ್ರಮ, ಸಂಜೆ ದುರ್ಗಾನಮಸ್ಕಾರ ಪೂಜೆ, ಅಂಕುರ ಪೂಜೆ, ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸುವರು. ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಗೋಪಿನಾಥನ್ ನಾಯರ್, ಡಾ. ಭಾಸ್ಕರ ರಾವ್ ಅಡೂರು, ಡಾ. ಶ್ರೀನಿಧಿ ಸರಳಾಯ, ಸುರೇಶ್ ಕುಮಾರ್ ಶೆಟ್ಟಿ, ಹರಿನಾರಾಯಣ ಎಸ್. ಉಪಸ್ಥಿತರಿರುವರು. ಒ.ಎಸ್.ಸತೀಶ್ ಕೊಡಕ್ಕರ ಧಾರ್ಮಿಕ ಭಾಷಣ ಮಾಡುವರು. ಗಣ್ಯರು ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ತಿರುವಾದಿರ, ಯಕ್ಷಗಾನ ಬಯಲಾಟ, ಕರ್ನಾಟಕ ಶಾಸ್ತ್ರೀಯ ಸಂಗೀತ, ನೃತ್ಯ ವೈವಿಧ್ಯ, ಮಿಮಿಕ್ರಿ, ತುಳು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.9ರಂದು ಬೆಳಗ್ಗೆ ವೈದಿಕ ಕಾಯಕ್ರಮಗಳು, ನಾಗ ಪ್ರತಿಷ್ಠೆ, ಸಂಜೆ ಮಹಾ ಸುದರ್ಶನ ಹೋಮ, ಆಶ್ಲೇಷ ಬಲಿ, ಅಂಕುರಪೂಜೆ ನಡೆಯಲಿದೆ. ಬೆಳಗ್ಗೆ 10ಕ್ಕೆ ನಡೆಯುವ ಮಾತೃ ಸಮಾವೇಶದಲ್ಲಿ ವಸಂತಿ ಟೀಚರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸುವರು. ಸಾಧ್ವಿ ಶ್ರೀಶ್ರೀ ಮಾತನಾಂದಮಯೀ ಆಶೀರ್ವಚನ ನೀಡುವರು. ಡಾ. ವೀಣಾ ಮಂಜುನಾಥ್, ಸುನೀತಾ ಎಂ.ವಿ., ಡಾ. ವಿದ್ಯಾಮೋಹನ್‍ದಾಸ್ ರೈ, ಈಶ್ವರಿ ಶ್ಯಾಮ ಭಟ್, ಪುಷ್ಪಾ ಬಾಲಕೃಷ್ಣ ಮತ್ತಿತರರು ಉಪಸ್ಥಿತರಿರುವರು. ಆಶಾ ದಿಲೀಪ್ ರೈ ಸುಳ್ಯಮೆ ಧಾರ್ಮಿಕ ಭಾಷಣ ಮಾಡುವರು. ಗಣ್ಯರು ಉಪಸ್ಥಿತರಿರುವರು. ಅಪರಾಹ್ನ ಕರ್ನಾಟಕ ಶಾಸ್ತ್ರೀಯ ಸಂಗೀತ, ಯಕ್ಷಗಾನ ಬಯಲಾಟ, ನೃತ್ಯ ಸಂಭ್ರಮ, ತುಳು ಸಾಮಾಜಿ ನಾಟಕ ಪ್ರದರ್ಶನಗೊಳ್ಳುವುದು.
ಫೆ.10ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮ, ತತ್ತ್ವಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಅಂಕುರಪೂಜೆ, ದುರ್ಗಾನಮಸ್ಕಾರ ಪೂಜೆ, ಅನುಜ್ಞಾಬಲಿ, ಅನುಜ್ಞಾ ಪ್ರಾರ್ಥನೆ ನಡೆಯಲಿದೆ. ಬೆಳಗ್ಗೆ 9.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಒಡಿಯೂರು ಶ್ರೀ ಗುರುದೇವತ್ತ ಸಂಸ್ಥಾಮ್ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಕೆ.ಸುರೇಶ್, ಅಭಿಲಾಷ್ ಕೆವಿ, ಎಂಜಿ ನರಸಿಂಹ ಮೂರ್ತಿ, ಸತೀಶ್ ಶೆಟ್ಟಿ ಉಜಂತೋಡಿ ಉಪಸ್ಥಿರಿರುವರು. ಆದರ್ಶ ಗೋಖಲೆ ಧಾರ್ಮಿಕ ಭಾಷಣ ಮಾಡುವರು. ಗಣ್ಯರು ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಅಪರಾಹ್ನ ಭಕ್ತಿ ಸಂಕೀರ್ತನೆ, ಯಕ್ಷಗಾನ ತಾಳಮದ್ದಳೆ, ಭಕ್ತಿ ರಸಮಂಜರಿ, ರಾತ್ರಿ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳುವುದು.
ಫೆ.11ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, 9.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ನಾರಾಯಣ ರೈ ಕುದ್ಕಾಡಿ ಅಧ್ಯಕ್ಷತೆ ವಹಿಸುವರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಜಯದೇವ ಖಂಡಿಗೆ, ನ್ಯಾಯವಾದಿ ಕೆ.ಶ್ರೀಕಾಂತ್, ಸಿ.ಎಚ್.ಕುಂಞಂಬು, ವಿಘ್ವೇಶ್ವರ ಚಡಗ, ಸುಬ್ರಹ್ಮಣ್ಯ ಕಡಂಬಳಿತ್ತಾಯ, ಚಂದ್ರಶೇಖರ ರಾವ್ ಕಲ್ಲಗ, ಸುರೇಶ್ ಎಸ್.ಶೆಟ್ಟಿ ಉಪಸ್ಥಿತರಿರುವರು. ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಭಾಷಣ ಮಾಡುವರು. ಗಣ್ಯರು ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಅಪರಾಹ್ನ ಯಕ್ಷಗಾನ ತಾಳಮದ್ದಳೆ, ಸಂಜೆ ಹರಿಕಥಾ ಸತ್ಸಂಗ, ನೃತ್ಯೋಪಾಸನಂ, ರಾತ್ರಿ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳುವುದು.
ಫೆ.12ರಂದು ಬೆಳಗ್ಗೆ 8.44ರ ಅನಂತರ 10ರ ಒಳಗೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಮಹಿಷಮರ್ದಿನೀ ಅಮ್ಮನವರ ಪುನ: ಪ್ರತಿಷ್ಠೆ, ಜೀವಕಲಶಾಭಿಷೇಕ, ಪರಿವಾರ ದೇವರುಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಚಂಡಿಕಾ ಹೋಮ ನಡೆಯಲಿದೆ. ರಾತ್ರಿ ಶ್ರೀ ಭೂತಬಲಿ ಉತ್ಸವ ನೆಯಲಿದೆ. ಸಂಜೆ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಸಮಾರೋಪ ಕಾರ್ಯಕ್ರಮದಲ್ಲಿ ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸುವರು. ಎಡನೀರು ಮಠಾಧೀಶ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಎಂ.ಪುರುಷೋತ್ತಮ ಭಟ್ ಮವ್ವಾರು, ಅರವಿಂದ ಕುಮಾರ್ ಅಲೆವೂರಾಯ, ಬ್ರಹ್ಮಶ್ರೀ ಗೋಪಾಲಕೃಷ್ಣ ಭಟ್, ಕೆ.ಎನ್.ಕೃಷ್ಣ ಭಟ್, ವಾಸುದೇವ ಭಟ್ ಉಪ್ಪಂಗಳ, ಅಂಬಾಡಿ ಕಾರ್ನವರ್, ಶ್ರೀನಿವಾಸ ಅಮ್ಮಣ್ಣಾಯ ಉಪಸ್ಥಿತರಿರುವರು. ಹಿರಣ್ಯ ವೆಂಕಟೇಶ ಭಟ್ ಧಾರ್ಮಿಕ ಭಾಷಣ ಮಾಡುವರು. ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಅಪರಾಹ್ನ ಭಕ್ತಿ ಝೇಂಕಾರ, ರಾತ್ರಿ ಯಕ್ಷಗಾನ ಬಯಲಾಟ ನಡೆಯಲಿದೆ.